Friday, November 22, 2024
Homeರಾಜ್ಯಬೆಂಗಳೂರು-ಮಂಗಳೂರು ರೈಲು ಸಂಚಾರ ಪುನರಾರಂಭ

ಬೆಂಗಳೂರು-ಮಂಗಳೂರು ರೈಲು ಸಂಚಾರ ಪುನರಾರಂಭ

ಮಂಗಳೂರು,ಅ.14 (ಪಿಟಿಐ) ಬಾಳುಪೇಟೆ ಮತ್ತು ಸಕಲೇಶಪುರ ನಡುವೆ ಭೂಕುಸಿತದಿಂದ ಹಾನಿಗೊಳಗಾದ ಹಳಿಯನ್ನು ಪುನರ್‌ ಸ್ಥಾಪಿಸಲಾಗಿದೆ.ಹೀಗಾಗಿ ಇಂದಿನಿಂದ ಬೆಂಗಳೂರು-ಮಂಗಳೂರು ಸೆಕ್ಟರ್‌ನಲ್ಲಿ ಸೇವೆಯನ್ನು ಪುನರಾರಂಭಿಸುವುದಾಗಿ ನೈಋತ್ಯ ರೈಲ್ವೆ ತಿಳಿಸಿದೆ.

ಆಗಸ್ಟ್‌ 10 ರ ಮುಂಜಾನೆ ಮೈಸೂರು ವಿಭಾಗದ ಬಾಳುಪೇಟೆ ಮತ್ತು ಸಕಲೇಶಪುರ ನಡುವೆ ಭೂಕುಸಿತ ಸಂಭವಿಸಿದ ನಂತರ ಸೇವೆಗಳನ್ನು ರದ್ದುಗೊಳಿಸಲಾಗಿತ್ತು.

ಅಧಿಕಾರಿಗಳ ಪ್ರಕಾರ, ಬೆಂಗಳೂರು-ಮಂಗಳೂರು ಹಾಗೂ ಕಾರವಾರ ಸೆಕ್ಟರ್‌ನಲ್ಲಿ ರಾತ್ರಿಯ ಮೂರು ರೈಲುಗಳನ್ನು ಅಲ್ಪಾವಧಿಗೆ ನಿಲ್ಲಿಸಲಾಗಿದೆ.ಅದೇ ಭಾಗದಲ್ಲಿ ಹೊಸದಾಗಿ ಭೂಕುಸಿತ ಸಂಭವಿಸಿದ್ದರಿಂದ ಟ್ರ್ಯಾಕ್‌ ಮರುಸ್ಥಾಪನೆ ಕಾರ್ಯಕ್ಕೆ ಸಾಕಷ್ಟು ಸಮಯ ಬೇಕಾಗಿತ್ತು.

ಜುಲೈ 26 ರಿಂದ ಆಗಸ್ಟ್‌ 9 ರವರೆಗೆ ಸಕಲೇಶಪುರ-ಸುಬ್ರಹ್ಮಣ್ಯ ರಸ್ತೆ ಘಾಟ್‌ ಮಾರ್ಗದಲ್ಲಿ ಯಡಕುಮಾರಿ ಮತ್ತು ಕಡಗರವಳ್ಳಿ ನಿಲ್ದಾಣಗಳ ನಡುವೆ ಭೂಕುಸಿತದಿಂದಾಗಿ ಈ ವಲಯದಲ್ಲಿ ಸೇವೆಗಳ ಮೇಲೆ ಪರಿಣಾಮ ಬೀರಿತು. ಸೇವೆಗಳನ್ನು ಪುನರಾರಂಭಿಸಿದ ಒಂದು ದಿನದೊಳಗೆ, ಹೊಸ ಭೂಕುಸಿತಗಳು ರೈಲು ಸೇವೆಗಳನ್ನು ತಡೆದಿದ್ದವು.

RELATED ARTICLES

Latest News