ಶ್ರಾವಣ ಮಾಸ ಗಾಂಧಿನಗರಕ್ಕೆ ಶುಕ್ರ ದೆಸೆ ತಂದುಕೊಡುವ ಭರವಸೆಯನ್ನು ಮೂಡಿಸಿದೆ. ಪ್ರೇಕ್ಷಕರು ಸಿನಿಮಾ ಥಿಯೇಟರ್ಗಳತ್ತ ಬರುತ್ತಿಲ್ಲ ಎಂಬ ಕೂಗು ಸುಮಾರು ದಿನಗಳಿಂದ ಕೇಳಿಬರುತ್ತದೆ. ಆದರೆ ಕಳೆದ ವಾರ ಬಿಡುಗಡೆಯಾದ ದುನಿಯಾ ವಿಜಯ್ ನಿರ್ದೇಶನ ಮಾಡಿ ಅಭಿನಯಿಸಿರುವ ಭೀಮ ಯಶಸ್ವಿಯಾಗಿ ಪ್ರದರ್ಶನಗೊಳ್ಳುವ ಮೂಲಕ ಆ ಕಳಂಕವನ್ನು ತೆಗೆದುಹಾಕಿದೆ. ಉತ್ತಮ ಸಿನಿಮಾಕೊಟ್ಟಾಗ ಪ್ರೇಕ್ಷಕರು ಇಷ್ಟಪಡುತ್ತಾರೆ ಎಂಬುದನ್ನು ನಿರೂಪಿಸಿದೆ. ನಾಳೆಯೂ ಕೂಡ ಗೋಲ್ಡನ್ ಸ್ಟಾರ್ ಗಣೇಶ್ ನಟಿಸಿರುವ ಕೃಷ್ಣಂ ಪ್ರಣಯ ಸಖಿ ಸಿನಿಮಾ ರಾಜ್ಯದ್ಯಂತ ಬಿಡುಗಡೆಯಾಗಿದೆ.
ಈ ಚಿತ್ರವೂ ಕೂಡ ಪ್ರೇಕ್ಷಕರಲ್ಲಿ ತುಂಬಾ ಭರವಸೆಯನ್ನು ಮೂಡಿಸಿದೆ. ಈಗಾಗಲೇ ಹಾಡುಗಳು ಸಖತ್ ವೈರಲ್ ಆಗಿ ಎಲ್ಲರ ಮನ ಮುಟ್ಟಿವೆ. ಟ್ರೈಲರ್ ಮತ್ತು ಟೀಸರ್ ಭರವಸೆಯನ್ನು ದುಪ್ಪಟ್ಟು ಮಾಡಿವೆ. ಗಣೇಶ್ ತನ್ನ ಅಭಿಮಾನಿಗಳಿಗಾಗಿ ಕೆಲ ದಿನಗಳ ನಂತರ ಸಂಪೂರ್ಣ ಮನರಂಜನೆ ನೀಡಲು ತಯಾರಾಗಿ ಬರುತ್ತಿದ್ದಾರೆ. ಅದಕ್ಕಾಗಿ 8 ನಾಯಕಿಯರನ್ನು ಸಿನಿಮಾದಲ್ಲಿ ಇರಿಸಿ ಅವರೊಂದಿಗೆ ರೋಮ್ಯಾನ್ಸ್ ಮಾಡಿದ್ದಾರೆ.
ಇಂದು ಬಿಡುಗಡೆಯಾದ ಕೃಷ್ಣಂ ಪ್ರಣಯ ಸಖಿ ಪ್ರೀತಿಯ ಆಧಾರಿತ ಕಥೆಯಾಗಿದ್ದು, ಬರೋಬ್ಬರಿ 8 ನಾಯಕಿಯರೊಂದಿಗೆ ನಾಯಕ ಏನೇನು ಮಾಡುತ್ತಾನೆಂಬುದು ಕುತೂಹಲಕಾರಿ ವಿಷಯ. ಲವ್, ಸಸ್ಪೆನ್ಸ್ , ರೋಮ್ಯಾನ್ಸ್ , ಎಮೋಷ್ಸ್ ಜೊತೆಗೆ ಕಾಮಿಡಿ ಕಚಗುಳಿ ಜೋರಾಗಿದೆಯಂತೆ. ಮುಖ್ಯವಾಗಿ ಸಂಗೀತಕ್ಕೆ ಹೆಚ್ಚು ಒತ್ತುಕೊಟ್ಟು ಅರ್ಜುನ್ ಜನ್ಯ ಏಳು ಹಾಡುಗಳನ್ನು ಸಂಯೋಜನೆ ಮಾಡುವ ಮೂಲಕ ಇದೊಂದು ಸಂಗೀತಮಯ ಚಿತ್ರ ಎಂದು ಹೇಳಿಕೊಂಡಿದ್ದಾರೆ.
ಆನಂದ್ ಆಡಿಯೋ ಸಂಸ್ಥೆ ಹೆಚ್ಚು ಹಣವನ್ನು ಕೊಟ್ಟು ಆಡಿಯೋ ರೈಟ್ಸನ್ನುಪಡೆದಿದ್ದಾರೆ. ಚಿತ್ರಕಂಡ ಹೇಳಿಕೊಳ್ಳುವ ಪ್ರಕಾರ ಇದೊಂದು ದಾಖಲೆ ಮೊತ್ತವಾಗಿದೆಯಂತೆ. ಬಿಡುಗಡೆಯಾಗಿರುವ ಪ್ರತಿಯೊಂದು ಹಾಡು ಕೂಡ ಒಂದಕ್ಕೊಂದು ಹೆಚ್ಚು ಜನಪ್ರಿಯವಾಗಿವೆ. ದಂಡುಪಾಳ್ಯದಂತಹ ಕಂಟೆಂಟ್ ಪ್ರಧಾನ ಚಿತ್ರಗಳನ್ನು ನಿರ್ದೇಶನ ಮಾಡಿದ್ದ ಶ್ರೀನಿವಾಸ್ ರಾಜು ಮೊಟ್ಟಮೊದಲ ಬಾರಿಗೆ ರೋಮ್ಯಾಂಟಿಕ್ ಲೇಪಿತ ಸ್ಕ್ರೀನ್ ಪ್ಲೇ ಹೆಣೆದು ಪ್ರೇಕ್ಷಕರ ಮುಂದೆ ಬರಲು ಮುಂದಾಗಿದ್ದಾರೆ.
ಅದ್ಧೂರಿ ಬಜೆಟ್ ನೊಂದಿಗೆ ಚಿತ್ರವನ್ನು ನಿರ್ಮಾಣ ಮಾಡಿರುವುದು ಪ್ರಶಾಂತ್. ನಿರ್ದೇಶಕ ಶ್ರೀನಿವಾಸ್ ರಾಜು ಕಥೆ ಹೇಳಿದ ತಕ್ಷಣ ಈ ಚಿತ್ರವನ್ನು ನಿರ್ಮಾಣ ಮಾಡಬೇಕೆಂಬ ಹಂಬಲದೊಂದಿಗೆ ಬಹುಕೋಟಿಯನ್ನು ಖರ್ಚು ಮಾಡಿ ನಿರ್ದೇಶಕರ ಬೆನ್ನೆಲುಬಾಗಿ ನಿಂತಿದ್ದಾರೆ. ಶರಣ್ಯ ಶೆಟ್ಟಿ, ಮಾಳವಿಕಾ ನಾಯರ್, ರಂಗಾಯಣ ರಘು, ಶ್ರುತಿ ಮತ್ತು ಸಾಧು ಕೋಕಿಲ ಸೇರಿದಂತೆ ಹಲವು ಕಲಾವಿದರು ನಟಿಸಿದ್ದಾರೆ. ಶ್ರಾವಣ ಮಾಸಕ್ಕೆ ಗೋಲ್ಡನ್ ಸ್ಟಾರ್ ಒಳ್ಳೆ ಉಡುಗೊರೆ ಕೊಡಲಿದ್ದಾರೆ ಎಂಬ ಮಾತುಗಳು ಗಾಂಧಿನಗರದಲ್ಲಿ ಕೇಳುತ್ತಿವೆ.