Friday, November 22, 2024
Homeಅಂತಾರಾಷ್ಟ್ರೀಯ | Internationalಬಾಂಗ್ಲಾ ಮಧ್ಯಂತರ ಸರ್ಕಾರದ ಮುಖ್ಯಸ್ಥರ ಪದಗ್ರಹಣದಲ್ಲಿ ಸಮಾರಂಭದಲ್ಲಿ ಭಾರತೀಯ ಹೈ ಕಮಿಷನರ್‌

ಬಾಂಗ್ಲಾ ಮಧ್ಯಂತರ ಸರ್ಕಾರದ ಮುಖ್ಯಸ್ಥರ ಪದಗ್ರಹಣದಲ್ಲಿ ಸಮಾರಂಭದಲ್ಲಿ ಭಾರತೀಯ ಹೈ ಕಮಿಷನರ್‌

ನವದೆಹಲಿ, ಆ. 9 (ಪಿಟಿಐ) ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಮುಖ್ಯಸ್ಥರಾಗಿ ಮುಹಮದ್‌ ಯೂನಸ್‌‍ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಢಾಕಾದಲ್ಲಿರುವ ಭಾರತೀಯ ಹೈಕಮಿಷನರ್‌ ಪ್ರಣಯ್‌ ವರ್ಮಾ ಭಾಗವಹಿಸಿದ್ದರು.

ಢಾಕಾದ ಅಧ್ಯಕ್ಷೀಯ ಭವನ ಬಂಗಾಬಾಬನ್‌ನಲ್ಲಿ ನಡೆದ ಸಮಾರಂಭದಲ್ಲಿ ನೊಬೆಲ್‌ ಪ್ರಶಸ್ತಿ ವಿಜೇತ 84 ವರ್ಷದ ಯೂನಸ್‌‍ ಅವರಿಗೆ ಬಾಂಗ್ಲಾದೇಶದ ಅಧ್ಯಕ್ಷ ಮೊಹಮದ್‌ ಶಹಾಬುದ್ದೀನ್‌ ಅವರು ಪ್ರಮಾಣ ವಚನ ಬೋಧಿಸಿದರು.

ಬಾಂಗ್ಲಾದೇಶದಲ್ಲಿ ಮಧ್ಯಂತರ ಸರ್ಕಾರದ ಪ್ರಮಾಣ ವಚನ ಸಮಾರಂಭದಲ್ಲಿ ಭಾರತೀಯ ಹೈಕಮಿಷನರ್‌ ಭಾಗವಹಿಸಿದ್ದರು ಎಂದು ವಿದೇಶಾಂಗ ಸಚಿವಾಲಯದ (ಎಂಇಎ) ಬಾಹ್ಯ ಪ್ರಚಾರ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.

ವಾರಗಳ ಹಿಂಸಾತಕ ಪ್ರತಿಭಟನೆಗಳ ನಂತರ ಅವಾಮಿ ಲೀಗ್‌ ನಾಯಕಿ ಶೇಖ್‌ ಹಸೀನಾ ಅವರು ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿ ದೇಶದಿಂದ ಪಲಾಯನ ಮಾಡಿದ ಮೂರು ದಿನಗಳ ನಂತರ ಯೂನಸ್‌‍ ಮಧ್ಯಂತರ ಸರ್ಕಾರದ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.

ರಾಜ್ಯದ ವ್ಯವಹಾರಗಳನ್ನು ನಡೆಸಲು ಯೂನಸ್‌‍ಗೆ ಸಹಾಯ ಮಾಡಲು 16 ಸದಸ್ಯರ ಸಲಹೆಗಾರರನ್ನು ನೇಮಿಸಲಾಗಿದೆ. ತಾರತಮ್ಯ ವಿರೋಧಿ ವಿದ್ಯಾರ್ಥಿ ಆಂದೋಲನದ ಇಬ್ಬರು ಪ್ರಮುಖ ಸಂಘಟಕರಾದ ನಹಿದ್‌ ಇಸ್ಲಾಂ ಮತ್ತು ಆಸಿಫ್‌ ಮಹಮೂದ್‌ ಸಹ ಸಲಹಾ ಮಂಡಳಿಯ ಭಾಗವಾಗಿದ್ದಾರೆ.

RELATED ARTICLES

Latest News