Friday, September 20, 2024
Homeರಾಜ್ಯರಾಜ್ಯಪಾಲರ ನೋಟೀಸ್ : ಸಿಎಂ ಸಿದ್ದರಾಮಯ್ಯನವರಿಗೆ ಹೈಕಮಾಂಡ್‌ ನೈತಿಕ ಬೆಂಬಲ

ರಾಜ್ಯಪಾಲರ ನೋಟೀಸ್ : ಸಿಎಂ ಸಿದ್ದರಾಮಯ್ಯನವರಿಗೆ ಹೈಕಮಾಂಡ್‌ ನೈತಿಕ ಬೆಂಬಲ

ಬೆಂಗಳೂರು,ಆ.2- ಮುಡಾ ಹಗರಣದಲ್ಲಿ ರಾಜ್ಯಪಾಲರು ಶೋಕಾಸ್‌‍ ನೋಟಿಸ್‌‍ ನೀಡಿರುವ ಹಿನ್ನಲೆಯಲ್ಲಿ ಹೈಕಮಾಂಡ್‌ ನಾಯಕರು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಕರೆ ಮಾಡಿದ್ದು ನೈತಿಕ ಬೆಂಬಲ ವ್ಯಕ್ತಪಡಿಸಿದ್ದಾರೆ.

ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಹೈಕಮಾಂಡ್‌ನ ಪ್ರಭಾವಿ ನಾಯಕ ಕೆ.ಸಿ.ವೇಣುಗೋಪಾಲ್‌, ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಕರೆ ಮಾಡಿದ್ದು, ನಾವು ನಿಮ ಜೊತೆ ಇದ್ದೇವೆ. ಬಿಜೆಪಿಯ ಷಡ್ಯಂತ್ರವನ್ನು ಸಮರ್ಥವಾಗಿ ಎದುರಿಸೋಣ ಎಂದು ಭರವಸೆ ನೀಡಿದ್ದಾರೆ ಎನ್ನಲಾಗಿದೆ.

ಬಿಜೆಪಿ ಮತ್ತು ಜೆಡಿಎಸ್‌‍ ಪಕ್ಷಗಳು ಪಾದಯಾತ್ರೆ ನಡೆಸುತ್ತಿರುವ ಕುರಿತಂತೆ ಪ್ರಸ್ತಾಪಿಸಿದ ಕೆ.ಸಿ.ವೇಣುಗೋಪಾಲ್‌ ಅದಕ್ಕೆ ಪ್ರತಿಯಾಗಿ ಕಾಂಗ್ರೆಸ್‌‍ ಪಕ್ಷ ನಡೆಸುವ ಹೋರಾಟದಲ್ಲಿ ತಾವು ರಾಜ್ಯಕ್ಕೆ ಬಂದು ಭಾಗವಹಿಸುವುದಾಗಿ ತಿಳಿಸಿದ್ದಾರೆ.

ನಿನ್ನೆ ಸಚಿವ ಸಂಪುಟ ಸಭೆಯಲ್ಲಿ ಕೈಗೊಳ್ಳಲಾದ ನಿರ್ಣಯಗಳ ಬಗ್ಗೆಯೂ ಮಾಹಿತಿ ಪಡೆದುಕೊಂಡಿರುವ ಹೈಕಮಾಂಡ್‌ ಯಾವುದೇ ಸಂದರ್ಭವಾದರೂ ನಾವು ನಿಮ ಜೊತೆ ನಿಲ್ಲುತ್ತೇವೆ ಎಂದಿದ್ದಾರೆಂದು ಹೇಳಲಾಗಿದೆ.

ಇದು ಸಿದ್ದರಾಮಯ್ಯ ಅವರ ಆತವಿಶ್ವಾಸವನ್ನು ಹೆಚ್ಚಿಸಿದ್ದು, ಬಿಜೆಪಿ, ಜೆಡಿಎಸ್‌‍ನ ಪಾದಯಾತ್ರೆ ರಾಜ್ಯಪಾಲರಿಂದ ಅಭಿಯೋಜನೆಗೆ ಪೂರ್ವಭಾವಿ ಅನುಮತಿಯ ಸಾಧ್ಯತೆ ಸೇರಿದಂತೆ ಹಲವು ಒತ್ತಡಗಳಿಂದ ಮುಜುಗರಕ್ಕೊಳಗಾಗಿದ್ದ ಸಿದ್ದರಾಮಯ್ಯನವರಿಗೆ ಹೈಕಮಾಂಡ್‌ನ ಭರವಸೆ ಆತವಿಶ್ವಾಸ ಹೆಚ್ಚಿಸಿದೆ ಎಂದು ಹೇಳಲಾಗಿದೆ.

ನಿನ್ನೆ ನಡೆದ ಸಚಿವರ ಉಪಹಾರಕೂಟ ಹಾಗೂ ಅನಂತರ ನಡೆದ ಸಂಪುಟ ಸಭೆ ನಿರ್ಣಯಗಳು ಸಿದ್ದರಾಮಯ್ಯ ಅವರಲ್ಲಿ ಸಚಿವರು ವಿಶ್ವಾಸ ಇಟ್ಟಿರುವುದನ್ನು ಸಾಬೀತುಪಡಿಸಿದವು.

ದೆಹಲಿಯಲ್ಲಿ ಬಿಜೆಪಿ ಮತ್ತು ಜೆಡಿಎಸ್‌‍ನ ಸಂಸದರು ಮೂಡಾ ನಿವೇಶನ ಹಂಚಿಕೆ ಹಾಗೂ ಮಹರ್ಷಿ ವಾಲೀಕಿ ಅಭಿವೃದ್ಧಿ ನಿಗಮದ ಹಗರಣವನ್ನು ಪ್ರಸ್ತಾಪಿಸಿ ಸಂಸತ್‌ ಮುಂದೆ ಪ್ರತಿಭಟನೆ ನಡೆಸಿದ್ದಲ್ಲದೆ ರಾಜ್ಯಸಭೆ, ಲೋಕಸಭೆಯ ಒಳಗೂ ಪ್ರಸ್ತಾಪ ಮಾಡಿದ್ದರು.

ಈ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರನ್ನು ದೆಹಲಿಗೆ ಕರೆಸಿಕೊಂಡ ಹೈಕಮಾಂಡ್‌ನ ನಾಯಕರು ಪ್ರಕರಣಗಳ ಬಗ್ಗೆ ಸುಧೀರ್ಘ ವಿವರಣೆ ಪಡೆದುಕೊಂಡಿದ್ದರು.ಈಗ ಮತ್ತೂ ಒಂದು ಹೆಜ್ಜೆ ಮುಂದೆ ಹೋಗಿ ಸಂಪುಟ ಸಭೆಯ ನಿರ್ಣಯದ ಬಳಿಕ ಸಿದ್ಧರಾಮಯ್ಯ ಅವರಿಗೆ ಬೆಂಬಲ ಘೋಷಣೆ ಮಾಡಿರುವುದು ನಾಯಕತ್ವವನ್ನು ಗಟ್ಟಿಗೊಳಿಸಿದಂತಾಗಿದೆ. ರಾಜ್ಯಪಾಲರ ನಡವಳಿಕೆ ಹಾಗೂ ಬಿಜೆಪಿ-ಜೆಡಿಎಸ್‌‍ನ ಷಡ್ಯಂತರಗಳಿಗೆ ಕಾಂಗ್ರೆಸ್‌‍ ಪ್ರತ್ಯುತ್ತರಿಸಲಿದೆ ಎಂದು ಮೂಲಗಳು ತಿಳಿಸಿವೆ.

RELATED ARTICLES

Latest News