ಸತಾರಾ, ಆ.2-ಎಂಬಿಬಿಎಸ್ ವಿದ್ಯಾರ್ಥಿನಿಯೊಬ್ಬಳನ್ನು ವಸತಿ ಕಟ್ಟಡದ ಮೂರನೇ ಮಹಡಿಯಿಂದ ತಳ್ಳಿ ಸ್ನೇಹಿತ ಕೊಲೆ ಮಾಡಿರುವ ಘಟನೆ ಸತಾರಾ ಜಿಲ್ಲೆಯ ಕರಾದ್‌ನಲ್ಲಿ ನಡೆದಿದೆ.
ಕೃಷ್ಣ ವಿಶ್ವವಿದ್ಯಾಲಯದ ವಿದ್ಯಾರ್ಥಿಯಾಗಿದ್ದ ಬಿಹಾರ ಮೂಲದ 21ವರ್ವದ ಯುವತಿಯನ್ನುಹರಿಯಾಣದ ಸೋನಿಪತ್‌ನ ಧ್ರುವ್ ಚಿಕ್ಕಾರ ಎಂಬಾತ ಕೊಲೆ ಮಾಡಿದ್ದಾನೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇಬ್ಬರೂ ಕಳೆದ ಎರಡು ವರ್ಷಗಳಿಂದ ಒಟ್ಟಿಗೆ ಓದುತ್ತಿದ್ದರು, ಕಳೆದ ಕೆಲವು ದಿನಗಳಿಂದ ಇಬ್ಬರಿಗೂ ಕೆಲ ವಿಷಯದಲ್ಲಿ ಜಗಳವಾಗಿ ದೂರವಾಗಿದ್ದರು ಮೊನ್ನೆಸನ್‌ಸಿಟಿಯಲ್ಲಿರುವ ಫ್ಲಾಟ್‌ಗೆ ಬಂದಿದ್ದರು ಅಲ್ಲಿ ಮತ್ತೆ ಜಗಳವಾಗಿ ಹೊಡೆದಾಡಿದ್ದು ಈ ವೇಳೆ ಹುಡುಗಿಯನ್ನು ಧ್ರುವ್ ಚಿಕ್ಕಾರ ಕಟ್ಟಡದಿಂದ ಕೆಳಗೆ ತಳ್ಳಿದ ಎಂದು ಸತಾರಾ ಪೊಲೀಸ್ ವರಿಷ್ಠಾಧಿಕಾರಿ ಸಮೀರ್ ಶೇಖ್ ಹೇಳಿದ್ದಾರೆ.
ಮೃತರ ತಾಯಿ ಬಿಹಾರದಲ್ಲಿ ವೈದ್ಯರಾಗಿದ್ದು ,ಮಗಳ ಸಾವಿನಿಂದ ಕಳವಳ ಗೊಂಡಿದ್ದಾರೆ. ಆರೋಪಿಯು ತನ್ನ ಮಗಳಿಗೆ ದೈಹಿಕವಾಗಿ ಕಿರುಕುಳ ನೀಡುತ್ತಿದ್ದ ಎಂದು ದೂರನ್ನು ಉಲ್ಲೇಖಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.ಆರೋಪಿಯನ್ನು ಬಂಧಿಸಿದ್ದೇವೆ ಮುಂದಿನ ತನಿಖೆ ನಡೆದಿದೆ ಎಂದು ಎಸ್ಪಿ ಹೇಳಿದರು.