Friday, September 20, 2024
Homeರಾಜಕೀಯ | Politicsಮೈಸೂರಲ್ಲಿ ದೋಸ್ತಿಗಳ ಶಕ್ತಿಪ್ರದರ್ಶನ, ಕಾಂಗ್ರೆಸ್ಸಿಗರ ವಿರುದ್ಧ ಗರ್ಜನೆ

ಮೈಸೂರಲ್ಲಿ ದೋಸ್ತಿಗಳ ಶಕ್ತಿಪ್ರದರ್ಶನ, ಕಾಂಗ್ರೆಸ್ಸಿಗರ ವಿರುದ್ಧ ಗರ್ಜನೆ

ಬೆಂಗಳೂರು,ಆ.10- ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ದಲ್ಲಿ ಅಕ್ರಮ ನಿವೇಶನ ಹಂಚಿಕೆ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ-ಜೆಡಿಎಸ್ ಮೈತ್ರಿಪಕ್ಷವು ಬೃಹತ್ ಸಮಾವೇಶದಲ್ಲಿ ಶಕ್ತಿಪ್ರದರ್ಶಿಸಿ ಒಗ್ಗಟ್ಟಿನ ಮಂತ್ರದ ಮೂಲಕ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ಸಂದೇಶವನ್ನು ರವಾನಿಸಿದೆ.

ನಮ ಹೋರಾಟ ಮೈಸೂರಿಗೆ ಮಾತ್ರ ಸೀಮಿತವಾಗು ವುದಿಲ್ಲ. ಸಿದ್ದರಾಮಯ್ಯನವರ ರಾಜೀನಾಮೆ ಹಾಗೂ ಸರ್ಕಾರದ ಹಗರಣಗಳನ್ನು ಮುಂದಿಟ್ಟುಕೊಂಡು ಬರುವ ದಿನಗಳಲ್ಲಿ ರಾಜ್ಯಾದ್ಯಂತ ಭ್ರಷ್ಟ ಸರ್ಕಾರದ ವಿರುದ್ಧ ಹೋರಾಟ ಮಾಡುತ್ತೇವೆ ಎಂಬ ಶಪಥವನ್ನು ಉಭಯ ಪಕ್ಷಗಳ ಮುಖಂಡರು ಮಾಡಿದ್ದಾರೆ.

ಸಾಂಸ್ಕೃತಿಕ ನಗರಿ ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆದ ಮೈಸೂರು ಚಲೋ ಸಮಾರೋಪ ಸಮಾರಂಭವು ಕಾಂಗ್ರೆಸ್ ಶುಕ್ರವಾರ ನಡೆಸಿದ್ದ ಸಮಾವೇಶಕ್ಕೆ ಭರ್ಜರಿ ತಿರುಗೇಟು ಎನ್ನುವಂತೆ ಬೃಹತ್ ಸಂಖ್ಯೆಯಲ್ಲಿ ಕಾರ್ಯಕರ್ತರು ಜಮಾಯಿಸಿದ್ದರು.

ದಾವಣಗೆರೆ, ಶಿವಮೊಗ್ಗ, ತುಮಕೂರು, ಚಿತ್ರದುರ್ಗ, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಮಂಡ್ಯ, ಚಾಮರಾಜನಗರ ಸೇರಿದಂತೆ ರಾಜ್ಯಾದ್ಯಂತ ಸುಮಾರು ಒಂದು ಲಕ್ಷಕ್ಕೂ ಹೆಚ್ಚಿನ ಕಾರ್ಯಕರ್ತರು ಜಮಾಯಿಸಿದ್ದರು.

ನಾಡಿನ ಮೂಲೆ ಮೂಲೆಗಳಿಂದಲೂ ಭಾರೀ ಸಂಖ್ಯೆಯ ಕಾರ್ಯಕರ್ತರು, ಅಭಿಮಾನಿಗಳು ಆಗಮಿಸಿದ್ದರಿಂದ ಮೈಸೂರು ಅಕ್ಷರಶಃ ಕೇಸರಿ ಹಾಗೂ ಹಸಿರುಮಯವಾಗಿತ್ತು. ವೇದಿಕೆಯಲ್ಲಿ ಮಾತನಾಡಿದ ಎರಡೂ ಪಕ್ಷಗಳ ಮುಖಂಡರು ಕಾಂಗ್ರೆಸ್ ಸರ್ಕಾರದ ವಿರುದ್ಧ ಬೆಂಕಿ ಉಗುಳಿದರು. ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ಆರ್.ಅಶೋಕ್, ಅಶ್ವತ್‌್ಥ ನಾರಾಯಣ, ಬಿ.ಶ್ರೀರಾಮುಲು ಮತ್ತಿತರರು ಬಿಜೆಪಿ ಪರವಾಗಿ ಮಾತನಾಡಿದರು.
ಜೆಡಿಎಸ್ ವತಿಯಿಂದ ಕುಮಾರಸ್ವಾಮಿ, ಜಿ.ಟಿ.ದೇವೇಗೌಡ, ಸುರೇಶ್ ಬಾಬು, ನಿಖಿಲ್ಕುಮಾರಸ್ವಾಮಿ ಮತ್ತಿತರರು ಸರ್ಕಾರದ ವಿರುದ್ಧ ಕೆಂಡಕಾರಿದರು.

ಸಿಎಂ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಹಾಗೂ ರಾಜ್ಯ ಸರ್ಕಾರದ ಹಗರಣಗಳನ್ನೇ ಗುರಿಯಾಗಿಟ್ಟುಕೊಂಡು ದೋಸ್ತಿ ಪಕ್ಷಗಳ ಮುಖಂಡರು ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರದಿಂದ ಕೂಡಿದೆ. ಜನರಿಗೆ ಸುಳ್ಳು ಭರವಸೆಯನ್ನು ಕೊಟ್ಟು ಅಧಿಕಾರಕ್ಕೆ ಬಂದಿರುವ ಇವರನ್ನು ಮನೆ ಕಳುಹಿಸುವವರೆಗೂ ನಮ ಹೋರಾಟ ನಿಲ್ಲುವುದಿಲ್ಲ ಎಂದು ವಾಗ್ದಾನ ಮಾಡಿದರು.ಮಿಸ್ಟರ್ ಕ್ಲೀನ್ ಇಮೇಜ್ ಖ್ಯಾತಿಯ ಸಿದ್ದರಾಮಯ್ಯ ಹಾಗೂ ಅವರ ಕುಟುಂಬದ ಮೇಲೆ ಅಕ್ರಮ ಡಿನೋಟಿಫಿಕೇಷನ್ ಆರೋಪ ಕೇಳಿಬಂದಿದೆ. ಅವರು ನೈತಿಕ ಹೊಣೆ ಹೊತ್ತು ತಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಅಲ್ಲಿಯವರೆಗೂ ನಾವು ನಮ ಹೋರಾಟವನ್ನು ಕೈಬಿಡುವ ಪ್ರಶ್ನೆಯೇ ಇಲ್ಲ ಎಂದು ಪುನರುಚ್ಚರಿಸಿದರು.

ನಮಲ್ಲಿ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳಿರಬಹುದು. ಅದನ್ನು ಹೇಗೆ ಸರಿಪಡಿಸಿಕೊಳ್ಳಬೇಕೆಂಬುದು ನಮಗೆ ಗೊತ್ತು. ನಮ ಹೋರಾಟ ಕಾಂಗ್ರೆಸ್ ಸರ್ಕಾರದ ವಿರುದ್ಧವೇ ಹೊರತು ಯಾವುದೇ ಒಬ್ಬ ವ್ಯಕ್ತಿಯ ಮೇಲಲ್ಲ ಎಂದು ಸ್ಪಷ್ಟಪಡಿಸಿದರು. ಭ್ರಷ್ಟಾಚಾರ ರಹಿತ ಆಡಳಿತ ನೀಡುತ್ತೇವೆ ಎಂದು ಅಧಿಕಾರ ಹಿಡಿದಿರುವ ಕಾಂಗ್ರೆಸ್ ಇಂದು ಎಲ್ಲಾ ರಾಜ್ಯಗಳಲ್ಲೂ ವಿಫಲವಾಗಿದೆ. ಲಂಚ ನೀಡದಿದ್ದರೆ ಯಾವ ಕೆಲಸವೂ ಆಗುವುದಿಲ್ಲ. ಸರ್ಕಾರ ಆದಷ್ಟು ಬೇಗ ತೊಲಗಿದರೆ ಸಾಕು ಎಂದು ಜನರು ಹಿಡಿಶಾಪ ಹಾಕುತ್ತಿದ್ದಾರೆ ಎಂದು ಆರೋಪ ಮಾಡಿದರು.

ಅದರಲ್ಲೂ ಕುಮಾರಸ್ವಾಮಿಯವರು ತಮ ಭಾಷಣದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಪ್ರತಿಯೊಂದು ಆರೋಪಗಳಿಗೆ ತಿರುಗೇಟು ನೀಡಿದರು. ಈ ವೇಳೆ ನೆರೆದಿದ್ದ ಕಾರ್ಯಕರ್ತರಿಂದ ಹರ್ಷೋದ್ಘಾರ ಮುಗಿಲುಮುಟ್ಟಿತು.

ಇದಕ್ಕೂ ಮುನ್ನ ಎಂಟು ದಿನಗಳ ಹಿಂದೆ ಕೆಂಗೇರಿಯಿಂದ ಆರಂಭವಾಗಿದ್ದ ಪಾದಯಾತ್ರೆ ಬೆಳಗ್ಗೆ ಮೈಸೂರಿನ ಕೊಲಂಬಿಯಾ ಏಷಿಯಾ ಜಂಕ್ಷನ್ನಿಂದ ಆರಂಭವಾಯಿತು. ಅಲ್ಲಿಂದ ಪ್ರಮುಖ ರಸ್ತೆಗಳಲ್ಲಿ ದೋಸ್ತಿ ಪಕ್ಷಗಳ ಮುಖಂಡರು, ಕಾರ್ಯಕರ್ತರು ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗುತ್ತಾ ಎರಡೂ ಪಕ್ಷಗಳ ನಾಯಕರಿಗೆ ಜೈಕಾರ ಹಾಕಿಕೊಂಡು ವೇದಿಕೆಗೆ ಆಗಮಿಸಿದರು.

ಪೊಲೀಸ್ ಬಿಗಿ ಭದ್ರತೆ:
ಮೈಸೂರು ಚಲೋ ಪಾದಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಹೆಚ್ಚಿನ ಜನ ಭಾಗವಹಿಸುವ ಹಿನ್ನೆಲೆಯಲ್ಲಿ ಮಹಾರಾಜ ಕಾಲೇಜು ಮೈದಾನದಲ್ಲಿ ಹಾಗೂ ಸುತ್ತಮುತ್ತ ನಾಲ್ಕು ಹಂತದ ಭದ್ರತೆ ಹಾಗೂ ಪ್ರಮುಖ ಸರ್ಕಲ್ಗಳಲ್ಲಿ ಭದ್ರತೆ ಒದಗಿಸಲಾಗಿತ್ತು.
ವಾಹನ ನಿಲುಗಡೆ ಹಾಗೂ ಬದಲಿ ಸಂಚಾರ ಮಾರ್ಗಗಳ ವ್ಯವಸ್ಥೆಯನ್ನು ಮಾಡಲಾಗಿತ್ತು. ಮೈಸೂರು ಚಲೋ ಸಮಾವೇಶದ ಭದ್ರತೆಗೆ 4,500 ಮಂದಿ ಪೊಲೀಸರು, ಮೂವರು ಡಿವೈಎಸ್ಪಿ, 22 ಇನ್‌್ಸಪೆಕ್ಟರ್ಗಳು , 175 ಎಸ್ಐ, 100 ಜನ ಕಮಾಂಡೋಗಳು , 500 ಹೋಂ ಗಾರ್ಡ್‌್ಸಗಳು ಹಾಗೂ ಕೆಎಸ್ಆರ್ಪಿ ಜೊತೆಗೆ ಸಿಎಆರ್ ತುಕಡಿಗಳನ್ನು ನಿಯೋಜಿಸಲಾಗಿತ್ತು.

RELATED ARTICLES

Latest News