Thursday, September 19, 2024
Homeರಾಷ್ಟ್ರೀಯ | Nationalಕಾಶ್ಮೀರದ ದೋಡಾದಲ್ಲಿ ಭೀಕರ ಗುಂಡಿನ ಚಕಮಕಿ, ಸೇನಾಧಿಕಾರಿ ಹುತಾತ್ಮ, ನಾಲ್ವರು ಉಗ್ರರು ಫಿನಿಶ್

ಕಾಶ್ಮೀರದ ದೋಡಾದಲ್ಲಿ ಭೀಕರ ಗುಂಡಿನ ಚಕಮಕಿ, ಸೇನಾಧಿಕಾರಿ ಹುತಾತ್ಮ, ನಾಲ್ವರು ಉಗ್ರರು ಫಿನಿಶ್

ಶ್ರೀನಗರ,ಆ.14- ಉಗ್ರರು ಹಾಗೂ ಸೇನಾಪಡೆಗಳ ನಡುವೆ ನಡೆದ ಭೀಕರ ಗುಂಡಿನ ಚಕಮಕಿಯಲ್ಲಿ ಓರ್ವ ಸೇನಾಧಿಕಾರಿ ಸಾವನ್ನಪ್ಪಿ ನಾಲ್ವರು ಭಯೋತ್ಪಾದಕರು ಹತರಾಗಿರುವ ಘಟನೆ ಜಮ್ಮು-ಕಾಶ್ಮೀರದ ದೋಡಾ ಜಿಲ್ಲೆಯಲ್ಲಿ ನಡೆದಿದೆ.

ಘಟನೆಯಲ್ಲಿ 48ನೇ ರಾಷ್ಟ್ರೀಯ ರೈಫಲ್‌್ಸನ ಕ್ಯಾಪ್ಟನ್‌ ಅವರು ಸಾವನ್ನಪ್ಪಿರುವುದನ್ನು ಖಚಿತಪಡಿಸಿರುವ ಅಧಿಕಾರಿಗಳು ಕೆಲವು ಸೈನಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಮಾಹಿತಿ ನೀಡಿದ್ದಾರೆ.

ಇದೇ ಸಂದರ್ಭದಲ್ಲಿ ಸೇನಾಪಡೆಗಳು ನಡೆಸಿದ ಮಿಂಚಿನ ಕಾರ್ಯಾಚರಣೆಯಲ್ಲಿ ನಾಲ್ವರು ಉಗ್ರರು ಸಾವನ್ನಪ್ಪಿದ್ದಾರೆ. ದೋಡಾ ಜಿಲ್ಲೆಯ ದಟ್ಟಾರಣ್ಯ ಪ್ರದೇಶದಲ್ಲಿ ಉಗ್ರರು ಅಡಗಿ ಕುಳಿತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಸೇನಾಪಡೆ ಮುಂಜಾನೆಯಿಂದಲೇ ಈ ಭಾಗದಲ್ಲಿ ಸುತ್ತುವರಿದಿತ್ತು.

ಜಿಲ್ಲೆಯ ಶಿವ್‌ನಗರ-ಅಸ್ಸಾರ್‌ ಪ್ರದೇಶದಲ್ಲಿ ಉಗ್ರರು ಅಡಗಿ ಕುಳಿತಿದ್ದಾರೆ ಎಂಬ ಸುಳಿವು ಸಿಕ್ಕ ತಕ್ಷಣವೇ ಪೊಲೀಸರು ಸುತ್ತುವರಿದು ಕಾರ್ಯಾಚರಣೆಗಿಳಿದರು. ಪ್ರಾರಂಭದಲ್ಲಿ ಶರಣಾಗುವಂತೆ ಉಗ್ರರಿಗೆ ಸೂಚನೆ ಕೊಡಲಾಗಿತ್ತು. ಆದರೆ ಶರಣಾಗುವ ಬದಲು ಸೇನಾಪಡೆಗಳ ಮೇಲೆ ಗುಂಡಿನ ದಾಳಿ ನಡೆಸಲಾಯಿತು.

ಇದಕ್ಕೆ ಪ್ರತಿಯಾಗಿ ಸೇನಾಪಡೆಗಳು ನಡೆಸಿದ ಗುಂಡಿನ ದಾಳಿಯಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ. ಜೊತೆಗೆ ಎಂ 4 ಪಿಸ್ತೂಲು, ಬಟ್ಟೆ ಸೇರಿದಂತೆ ಕೆಲವು ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಅಡಗಿ ಕುಳಿತಿರುವ ಉಗ್ರರ ಶೋಧ ಕಾರ್ಯಕ್ಕೆ ಕಾರ್ಯಾಚರಣೆ ಮುಂದುವರೆದಿದೆ. ಆಕಾರ್‌ ಅರಣ್ಯಪ್ರದೇಶದಲ್ಲಿ ಉಗ್ರರು ಬೀಡು ಬಿಟ್ಟಿದ್ದು, ಪ್ರಮುಖವಾಗಿ ಸೇನಾಪಡೆ ಮತ್ತು ಸ್ಥಳೀಯ ಪೊಲೀಸರನ್ನು ಗುರಿಯಾಗಿಟ್ಟುಕೊಂಡು ದಾಳಿ ನಡೆಸುತ್ತಿದ್ದಾರೆ.

ಇದೀಗ ಇಡೀ ಪ್ರದೇಶವನ್ನು ಸುತ್ತುವರಿದಿರುವ ಸೇನಾಪಡೆ ಉಗ್ರರನ್ನು ಸದೆಬಡಿಯಲು ಹೆಚ್ಚುವರಿ ಸೈನಿಕರನ್ನು ಕರೆಸಿಕೊಳ್ಳಲಾಗಿದೆ. ಘಟನೆ ಕುರಿತಂತೆ ಸೇನಾಪಡೆಯ ಮುಖ್ಯಸ್ಥ ಜನರಲ್‌ ಉಪೇಂದ್ರ ದ್ವಿವೇದಿಯವರು ಕೇಂದ್ರ ರಕ್ಷಣಾ ಸಚಿವ ರಾಜನಾಥ ಸಿಂಗ್‌ ಅವರಿಗೆ ಎಲ್ಲಾ ಮಾಹಿತಿಯನ್ನು ಒದಗಿಸಿದ್ದಾರೆ.

ದೋಡಾ ಮತ್ತು ಉಧಂಪುರ ಜಿಲ್ಲೆಯ ಪಟ್ನಿಟಾಪ್‌ ಎಂಬ ಪ್ರದೇಶದಿಂದ ಒಳನುಸುಳಿದ್ದಾರೆ ಎಂದು ಶಂಕಿಸಲಾಗಿದೆ. ಉಗ್ರರನ್ನು ಸಂಪೂರ್ಣವಾಗಿ ಸದೆಬಡಿಯುವಂತೆ ಸೇನಾಮುಖ್ಯಸ್ಥರು ಸೂಚನೆ ಕೊಟ್ಟಿದ್ದಾರೆ.

RELATED ARTICLES

Latest News