Friday, November 22, 2024
Homeಕ್ರೀಡಾ ಸುದ್ದಿ | Sportsಭಾರತೀಯರಿಗೆ ದೊಡ್ಡ ಆಘಾತ : ಒಲಿಂಪಿಕ್ಸ್​ನಿಂದ​ ಕುಸ್ತಿಪಟು ವಿನೀಶ್‌ ಪೋಗಟ್‌ ಅನರ್ಹ

ಭಾರತೀಯರಿಗೆ ದೊಡ್ಡ ಆಘಾತ : ಒಲಿಂಪಿಕ್ಸ್​ನಿಂದ​ ಕುಸ್ತಿಪಟು ವಿನೀಶ್‌ ಪೋಗಟ್‌ ಅನರ್ಹ

ಪ್ಯಾರಿಸ್,ಆ.7- ಪ್ಯಾರಿಸ್ ಒಲಿಂಪಿಕ್ಸ್ಸ ಅಂಗಳದಿಂದ ಭಾರತೀಯರಿಗೆ ಆಘಾತಕಾರಿ ಸುದ್ದಿಯೊಂದು ಬರಸಿಡಿಲಿನಂತೆ ಅಪ್ಪಳಿಸಿದೆ.
ಒಲಿಂಪಿಕ್ಸ್ಸನಲ್ಲಿ ಚಿನ್ನ ಗೆಲ್ಲುವ ನಿರೀಕ್ಷೆ ಹುಟ್ಟಿಸಿದ್ದ ಭಾರತದ ಕುಸ್ತಿಪಟು ವಿನೇಶ್ ಪೋಗಟ್ರನ್ನು ಅಂತಾರಾಷ್ಟ್ರೀಯ ಕುಸ್ತಿ ಸಂಸ್ಥೆ ಒಲಿಂಪಿಕ್ಸ್ಸನಿಂದ ಅನರ್ಹಗೊಳಿಸಿದೆ.

ವಿನೇಶ್ ಪೋಗಟ್ ಒಲಿಂಪಿಕ್ಸ್ಸನಲ್ಲಿ 50 ಕೆಜಿ ಫ್ರೀಸ್ಟೈಲ್ ಕುಸ್ತಿಯಲ್ಲಿ ಸ್ಪರ್ಧಿಯಾಗಿದ್ದರು. ಎರಡನೇ ದಿನದ ಆಟಕ್ಕೆ ಪೂರ್ವಭಾವಿಯಾಗಿ ಇಂದು ಬೆಳಿಗ್ಗೆ ದೇಹ ತೂಕ ಅಳತೆ ಮಾಡಿದಾಗ ಅರ್ಹತಾ ಮಾನದಂಡಕ್ಕಿಂತಲೂ 150 ಗ್ರಾಂ ಹೆಚ್ಚುವರಿಯಾಗಿರುವುದು ಕಂಡುಬಂದಿದೆ.

ಕೂಡಲೇ ಅಂತಾರಾಷ್ಟ್ರೀಯ ಕುಸ್ತಿ ಸಂಸ್ಥೆಯ ನಿಯಮಾವಳಿ ಪ್ರಕಾರ ವಿನೇಶ್ ಪೋಗಟ್ರನ್ನು ಒಲಿಂಪಿಕ್ಸ್ಸ ಕ್ರೀಡಾಕೂಟದಿಂದ ಅನರ್ಹಗೊಳಿಸಲಾಗಿದೆ. ನಿನ್ನೆ ಮೂರು ಪಂದ್ಯಗಳಲ್ಲಿ ಭರ್ಜರಿ ದಿಗ್ವಿಜಯ ಸಾಧಿಸಿ, ಫೈನಲ್ ಪ್ರವೇಶಿಸಿದ ಪೋಗಟ್ ಇಂದು ರಾತ್ರಿ ಪ್ಯಾರಿಸ್ನಲ್ಲಿ ನಡೆಯುವ ಅಂತಿಮ ಪಂದ್ಯದಲ್ಲಿ ಅಮೆರಿಕದ ಹಿಲ್ಡೆಬ್ರಾಂಡ್್ಟ ಸಾರಾ ಆನ್ ರೊಂದಿಗೆ ಪೈಪೋಟಿ ನಡೆಸಿ ಚಿನ್ನದ ಪದಕಕ್ಕೆ ಮುತ್ತಿಕ್ಕಲು ದಾಂಗುಡಿ ಇಟ್ಟಿದ್ದರು.

ಆದರೆ ಕೋಟ್ಯಂತರ ಭಾರತೀಯರ ನಿರೀಕ್ಷೆಗಳು ತಲೆಕೆಳಗಾಗಿದ್ದು, ಪೋಗಟ್ರ ದೇಹತೂಕ 150 ಗ್ರಾಂ ಹೆಚ್ಚಾಗಿರುವುದರಿಂದ ಒಲಿಂಪಿಕ್ಸ್ಸ ಪಂದ್ಯಾವಳಿಯಿಂದ ಅನರ್ಹಗೊಂಡು ಸ್ಪರ್ಧೆಯಿಂದ ಹೊರಗುಳಿಯಬೇಕಾಗಿದೆ.

ಹೆಚ್ಚುವರಿ ದೇಹತೂಕವನ್ನು ಸರಿದೂಗಿಸಲು ತರಬೇತಿದಾರರು ಹಾಗೂ ಕ್ರೀಡಾಸಿಬ್ಬಂದಿ ಸಾಕಷ್ಟು ಪ್ರಯತ್ನಗಳನ್ನು ನಡೆಸಿದ್ದಾರೆ. ಪೋಗಟ್ರ ಕೂದಲು ಕತ್ತರಿಸಿ, ದೇಹದಿಂದ ರಕ್ತವನ್ನು ವೈಜ್ಞಾನಿಕವಾಗಿ ಹೊರತೆಗೆಯಲಾಗಿದೆ. ಎಷ್ಟೆಲ್ಲಾ ಪ್ರಯತ್ನಿಸಿದರೂ ತೂಕ ತಗ್ಗದ ಕಾರಣ ಅಂತಾರಾಷ್ಟ್ರೀಯ ಕುಸ್ತಿ ಸಂಸ್ಥೆಯ ನಿಯಮಾನುಸಾರ ಅಂತಿಮವಾಗಿ ಸ್ಪರ್ಧೆಯಿಂದ ಅನರ್ಹಗೊಳಿಸಿರುವುದಾಗಿ ಒಲಿಂಪಿಕ್ಸ್ಸ ಸಂಸ್ಥೆ ಪ್ರಕಟಿಸಿದೆ.

ಅಂತಾರಾಷ್ಟ್ರೀಯ ಕುಸ್ತಿ ಸಂಸ್ಥೆಯ ನಿಯಮಾವಳಿ ಪ್ರಕಾರ ಕ್ರೀಡಾಪಟುಗಳು ಪ್ರತಿದಿನವೂ ವೈದ್ಯಕೀಯ ಹಾಗೂ ದೇಹ ತೂಕದ ಪರೀಕ್ಷೆಗೆ ಹಾಜರಾಗಬೇಕು. ಅದನ್ನು ನಿರಾಕರಿಸಿದರೂ ಕ್ರೀಡಾಕೂಟದಿಂದಲೇ ಅನರ್ಹರಾಗುತ್ತಾರೆ.

ಈ ಮೊದಲು 53 ಕೆ ಜಿ ವಿಭಾಗದಲ್ಲಿ ಸ್ಪರ್ಧಿಸುತ್ತಿದ್ದ ವಿನೇಶ್ ಪೋಗಟ್ ಕಳೆದ ಜನವರಿಯಿಂದೀಚೆಗೆ ತೂಕ ಇಳಿಸಿಕೊಂಡು 50 ಕೆ ಜಿ ವಿಭಾಗದಲ್ಲಿ ಸ್ಪರ್ಧಿಸಲು ಅರ್ಹತೆ ಪಡೆದುಕೊಂಡಿದ್ದರು. ನಿನ್ನೆ ಸಂಜೆಯೇ ದೇಹದ ತೂಕ ಹೆಚ್ಚಿರುವುದನ್ನು ಗಮನಿಸಿ ಇಡೀ ರಾತ್ರಿ ನಿದ್ದೆ ಮಾಡದೇ ವ್ಯಾಯಾಮ ಮಾಡಿ ತೂಕ ತಗ್ಗಿಸಲು ಪೋಗಟ್ ಪ್ರಯತ್ನಿಸಿದ್ದರು.

ಇಂದು ಬೆಳಿಗ್ಗೆ ಅರ್ಹತಾ ಮಾನದಂಡಗಳ ನಿರ್ಧರಣೆಗೆ ಮುನ್ನ ಅರ್ಧಗಂಟೆ ಮೊದಲು ದೇಹದ ತೂಕ ಪರೀಕ್ಷಿಸಿದಾಗ ನಿಗದಿಗಿಂತಲೂ 150 ಗ್ರಾಂ ಹೆಚ್ಚಾಗಿರುವುದು ದೃಢಪಟ್ಟಿದೆ.

ಪೋಗಟ್ರ ಕೋಚ್ ಮತ್ತು ಭಾರತೀಯ ಕ್ರೀಡಾಸಿಬ್ಬಂದಿಗಳು ಒಲಿಂಪಿಕ್ಸ್ಸ ಸಂಸ್ಥೆಯೊಂದಿಗೆ ಸಾಕಷ್ಟು ಸಮಾಲೋಚನೆ ನಡೆಸಿ ಸಮಯಾವಕಾಶ ಪಡೆಯಲು ಪ್ರಯತ್ನಿಸಿದರೂ ಸಾಧ್ಯವಾಗಿಲ್ಲ. ನಿನ್ನೆ ಫೈನಲ್ ತಲುಪಿದ್ದ ವೇಳೆ ಪೋಗಟ್ಗೆ ಖಚಿತವಾಗಿದ್ದ ಬೆಳ್ಳಿ ಪದಕವನ್ನೂ ಒಲಿಂಪಿಕ್ಸ್ಸ ಸಂಸ್ಥೆ ಹಿಂಪಡೆದು ಕೊನೆಯ ಸ್ಪರ್ಧಿ ಎಂದು ಪರಿಗಣಿಸಲಾಗಿದೆ.

ಭಾರತದ ಇತಿಹಾಸದಲ್ಲಿ ಒಲಿಂಪಿಕ್ಸ್ಸನಲ್ಲಿ ಭಾರತದ ಮಹಿಳಾ ಕುಸ್ತಿಪಟುಗಳು ಫೈನಲ್ ತಲುಪಿರಲಿಲ್ಲ. ಆ ಸಾಧನೆ ಮಾಡಿದ್ದ ಪೋಗಟ್ ಪದಕಗಳಿಲ್ಲದೆ ಬರಿಗೈನಲ್ಲಿ ನಿರ್ಗಮಿಸಿರುವುದು ಭಾರಿ ನಿರಾಶೆ ಮೂಡಿಸಿದೆ.

RELATED ARTICLES

Latest News