Friday, September 20, 2024
Homeರಾಜ್ಯಮತ್ತೆ ಈರುಳ್ಳಿ ಬೆಲೆ ಏರಿಕೆ

ಮತ್ತೆ ಈರುಳ್ಳಿ ಬೆಲೆ ಏರಿಕೆ

ಬೆಂಗಳೂರು, ಜು.2- ಯಾವುದೇ ಅಡುಗೆ -ತಿಂಡಿ ಮಾಡಬೇಕಾದರೆ ಈರುಳ್ಳಿ ಇದ್ದರೆ ಚಂದ. ಇಲ್ಲ ಅಂದ್ರೆ ನಾಲಿಗೆಗೆ ರುಚಿ ತಟ್ಟುವುದಿಲ್ಲ. ಉತ್ತರ ಕರ್ನಾಟಕ ಹಾಗೂ ಮಹಾರಾಷ್ಟ್ರದಲ್ಲಿ ಮಳೆಯಾಗುತ್ತಿರುವುದರಿಂದ ಬೆಳೆ ನಾಶವಾಗಿದ್ದು, ಬೆಲೆ ಏರಿಕೆಯಾಗಿದೆ.

ಸಾಮಾನ್ಯವಾಗಿ ತರಕಾರಿ ಹಾಗೂ ದಿನಸಿಗಳನ್ನು ಸಾಮಾನ್ಯ ಜನರು ಗ್ರಾಂ.ಗಳಲ್ಲಿ ಖರೀದಿಸುತ್ತಾರೆ. ಆದರೆ, ಈರುಳ್ಳಿಯನ್ನು ಮಾತ್ರ ಕೆಜಿ ಲೆಕ್ಕದಲ್ಲಿ ಕೊಂಡೊಯ್ಯುತ್ತಾರೆ. ಮೊದಲೆಲ್ಲ ಕೆಜಿ ಲೆಕ್ಕದಲ್ಲಿ ಮಾರಾಟವಾಗುತ್ತಿದ್ದ ಈರುಳ್ಳಿ ಈಗ 100 ರೂ.ಗೆ 2 ಕೆಜಿ, 3 ಕೆಜಿ ಅಂತ ಮಾರಾಟ ಮಾಡಲಾಗುತ್ತಿದೆ.

ಹೆಚ್ಚಾಗಿ ಈರುಳ್ಳಿ ಬೆಳೆಯುವ ಉತ್ತರ ಕರ್ನಾಟಕ, ಮಹಾರಾಷ್ಟ್ರದಲ್ಲಿ ಮಳೆಯಾಗುತ್ತಿದ್ದು, ನದಿಗಳು ತುಂಬಿ ಹರಿಯುತ್ತಿದ್ದು, ಜಮೀನುಗಳೆಲ್ಲ ಜಲಾವೃತಗೊಂಡಿವೆ. ಜತೆಗೆ ದಾಸ್ತಾನು ಮಾಡಲಾಗಿದ್ದ ಮಾಲು ಕೂಡ ತೇವಾಂಶ ಹೆಚ್ಚಾಗಿ ಕೊಳೆಯುತ್ತಿದ್ದು , ಮಾರುಕಟ್ಟೆಗೆ ನಿರೀಕ್ಷಿತ ಪ್ರಮಾಣದಲ್ಲಿ ಈರುಳ್ಳಿ ಬರುತ್ತಿಲ್ಲ. ಹಾಗಾಗಿ ಗುಣಮಟ್ಟದ ಈರುಳ್ಳಿ ಮಾರುಕಟ್ಟೆಯಲ್ಲಿ ಕೆಜಿಗೆ 50 ರೂ.ಗೆ ಮರಾಟವಾಗುತ್ತದೆ.

ಕಳೆದ ಕೆಲ ದಿನಗಳ ಹಿಂದೆ 100 ರೂ.ಗೆ 5 ಕೆಜಿ ಮಾರಾಟವಾಗುತ್ತಿದ್ದ ಈರುಳ್ಳಿ ಈಗ 100ರೂ.ಗೆ 2 ಕೆಜಿಗೆ ಮಾರಾಟ ಮಾಡಲಾಗುತ್ತಿದೆ. ಮೊದಲೆಲ್ಲ ಕೆಜಿ ಲೆಕ್ಕದಲ್ಲಿ ಮಾರಾಟ ಹೆಚ್ಚಾಗಿ ನಡೆಯುತ್ತಿತ್ತು. ಇತ್ತೀಚೆಗೆ 100ರೂ.ಗೆ 2 ಕೆಜಿ, ಮೂರು ಕೆಜಿ ಅಂತ ಮಾರಾಟ ಮಾಡಲಾಗುತ್ತಿದೆ.

ಸದ್ಯಕ್ಕೆ ಬಿತ್ತನೆ ಮಾಡಿದ್ದ ಬೆಳೆ ಸಂಪೂರ್ಣವಾಗಿ ನಾಶವಾಗಿದ್ದು, ಮಳೆ ಬಿಡುವು ಕೊಟ್ಟರೆ ಮಾತ್ರ ಹೊಸ ಬೆಳೆ ಮಾರುಕಟ್ಟೆಗೆ ಬರಲಿದೆ. ಅಲ್ಲಿಯವರೆಗೂ ಸದಸ್ಯಕ್ಕೆ ಬೆಳೆ ಇಳಿಯುವ ಸಾಧ್ಯತೆ ಇಲ್ಲ. ಇನ್ನೂ ಹೆಚ್ಚಾಗುವ ಲಕ್ಷಣಗಳು ಕಾಣುತ್ತಿವೆ.ಈ ಹಿನ್ನೆಲೆಯಲ್ಲಿ ಚಿಲ್ಲರೆ ಮಾರಾಟಗಾರರು ಮೂಟೆಗಟ್ಟಲೆ ಈ ರುಳ್ಳಿಯನ್ನು ದಾಸ್ತಾನು ಮಾಡಿಕೊಳ್ಳುತ್ತಿದ್ದಾರೆ.

RELATED ARTICLES

Latest News