ನವದೆಹಲಿ,ಜು.31– ಕೇರಳದ ವಯನಾಡಿನಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಕರ್ನಾಟಕದ ಇಬ್ಬರು ಮೃತಪಟ್ಟಿದ್ದು, ಮತ್ತಿಬ್ಬರು ನಾಪತ್ತೆಯಾಗಿದ್ದಾರೆ. ರಕ್ಷಣಾ ಕಾರ್ಯಾಚರಣೆಗೆ ಅಗತ್ಯವಿರುವ ಎಲ್ಲಾ ಬೆಂಬಲ ನೀಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.
ದೆಹಲಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ದುರ್ಘಟನೆಯಲ್ಲಿ ಮೃತರ ಆತಕ್ಕೆ ಶಾಂತಿ ಕೋರಿದ್ದಾರೆ. ಈವರೆಗಿನ ಮಾಹಿತಿ ಪ್ರಕಾರ, ಕರ್ನಾಟಕದ ಇಬ್ಬರ ಜೀವಹಾನಿಯಾಗಿದೆ. ಇಂದು ಬೆಳಿಗ್ಗೆ ತಾವು ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರೊಂದಿಗೆ ದೂರವಾಣಿಯಲ್ಲಿ ಚರ್ಚೆ ನಡೆಸಿದ್ದು, ಕರ್ನಾಟಕ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಭರವಸೆ ನೀಡಿದ್ದೇವೆ ಎಂದರು.
ರಾಜ್ಯದ ಇಬ್ಬರು ಐಎಎಸ್ ಅಧಿಕಾರಿಗಳನ್ನು ಸ್ಥಳಕ್ಕೆ ಕಳುಹಿಸಲಾಗಿದೆ. ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರನ್ನು ನಿಯೋಜಿಸಲಾಗಿದ್ದು, ಕರ್ನಾಟಕದವರ ರಕ್ಷಣೆ ಹಾಗೂ ಪುನರ್‌ವಸತಿಗೆ ಸೂಚಿಸಲಾಗಿದೆ.
- ಹಾಸನದಲ್ಲಿ ಹೃದಯಾಘಾತದಿಂದ ಸರಣಿ ಸಾವುಗಳಿಗೆ ಕಾರಣವೇನು..? ಇಂದು ಜಿಲ್ಲಾಧಿಕಾರಿಗಳ ಕೈಸೇರಲಿದೆ ಅಧ್ಯಯನದ ವರದಿ
- ರಾಜ್ಯ ರಾಜಕಾರಣಕ್ಕೆ ಬರ್ತಾರಾ ಮಲ್ಲಿಕಾರ್ಜುನ ಖರ್ಗೆ..? ಸದ್ದಿಲ್ಲದೆ ನಡೆಯುತ್ತಿದೆಯಾ ಕಾರ್ಯಾಚರಣೆ..?
- ಮದುವೆ ಇಲ್ಲದೆ ತಾಯಿಯಾಗುವ ಮೂಲಕ ನಟಿ ಭಾವನಾ ರಾಮಣ್ಣ ಹೊಸ ಹೆಜ್ಜೆ
- ಕ್ರಿಕೆಟಿಗ ಮೊಹಮ್ಮದ್ ಶಮಿ ವಿರುದ್ಧ ಮಾಜಿ ಪತ್ನಿ ಮತ್ತೊಂದು ಗಂಭೀರ ಆರೋಪ
- ಉತ್ತರ ಪ್ರದೇಶದಲ್ಲಿ ಭೀಕರ ರಸ್ತೆ ಅಪಘಾತ : ಮದುವೆಗೆ ತೆರಳುತ್ತಿದ್ದ ವರ ಹಾಗೂ ಮಕ್ಕಳು ಸೇರಿ 8 ಮಂದಿ ಸಾವು
ಭೂಕುಸಿತ ದೊಡ್ಡ ಆಘಾತವನ್ನು ಉಂಟುಮಾಡಿದೆ ಎಂದು ಹೇಳಿದರು.ರಕ್ಷಣಾ ಕಾರ್ಯಾಚರಣೆಗೆ ಕರ್ನಾಟಕ ಎಲ್ಲಾ ರೀತಿಯ ಸಹಾಯ ನೀಡಲಿದ್ದು, ಯಾವುದೇ ಸಹಾಯ ಕೇಳಿದರೂ ನಾವು ತಯಾರಿದ್ದೇವೆ ಎಂದರು.