Friday, September 20, 2024
Homeಅಂತಾರಾಷ್ಟ್ರೀಯ | Internationalಬ್ರೆಜಿಲ್‌ನಲ್ಲಿ ವಿಮಾನ ಪತನ : ಸಿಬ್ಬಂದಿ ಸೇರಿ 62 ಪ್ರಯಾಣಿಕರ ದುರಂತ ಸಾವು

ಬ್ರೆಜಿಲ್‌ನಲ್ಲಿ ವಿಮಾನ ಪತನ : ಸಿಬ್ಬಂದಿ ಸೇರಿ 62 ಪ್ರಯಾಣಿಕರ ದುರಂತ ಸಾವು

ಸಾವೊ ಪೌಲೋ,ಆ.10– ಪ್ರಾದೇಶಿಕ ಟರ್ಬೊಪೊಪ್‌ ವಿಮಾನವು ಬ್ರೆಜಿಲ್‌ನ ಸಾವೊ ಪಾಲೊ ಬಳಿ ಪತನಗೊಂಡಿದ್ದು, ಅದರಲ್ಲಿದ್ದ ಸಿಬ್ಬಂದಿ ಪ್ರಯಾಣಿಕರು ಸೇರಿ 62 ಪ್ರಯಾಣಿಕರು ಸಾವನ್ನಪ್ಪಿದ್ದಾರೆ. ಬ್ರೆಜಿಲ್‌ ವಿಮಾನ ಅಪಘಾತದಲ್ಲಿ ಪ್ರಯಾಣ ನಡೆಸುತ್ತಿದ್ದವರು ಯಾರೂ ಬದುಕುಳಿದವರಿಲ್ಲ ಎಂದು ವಿನ್ಹೆಡೋ ಬಳಿಯ ವ್ಯಾಲಿನ್ಹೋಸ್‌‍ನ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ವಿಮಾನ ಪತನದಿಂದ ಸಮೀಪದ ಕಾಂಡೋಮಿನಿಯಂ ಕಾಂಪ್ಲೆಕ್ಸ್ ನಲ್ಲಿರುವ ಮನೆಯೊಂದು ಪತನದೊಂಡಿದ್ದು, ಯಾವುದೇ ನಿವಾಸಿಗಳು ಗಾಯಗೊಂಡಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಪೈಲಟ್‌ ವಿಮಾನ ಮನೆಗಳ ಮೇಲೆ ಬೀಳುವುದನ್ನು ತಪ್ಪಿಸಿದ್ದಾರೆ. ವಿಮಾನ ಮೇಲಿನಿಂದ ಗಿರಕಿ ಹೊಡೆಯುತ್ತಾ ಬೀಳುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ವಿಮಾನವು ಪತನ ಹೊಂದಲು ಕಾರಣವೇನು ಎಂಬುದರ ಬಗ್ಗೆ ಈಗ ತನಿಖೆ ಆರಂಭವಾಗಿದೆ. ಹವಾಮಾನ ವೈಪರಿತ್ಯದಿಂದ ಪೈಲಟ್‌ ಎಂಜಿನ್‌ ಮೇಲೆ ನಿಯಂತ್ರಣ ಕಳೆದುಕೊಂಡು ಈ ದುರಂತ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ.

ಏರ್‌ಬಸ್‌‍ ಮತ್ತು ಇಟಾಲಿಯನ್‌ ಏರೋಸ್ಪೇಸ್‌‍ ಗ್ರೂಪ್‌ ಲಿಯೊನಾರ್ಡೊ ಜಂಟಿ ಒಡೆತನದದ ಎಟಿಆರ್‌ ಕಂಪನಿ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.ವಿಮಾನ ಅಪಘಾತದ ನಂತರ ಸಾವೊ ಪಾಲೊ ರಾಜ್ಯ ಅಗ್ನಿಶಾಮಕ ದಳದ ಏಳು ತಂಡಗಳನ್ನು ಘಟನಾ ಸ್ಥಳಕ್ಕೆ ತಲುಪಿ ಕಾರ್ಯಾಚರಣೆ ಕೈಗೊಂಡಿದೆ ಎಂದು ಸಾವೊ ಪಾಲೊದ ಅಗ್ನಿಶಾಮಕ ಇಲಾಖೆ ಎಕ್‌್ಸನಲ್ಲಿ ಮಾಹಿತಿ ನೀಡಿದೆ.

ಉಳಿದಂತೆ ವಿಮಾನವನ್ನು ರಾಡಾರ್‌ 24 ಎಟಿಆರ್‌ 72-500 ಟರ್ಬೊಪ್ರಾಪ್‌ ಎಂದು ಗುರುತಿಸಿದೆ. ಏರ್‌ಬಸ್‌‍, ವಿಮಾನವನ್ನು ತಯಾರಿಸುವ ಕಂಪನಿಯು ಇಟಾಲಿಯನ್‌ ಏರೋಸ್ಪೇಸ್‌‍ ಗುಂಪು ಲಿಯೊನಾರ್ಡೊ ಸಹ-ಮಾಲೀಕತ್ವವನ್ನು ಹೊಂದಿದೆ. ವಿಮಾನದ ಅವಶೇಷಗಳು ಮತ್ತು ದಟ್ಟವಾದ ಹೊಗೆಯಿಂದಾಗಿ ಅಪಘಾತದ ಸಂಪೂರ್ಣ ಪ್ರದೇಶವು ಬೆಂಕಿಯಿಂದ ಆವರಿಸಲ್ಪಟ್ಟಿದೆ ಎಂದು ವರದಿಯಾಗಿದೆ.

ಸಂತಾಪ ಸೂಚಿಸಿದ ಬ್ರೆಜಿಲ್‌ ಅಧ್ಯಕ್ಷ :
ಸ್ಥಳೀಯ ಟಿವಿ ಸ್ಟೇಷನ್‌ ಗ್ಲೋಬೋನ್ಯೂಸ್‌‍ನಲ್ಲಿ ಪ್ರಸಾರವಾದ ಟೇಜ್‌ ಬ್ರೆಜಿಲಿಯನ್‌ ವಿಮಾನ ಅಪಘಾತದ ದೃಶ್ಯಗಳನ್ನು ತೋರಿಸಿದೆ. ವಿಮಾನವು ಪತನಗೊಳ್ಳುವ ಮೊದಲು ಕುಸಿಯುತ್ತಿರುವುದನ್ನು ವಿಡಿಯೋ ತೋರಿಸುತ್ತದೆ. ಬ್ರೆಜಿಲ್‌ನಲ್ಲಿ ವಿಮಾನ ಅಪಘಾತದ ನಂತರ ಅಧ್ಯಕ್ಷ ಲೂಯಿಜ್‌ ಇನಾಸಿಯೊ ಲುಲಾ ಡ ಸಿಲ್ವಾ ಸಂತಾಪ ಸೂಚಿಸುತ್ತಿದ್ದು, ನಾನು ನಿಮಗೆ ದುಃಖದ ಸುದ್ದಿಯನ್ನು ಹೇಳಬೇಕಾಗಿದೆ.

58 ಪ್ರಯಾಣಿಕರು ಮತ್ತು ನಾಲ್ವರು ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿದ್ದ ವಿಮಾನವು ಸಾವೊ ಪಾಲೊದ ವಿನ್ಹೆಡೊ ನಗರದಲ್ಲಿ ಅಪಘಾತಕ್ಕೀಡಾಯಿತು ಮತ್ತು ದುರಂತರದಲ್ಲಿ ಎಲ್ಲರೂ ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದಾರೆ.

RELATED ARTICLES

Latest News