ಸಿಡ್ನಿ, ಜ.8- ಇಲ್ಲಿ ನಡೆದ ನಡೆದ ಐದನೇ ಮತ್ತು ಅಂತಿಮ ಕ್ರಿಕೆಟ್ ಟೆಸ್ಟ್‌ನಲ್ಲಿ ಐದು ವಿಕೆಟ್‌ಗಳ ಜಯದೊಂದಿಗೆ ಆಸ್ಟ್ರೇಲಿಯಾ 4-1 ಅಂತರದ ಆಶಸ್ ಸರಣಿಯಲ್ಲಿ ಗೆಲುವು ಸಾಧಿಸಿತು. ಸರಣಿಯ ಅಂತಿಮ ಪಂದ್ಯದ ಐದನೇದಿನ ಬೆಳಿಗ್ಗೆ ಆಸ್ಟ್ರೇಲಿಯ ತಂಡ ಇಂಗ್ಲೆಂಡ್ ಅನ್ನು 342 ರನ್‌ಗಳಿಗೆ ಆಲೌಟ್ ಮಾಡಿದರು ಮತ್ತು ಗೆಲುವಿಗೆ 160 ರನ್‌ಗಳನ್ನು ಬೆನ್ನಟ್ಟುತ್ತಿದ್ದರು. ಸತತ ವಿಕೆಟ್‌ಗಳು ಮತ್ತು ವಿವಾದಾತಕ ಡಿಆರ್‌ಎಸ್ ಪರಿಶೀಲನೆಯೊಂದಿಗೆ ಪದೇ ಪದೆ ಪಂದ್ಯತಿರುವು ಪಡೆದು ಕುತೂಹಲ ಹೆಚ್ಚಿಸಿತು.
ಅಲೆಕ್‌್ಸ ಕ್ಯಾರಿ ಗೆಲುವಿನ ರನ್ ಗಳಿಸುವ ಮೂಲಕ ಆಸ್ಟ್ರೇಲಿಯ 31 ಓವರ್‌ಗಳಲ್ಲಿ ಐದು ವಿಕೆಟ್‌ಗಳಿಗೆ 161 ರನ್ ಗಳಿಸಿತು.ಕ್ಯಾರಿ 16 ರನ್ ಮತ್ತು ಕ್ಯಾಮರೂನ್ ಗ್ರೀನ್ 22 ರನ್ ಗಳಿಸಿ ಅಜೇಯರಾಗಿ ಉಳಿದರು.
ಮೊದಲ ಮೂರು ಟೆಸ್ಟ್‌ಗಳಲ್ಲಿ ಜಯಗಳಿಸಿ ಆಸ್ಟೇಲಿಯಾ ತಂಡ ಸರಣಿ ಉಳಿಸಿಕೊಂಡರು, ಆದರೆ ಮೆಲ್ಬೋರ್ನ್‌ನಲ್ಲಿ ನಡೆದ ಬಾಕ್ಸಿಂಗ್ ಡೇ ಪಂದ್ಯದಲ್ಲಿ ಗೆಲುವಿನ ನಂತರ ಇಂಗ್ಲೆಂಡ್ ಅಂತರವನ್ನು ಕಡಿಮೆ ಮಾಡಿದೆ ಖವಾಜ ಅವರ ಕಿಸ್ ವಿದಾಯಸ್ಟೀವ್ ಸ್ಮಿತ್ ಅವರನ್ನು ವಿಲ್ ಜ್ಯಾಕ್‌್ಸಬೌಲಿಂಗ್ ನಲ್ಲಿ ಔಟ್‌ದ ನಂತರ ಖವಾಜ ಕ್ರೀಸ್ ಗೆ ಬಂದರು ಈ ವೇಳೆ ಆಸ್ಟ್ರೇಲಿಯಾ 92-3 ರನ್ ಗಳಿಸಿತ್ತು. ಮೈದಾನಕ್ಕೆ ಬರುತ್ತಿದ್ದ ಇಂಗ್ಲೆಂಡ್ ಆಟಗಾರರು ಅವರಿಗೆ ಗಾರ್ಡ್ ಆಫ್ ಹಾನರ್ ನೀಡಿದರು, ಸ್ಟೋಕ್‌್ಸಜೊತೆ ಕೈಕುಲುಕಿದರು ಮತ್ತು ನಂತರ ತಂಡದ ಸಹ ಆಟಗಾರ ಮಾರ್ನಸ್ ಲ್ಯಾಬುಸ್ಚಾ ಅವರನ್ನು ಅಪ್ಪಿಕೊಂಡರು.
ಖವಾಜ ತಮ ಕೊನೆಯ ಇನ್ನಿಂಗ್‌್ಸನಲ್ಲಿ ಮೊದಲ ರನ್ ಗಳಿಸಲು ಏಳು ಎಸೆತಗಳನ್ನು ತೆಗೆದುಕೊಂಡು ನಂತರ ಜೋಶ್ ಟಾಂಗ್ ಅವರ ಬೌಲಿಂಗ್‌ನಲ್ಲಿ ಸಿಕ್ಸರ್ ಭಾರಿಸಿ ನಂತರ ಮಂಡಿಯೂರಿ ಟರ್ಫ್‌ಗೆ ಮುತ್ತಿಟ್ಟರು ನಂತರ 40 ಎಸೆತಗಳಲ್ಲಿ 37 ರನ್ ಗಳಿಸಿ ಪೆವೀಲಿಯನ್‌ಗೆ ಹಿಂತಿರುಗಿದರು.
ಆ ಹಂತದಲ್ಲಿ, ಆಸ್ಟ್ರೇಲಿಯಾ 121-5 ಆಗಿತ್ತು ನಂತರ ಕ್ಯಾರಿ ಮತ್ತು ಗ್ರೀನ್ ಆತಿಥೇಯರನು ್ನಗೆಲುವಿನ ದಡ ಸೇರಿಸಿದರು ಐದನೇ ಬೆಳಿಗ್ಗೆ ಇಂಗ್ಲೆಂಡ್302-8 ರೊಂದಿಗೆ ಪುನರಾರಂಭವಾಯಿತು, 119 ರನ್‌ಗಳ ಮುನ್ನಡೆಯಲ್ಲಿ, ಮತ್ತು 342 ರನ್‌ಗಳಿಗೆ ಆಲೌಟ್ ಆಯಿತು, ಆಸ್ಟ್ರೇಲಿಯನ್ನರು ತಮ್ಮ ಎರಡನೇ ಇನ್ನಿಂಗ್‌ಅನ್ನು ವೇಗವಾಗಿ ಪ್ರಾರಂಭಿಸಿ ಗೆಲವು ತನ್ನದಾಗಿಸಿಕೊಂಡಿತು ಐದನೇ ಟೆಸ್ಟ್‌ನ ಐದು ದಿನಗಳಲ್ಲಿ ಒಟ್ಟು ಪ್ರೇಕ್ಷಕರ ಸಂಖ್ಯೆ 211,032 ಆಗಿತ್ತು, ಇದು ಸಿಡ್ನಿ ಕ್ರಿಕೆಟ್ ಮೈದಾನದ ದಾಖಲೆಯಾಗಿದೆ.
