Saturday, November 23, 2024
Homeರಾಜ್ಯವಾಲ್ಮೀಕಿ ನಿಗಮ ಹಗರಣದ ಆರೋಪಿ ಸತ್ಯನಾರಾಯಣನನ್ನ ಇಡಿ ವಶಕ್ಕೆ ನೀಡಲು ಹೈಕೋರ್ಟ್‌ ಆದೇಶ

ವಾಲ್ಮೀಕಿ ನಿಗಮ ಹಗರಣದ ಆರೋಪಿ ಸತ್ಯನಾರಾಯಣನನ್ನ ಇಡಿ ವಶಕ್ಕೆ ನೀಡಲು ಹೈಕೋರ್ಟ್‌ ಆದೇಶ

ಬೆಂಗಳೂರು,ಆ.10- ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಸತ್ಯನಾರಾಯಣ ವರ್ಮ ಅವರನ್ನು ತನಿಖೆಗಾಗಿ ಜಾರಿ ನಿರ್ದೇಶನಾಲಯದ ವಶಕ್ಕೆ ನೀಡಬೇಕೆಂದು ಎಸ್‌‍ಐಟಿಗೆ ಹೈಕೋರ್ಟ್‌ ಆದೇಶಿಸಿದೆ.

ಆ.2 ರಂದು ಸತ್ಯನಾರಾಯಣ ವರ್ಮ ಅವರನ್ನು ಎಸ್‌‍ಐಟಿ ಕಸ್ಟಡಿಗೆ ನೀಡಿರುವ ಆದೇಶ ರದ್ದುಪಡಿಸುವಂತೆ ಕೋರಿ ಇ.ಡಿ. ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್‌ನ ನ್ಯಾಯಮೂರ್ತಿ ಎಂ.ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ತನಿಖೆಗಾಗಿ ಆ.13 ರಂದು ಜಾರಿ ನಿರ್ದೇಶನಾಲಯದ ವಶಕ್ಕೆ ನೀಡುವಂತೆ ಆದೇಶ ನೀಡಿದ್ದಾರೆ.

ಸತ್ಯನಾರಾಯಣವರ್ಮ ಅವರ ಎಸ್‌‍ಐಟಿ ಕಸ್ಟಡಿ ಆ.12 ರಂದು ಮುಗಿಯುತ್ತದೆ. 13 ರಂದು ಅವರನ್ನು ಜಾರಿ ನಿರ್ದೇಶನಾಲಯದ ವಶಕ್ಕೆ ಒಪ್ಪಿಸುವ ಸಂಬಂಧ ತನಿಖಾಧಿಕಾರಿಗಳು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಮುಂದೆ ಹಾಜರುಪಡಿಸಬೇಕೆಂದು ನ್ಯಾಯಪೀಠ ಸೂಚನೆ ನೀಡಿದೆ.

ಇ.ಡಿ. ಪರ ವಾದ ಮಂಡಿಸಿದ್ದ ವಿಶೇಷ ಸರ್ಕಾರಿ ಅಭಿಯೋಜಕರಾದ ಪ್ರಸನ್ನಕುಮಾರ್‌ರವರು ವರ್ಮ ವಿರುದ್ಧ ಇ.ಡಿ. ನ್ಯಾಯಾಲಯ ಬಾಡಿ ವಾರಂಟ್‌ ಜಾರಿ ಮಾಡಿರುವುದು ಬಾಕಿ ಇರುವಾಗ ಅದನ್ನು ಈ ರೀತಿ ಮಾಡಲಾಗುವುದು. ವಿಶೇಷ ನ್ಯಾಯಾಲಯ ಬಾಡಿ ವಾರಂಟ್‌ ಜಾರಿ ಮಾಡಿದೆ ಎಂದು ಪೀಠಕ್ಕೆ ವಿವರಣೆ ನೀಡಿದರು.

ಎಸ್‌‍ಐಟಿ ಪರವಾಗಿ ಹಾಜರಾಗಿದ್ದ ಸರ್ಕಾರಿ ವಿಶೇಷ ಅಭಿಯೋಜಕ ಬಿ.ಎನ್‌.ಜಗದೀಶ್‌ ಅವರು ವಾದ ಮಂಡಿಸಿ ಆ.22 ರಂದು ಇ.ಡಿ. ನ್ಯಾಯಾಲಯವು ಬಾಡಿ ವಾರಂಟ್‌ಗೆ ಆದೇಶ ಮಾಡಿದಾಗ ಇ.ಡಿ. ವಕೀಲರು ವರ್ಮ ಪೊಲೀಸ್‌‍ ಕಸ್ಟಡಿಯಲ್ಲಿದ್ದಾರೆಂದು ಸಂಬಂಧಿತ ನ್ಯಾಯಾಲಯಕ್ಕೆ ತಿಳಿಸಿಲ್ಲ. ಈಗ ವರ್ಮ ಅವರ ಕಸ್ಟಡಿ ಅವಧಿ ಆ.12 ಕ್ಕೆ ಮುಗಿಯುತ್ತದೆ. ಆನಂತರ ಇ.ಡಿ. ವಶಕ್ಕೆ ತೆಗೆದುಕೊಳ್ಳಬಹುದು ಎಂದರು.

ಉಳೆದೆಲ್ಲಾ ಆರೋಪಿಗಳನ್ನೂ ಅವರ ಕಸ್ಟಡಿಗೆ ಪಡೆದಿದ್ದಾರೆ. ಸದ್ಯ ಈ ಪ್ರಕರಣದಲ್ಲಿ 49 ಕೋಟಿ ರೂ. ಜಪ್ತಿ ಮಾಡಿದ್ದೇವೆ. ಇನ್ನೂ 30 ಕೋಟಿ ಜಪ್ತಿ ಮಾಡಬೇಕಾಗಿದೆ. ಸತ್ಯನಾರಾಯಣ ವರ್ಮ ಅವರೇ ಹಗರಣದ ಪ್ರಮುಖ ಆರೋಪಿಯೆಂದು ಹೇಳಿದರು.

RELATED ARTICLES

Latest News