Friday, September 20, 2024
Homeಬೆಂಗಳೂರುರಾಜಸ್ಥಾನದಿಂದ ಬೆಂಗಳೂರಿಗೆ ಬಂದಿದ್ದು ನಾಯಿ ಮಾಂಸ ಅಲ್ಲ

ರಾಜಸ್ಥಾನದಿಂದ ಬೆಂಗಳೂರಿಗೆ ಬಂದಿದ್ದು ನಾಯಿ ಮಾಂಸ ಅಲ್ಲ

ಬೆಂಗಳೂರು,ಜು.31-ರಾಜಸ್ಥಾನದಿಂದ 84 ಬಾಕ್ಸ್ ಗಳಲ್ಲಿ ರೈಲಿನ ಮೂಲಕ ತರಲಾಗಿದ್ದ ಮಾಂಸವನ್ನು ಪರಿಶೀಲನೆ ನಡೆಸಲಾಗಿದ್ದು, ಅದು ಕುರಿ ಮಾಂಸ ಎಂದು ಹೈದರಾಬಾದ್‌ ಐಸಿಎಆರ್‌ ಸ್ಪಷ್ಟಪಡಿಸಿದೆ.

ಜುಲೈ 26ರಂದು ವರದಿಯಾಗಿರುವ ಘಟನೆಗೆ ಸಂಬಂಧಪಟ್ಟಂತೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಆಯುಕ್ತ ಕೆ.ಶ್ರೀನಿವಾಸ್‌‍ ಅವರು ಪತ್ರಿಕಾ ಹೇಳಿಕೆ ನೀಡಿದ್ದು, ರೈಲಿನಿಂದ ಬಂದ ಬಾಕ್ಸ್ ಗಳಲ್ಲಿನ ಮಾಂಸವನ್ನು ಪರಿಶೀಲನೆಗೊಳಪಡಿಸಲಾಗಿದೆ. ಮಾದರಿಯನ್ನು ತಪಾಸಣೆ ಮಾಡಿರುವ ಹೈದರಾಬಾದ್‌ನ ಐಸಿಎಆರ್‌ನಲ್ಲಿರುವ ರಾಷ್ಟ್ರೀಯ ಮಾಂಸ ಸಂಶೋಧನಾ ಸಂಸ್ಥೆ ಡಿಎನ್‌ಎ ಮಾಹಿತಿ ಆಧರಿಸಿ ವರದಿ ನೀಡಿದೆ.

ಬಾಕ್‌್ಸನಲ್ಲಿದ್ದ ಮಾಂಸ ಒಎಸ್‌‍ಅರೈಸ್‌‍(ಕುರಿ) ಆಗಿದೆ ಎಂದು ವರದಿ ಖಚಿತಪಡಿಸಿದೆ. ಮೈಕ್ರೊಬಯಾಲಿಜಿ ಸಂಶೋಧನೆ ನಡೆಯುತ್ತಿದ್ದು, ಶುಕ್ರವಾರ ಅಥವಾ ಶನಿವಾರ ವರದಿ ಬರಲಿದ್ದು, ಅದರಲ್ಲಿ ರಾಜಸ್ಥಾನದಿಂದ ಸಾಗಾಣಿಕೆಯಿಂದ ಬಂದ ಮಾಂಸವು ತಿನ್ನಲು ಯೋಗ್ಯವೋ ಇಲ್ಲವೋ ಎಂಬುದು ಖಚಿತವಾಗಲಿದೆ ಎಂದು ತಿಳಿಸಿದ್ದಾರೆ.

RELATED ARTICLES

Latest News