Friday, April 4, 2025
Homeಕ್ರೀಡಾ ಸುದ್ದಿ | Sportsವಿನೇಶ್‌ ಫೋಗಾಟ್‌ ಹೀನಾಯವಾಗಿ ಸೊತ್ತಿದ್ದ ಕ್ಯೂಬಾ ಕುಸ್ತಿಪಟಗೆ ಖುಲಾಯಿಸಿದ ಅದೃಷ್ಟ

ವಿನೇಶ್‌ ಫೋಗಾಟ್‌ ಹೀನಾಯವಾಗಿ ಸೊತ್ತಿದ್ದ ಕ್ಯೂಬಾ ಕುಸ್ತಿಪಟಗೆ ಖುಲಾಯಿಸಿದ ಅದೃಷ್ಟ

ಪ್ಯಾರಿಸ್‌‍,ಆ.7- ಭಾರತೀಯ ಕುಸ್ತಿಪಟು ವಿನೇಶ್‌ ಫೋಗಾಟ್‌ ಎದುರು ಹೀನಾಯವಾಗಿ ಸೋಲು ಕಂಡಿದ್ದ ಕ್ಯೂಬಾದ ಗುಜನ್‌ ಲೊಪೇಜ್‌ ಅದೃಷ್ಟ ಖುಲಾಯಿಸಿದ್ದು, ಒಲಿಂಪಿಕ್‌ನಲ್ಲಿ ಫೈನಲ್‌ ಪ್ರವೇಶಿಸಿದ್ದಾರೆ.

ವಿನೇಶ್‌ ಫೋಗಟ್‌ ಒಲಿಂಪಿಕ್‌ನಿಂದ ಅನರ್ಹಗೊಂಡ ಬೆನ್ನಲ್ಲೇ ಅವರ ಸ್ಪರ್ಧೆಯ ಫಲಿತಾಂಶವನ್ನು ಸೆಮಿಫೈನಲ್‌ಗೆ ಒಲಿಂಪಿಕ್‌ ಸಂಸ್ಥೆ ಸೀಮಿತಗೊಳಿಸಿದೆ.

ನಿನ್ನೆ ನಡೆದ ಸ್ಪರ್ಧೆಯಲ್ಲಿ ವಿನೇಶ್‌ ಫೋಗಟ್‌ ಕ್ಯೂಬಾದ ಲೊಪೇಜ್‌ರನ್ನು 5-0 ಅಂತರದಿಂದ ಹೀನಾಯವಾಗಿ ಸೋಲಿಸಿದ್ದರು. ಅಮೆರಿಕದ ಹಿಲ್ಡೆಬ್ರಾಂಡ್‌್ಟ ಸಾರಾ ಆನ್‌, ಮಂಗೋಲಿಯಾದ ಡೊಲ್ಗೋಜಾವಾ ಅವರನ್ನು 5-0 ಅಂತರದಿಂದ ಸೋಲಿಸಿ ಫೈನಲ್‌ ಪ್ರವೇಶಿಸಿದ್ದರು.

ಇಂದು ರಾತ್ರಿ ನಡೆಯುವ ಪಂದ್ಯದಲ್ಲಿ ವಿನೇಶ್‌ ಫೋಗಟ್‌ ಮತ್ತು ಅಮೆರಿಕದ ಹಿಲ್ಡೆಬ್ರಾಂಡ್‌್ಟ ಸಾರಾ ಆನ್‌ ನಡುವೆ ಹಣಾಹಣಿ ನಡೆಯಬೇಕಿತ್ತು. ಆದರೆ ಫೋಗಟ್‌ ಅನರ್ಹಗೊಂಡಿದ್ದರಿಂದ ಸೋಲು ಕಂಡಿದ್ದ ಕ್ಯೂಬಾದ ಲೊಪೇಜ್‌ ಮುಂಬಡ್ತಿ ಪಡೆದು ಫೈನಲ್‌ ಪ್ರವೇಶಿಸಿದ್ದಾರೆ.

RELATED ARTICLES

Latest News