Friday, November 22, 2024
Homeರಾಷ್ಟ್ರೀಯ | Nationalಭ್ರಾತೃತ್ವ ನಾಶಪಡಿಸಲು ಕೆಲವು ಶಕ್ತಿಗಳು ಯತ್ನಿಸುತ್ತಿವೆ : ಮಲ್ಲಿಕಾರ್ಜುನ ಖರ್ಗೆ

ಭ್ರಾತೃತ್ವ ನಾಶಪಡಿಸಲು ಕೆಲವು ಶಕ್ತಿಗಳು ಯತ್ನಿಸುತ್ತಿವೆ : ಮಲ್ಲಿಕಾರ್ಜುನ ಖರ್ಗೆ

ನವದೆಹಲಿ, ಆ.15 (ಪಿಟಿಐ) ಕೆಲವು ಶಕ್ತಿಗಳು ತಮ ಅಭಿಪ್ರಾಯಗಳನ್ನು ಬಲವಂತವಾಗಿ ಹೇರುವ ಮೂಲಕ ನಮ್ಮ ಭ್ರಾತತ್ವವನ್ನು ನಾಶಪಡಿಸಲು ಯತ್ನಿಸುತ್ತಿವೆ ಮತ್ತು ಸಂವಿಧಾನವನ್ನು ರಕ್ಷಿಸಲು ಜನರು ತ್ಯಾಗ ಮಾಡಲು ಸಿದ್ಧರಾಗಿರಬೇಕು ಎಂದು ಕಾಂಗ್ರೆಸ್‌‍ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕರೆ ನೀಡಿದ್ದಾರೆ.

ಸಾಂವಿಧಾನಿಕ ಮತ್ತು ಸ್ವಾಯತ್ತ ಸಂಸ್ಥೆಗಳನ್ನು ಸರ್ಕಾರವು ಗೊಂಬೆ ಗಳಾಗಿ ಪರಿವರ್ತಿಸಿರುವುದು ಕಳವಳಕಾರಿ ಸಂಗತಿಯಾಗಿದೆ ಎಂದು ಖರ್ಗೆ 78 ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ತಮ ಸಂದೇಶದಲ್ಲಿ ಹೇಳಿದ್ದಾರೆ.ಪ್ರಜಾಪ್ರಭುತ್ವ ಮತ್ತು ಸಂವಿಧಾನವು 140 ಕೋಟಿ ಭಾರತೀಯರಿಗೆ ದೊಡ್ಡ ಗುರಾಣಿಯಾಗಿದೆ ಎಂದು ಖರ್ಗೆ ಹೇಳಿದರು ಮತ್ತು ನಾವು ನಮ ಕೊನೆಯ ಉಸಿರು ಇರುವವರೆಗೂ ಅದನ್ನು ರಕ್ಷಿಸುತ್ತೇವೆ ಎಂದು ಪ್ರತಿಪಾದಿಸಿದರು.

ಪ್ರತಿಪಕ್ಷಗಳು ಪ್ರಜಾಪ್ರಭುತ್ವಕ್ಕೆ ಆಮ್ಲಜನಕವಿದ್ದಂತೆ. ಸರ್ಕಾರದ ಅಸಾಂವಿಧಾನಿಕ ಧೋರಣೆಯನ್ನು ನಿಲ್ಲಿಸುವುದರ ಜೊತೆಗೆ ಸಾರ್ವಜನಿಕರ ಸಮಸ್ಯೆಗಳನ್ನು ಸಹ ಎತ್ತುತ್ತದೆ ಎಂದು ಅವರು ಎಕ್‌್ಸನಲ್ಲಿ ಪೋಸ್ಟ್‌ ಮಾಡಿದ ವೀಡಿಯೊ ಸಂದೇಶದಲ್ಲಿ ತಿಳಿಸಿದ್ದಾರೆ.

ವಿವಿಧತೆಯಲ್ಲಿ ಏಕತೆ ಕಾಪಾಡುವುದು ನಮ ಸ್ವಾತಂತ್ರ್ಯ ಹೋರಾಟಗಾರರ ಕನಸಾಗಿತ್ತು. ಆದರೆ ಕೆಲವು ಶಕ್ತಿಗಳು ಬಲವಂತವಾಗಿ ದೇಶದ ಮೇಲೆ ತಮ ಅಭಿಪ್ರಾಯಗಳನ್ನು ಹೇರುವ ಮೂಲಕ ನಮ ಸಹೋದರತ್ವವನ್ನು ನಾಶಮಾಡಲು ಪ್ರಯತ್ನಿಸುತ್ತಿವೆ ಎಂದು ಖರ್ಗೆ ಆರೋಪಿಸಿದರು.

ಆದ್ದರಿಂದ, ಅಭಿವ್ಯಕ್ತಿ, ಜೀವನ, ಆಹಾರ ಪದ್ಧತಿ, ಬಟ್ಟೆ, ಪೂಜಾ ವಿಧಾನಗಳು ಮತ್ತು ಎಲ್ಲಿ ಬೇಕಾದರೂ ಚಲಿಸುವ ಸ್ವಾತಂತ್ರ್ಯದ ಬಗ್ಗೆ ಸಂವಿಧಾನದಲ್ಲಿ ನೀಡಿರುವ ಸ್ವಾತಂತ್ರ್ಯದ ಬಗ್ಗೆ ನಾವೆಲ್ಲರೂ ಜಾಗತರಾಗಿರುವುದು ಮುಖ್ಯವಾಗಿದೆ ಎಂದು ಅವರು ಹೇಳಿದರು.

ಕಾಂಗ್ರೆಸ್‌‍ ಪಕ್ಷದ ಅಧ್ಯಕ್ಷನಾಗಿ, ನಾನು ನಿರುದ್ಯೋಗ, ಹಣದುಬ್ಬರ, ಬಡತನ, ಭ್ರಷ್ಟಾಚಾರ ಮತ್ತು ಅಸಮಾನತೆಯ ವಿರುದ್ಧ ಹೋರಾಟವನ್ನು ಮುಂದುವರಿಸುತ್ತೇವೆ ಎಂದು ನಾನು ಎಲ್ಲ ಜನರಿಗೆ ಭರವಸೆ ನೀಡಲು ಬಯಸುತ್ತೇನೆ. ಸಂವಿಧಾನವನ್ನು ರಕ್ಷಿಸಲು ಎಲ್ಲಾ ತ್ಯಾಗಕ್ಕೂ ಸಿದ್ಧರಾಗಿರಿ. ಇದು ನಮ ಪೂರ್ವಜರಿಗೆ ನೀಡುವ ನಿಜವಾದ ಗೌರವವಾಗಿದೆ ಎಂದು ಖರ್ಗೆ ಹೇಳಿದರು.

ಜನತೆಗೆ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳನ್ನು ಕೋರಿದರು. ನಮ ಲಕ್ಷಾಂತರ ಮಹಾನ್‌ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗವನ್ನು ನಾವು ಸರಿಸುತ್ತೇವೆ ಮತ್ತು ಅವರಿಗೆ ನಮ ನಮನಗಳನ್ನು ಸಲ್ಲಿಸುತ್ತೇವೆ ಎಂದು ಅವರು ತಿಳಿಸಿದ್ದಾರೆ.

RELATED ARTICLES

Latest News