ಪ್ಯಾರಿಸ್, ಆ.5- ಒಲಿಂಪಿಕ್‌ನ ಪುರುಷರ ಹಾಕಿಯ ಗ್ರೇಟ್ ಬ್ರಿಟನ್ ವಿರುದ್ಧ ಕ್ವಾರ್ಟರ್‌ಫೈನಲ್‌ನಲ್ಲಿ ರೆಡ್ ಕಾರ್ಡ್‌ನಿಂದ ಅಮಾನತುಗೊಂಡಿದ್ದ ಭಾರತ ತಂಡದ ಪ್ರಮುಖ ಡಿಫೆಂಡರ್ ಅಮಿತ್ ರೋಹಿದಾಸ್ ಅವರು ಜರ್ಮನಿ ವಿರುದ್ಧ ಇಂದು ನಡೆಯಲಿರುವ ಸೆಮಿಫೈನಲ್‌ನಿಂದ ಹೊರಗುಳಿದಿದ್ದಾರೆ.
ಇದರಿಂದಾಗಿ ಭಾರತವು ಪ್ರಮುಖ ತಂಡದಲ್ಲಿ ಕೇವಲ 15 ಆಟಗಾರ ಮಾತ್ರ ಹೊಂದಿರುತ್ತಾರೆ, ಇದು 8 ಬಾರಿ ಒಲಿಂಪಿಕ್ ಚಾಂಪಿಯನ್‌ಗಳಿಗೆ ದೊಡ್ಡ ಹಿನ್ನಡೆಯಾಗಿದೆ.
ನಿನ್ನೆ ನಡೆದ ಭಾರತ ಮತ್ತು ಗ್ರೇಟ್ ಬ್ರಿಟನ್ ಪಂದ್ಯದ ವೇಳೆ ಸಂಭವಿಸಿದ ಎಫ್‌ಐಎಚ್ ನೀತಿ ಸಂಹಿತೆಯ ಉಲ್ಲಂಘನೆಗಾಗಿ ಅಮಿತ್ ರೋಹಿದಾಸ್ ಅವರನ್ನು ಒಂದು ಪಂದ್ಯಕ್ಕೆ ಅಮಾನತುಗೊಳಿಸಲಾಗಿದೆ ಎಂದು ಎಫ್‌ಐಎಚ್ ಅಧಿಕೃತ ಹೇಳಿಕೆ ತಿಳಿಸಿದೆ.
ಅಮಾನತುಗೊಳಿಸುವಿಕೆಯು ಪಂದ್ಯ ನಂ. 35 ಅದು ಭಾರತದ ಸೆಮಿಫೈನಲ್ ಪಂದ್ಯಮೇಲೆ ಪರಿಣಾಮ ಬೀರುತ್ತದೆ, ಅಲ್ಲಿ ಅಮಿತ್ ರೋಹಿದಾಸ್ ಭಾಗವಹಿಸುವುದಿಲ್ಲ ಮತ್ತು ಭಾರತವು ಕೇವಲ 15 ಆಟಗಾರರ ತಂಡದೊಂದಿಗೆ ಆಡುತ್ತದೆ.
ರೋಹಿದಾಸ್ ಅವರ ಪಂದ್ಯದ ವೇಳೆ ತಮ ಕಾಕಿ ಸ್ಟಿಕ್ ಉದ್ದೇಶಪೂರ್ವಕವಾಗಿ ಪ್ರತಿಸ್ಪರ್ಧಿ ಆಟಗಾರನಿಗೆ ಹೊಡೆದಿದ್ದಾರೆ ಎಂದು ತೕರ್ಪಿನ ನಂತರ ಅಂತಿಮ ಸುಮಾರು 40 ನಿಮಿಷ ಪಿಚ್‌ನಿಂದ ಹೊರಗೆ ಕಳುಹಿಸಲಾಗಿತ್ತು.