Friday, April 11, 2025
Homeಬೆಂಗಳೂರುವೋಲ್ವೋ ಬಸ್‌‍ನಿಂದ ಫ್ಲೈಓವರ್‌ ಮೇಲೆ ಸರಣಿ ಅಪಘಾತ, ಬೈಕ್‌ ಸವಾರನಿಗೆ ಗಾಯ

ವೋಲ್ವೋ ಬಸ್‌‍ನಿಂದ ಫ್ಲೈಓವರ್‌ ಮೇಲೆ ಸರಣಿ ಅಪಘಾತ, ಬೈಕ್‌ ಸವಾರನಿಗೆ ಗಾಯ

ಬೆಂಗಳೂರು, ಆ.13- ಅತಿ ವೇಗ ಹಾಗೂ ಅಜಾಗರೂಕತೆಯಿಂದ ಬಂದ ಬಿಎಂಟಿಸಿ ವೋಲ್ವೋ ಬಸ್‌‍ವೊಂದು ಬೈಕ್‌ಗೆ ಡಿಕ್ಕಿ ಹೊಡೆದು ನಂತರ ಮೂರು ಕಾರುಗಳಿಗೆ ಡಿಕ್ಕಿ ಹೊಡೆದು ಸಂಭವಿಸಿದ ಸರಣಿ ಅಪಘಾತದಲ್ಲಿ ಬೈಕ್‌ ಸವಾರ ಗಾಯಗೊಂಡಿದ್ದಾನೆ.

ಹೆಬ್ಬಾಳ ಸಂಚಾರ ಪೊಲೀಸ್‌‍ ಠಾಣೆ ವ್ಯಾಪ್ತಿಯ ಫ್ಲೈ ಓವರ್‌ ಮೇಲೆ ನಿನ್ನೆ ಬೆಳಗ್ಗೆ 9 ಗಂಟೆ ಸುಮಾರಿನಲ್ಲಿ ಬಿಎಂಟಿಸಿ ವೋಲ್ವೋ ಬಸ್‌‍ ಎಚ್‌ಎಸ್‌‍ಆರ್‌ ಲೇಔಟ್‌ ಕಡೆಗೆ ಹೋಗುತ್ತಿತ್ತು.

ಅದೇ ಸಮಯದಲ್ಲಿ ಯಲಹಂಕ ಕಡೆಯಿಂದ ಆರ್‌ಟಿ ನಗರದ ಕಡೆಗೆ ಆಕಾಶ್‌ ಪಾಟೀಲ್‌ (27) ಬೈಕ್‌ನಲ್ಲಿ ಹೋಗುತ್ತಿದ್ದಾಗ ಎಸ್‌‍ಟಿ ಮಾಲ್‌ ಬಳಿ ಈ ಬಸ್‌‍ ಡಿಕ್ಕಿ ಹೊಡೆದು ನಂತರ ಮುಂದೆ ಚಲಿಸುತ್ತಿದ್ದ ಮೂರು ಕಾರುಗಳಿಗೆ ಅಪ್ಪಳಿಸಿದ ಪರಿಣಾಮ ಸರಣಿ ಅಪಘಾತ ಸಂಭವಿಸಿದೆ.

ಅಪಘಾತದಲ್ಲಿ ಗಾಯಗೊಂಡ ಆಕಾಶ್ನನ್ನು ತಕ್ಷಣ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದ್ದು, ಆತ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಈ ಬಗ್ಗೆ ಹೆಬ್ಬಾಳ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

RELATED ARTICLES

Latest News