ಮೈಸೂರು,ಜ.9- ಜನವರಿ 30ರಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಚುನಾವಣೆ ನಡೆಯಲಿದ್ದು, ಈ ಬಾರಿ ಅಧ್ಯಕ್ಷ ಸ್ಥಾನಕ್ಕೆ ನಟಿ ಜಯಮಾಲಾ ಅವರು ಸ್ಪರ್ಧಿಸುತ್ತಿರುವ ಹಿನ್ನೆಲೆಯಲ್ಲಿ ಪ್ರಚಾರ ಕೈಗೊಂಡಿದ್ದಾರೆ.
ಇದಕ್ಕೂ ಮುನ್ನ ಮೈಸೂರಿಗೆ ಆಗಮಿಸಿ ಚಾಮುಂಡಿ ಬೆಟ್ಟಕ್ಕೆ ತೆರಳಿ ತಾಯಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾಜಿ ಅಧ್ಯಕ್ಷರಾದ ಸಾರಾ ಗೋವಿಂದ್, ಹಾಲಿ ಅಧ್ಯಕ್ಷರಾದ ನರಸಿಂಹ ಕೊಲ್ಲು ಚಿನ್ನೇಗೌಡ, ಎಂ ಎನ್ ಸುರೇಶ್, ಎಂ ಎನ್ ಕುಮಾರ್, ಸಂದೇಶ್ ನಾಗರಾಜ್, ಕಾರ್ಯದರ್ಶಿ ಗಣೇಶ್, ರಾಮಕೃಷ್ಣ, ಅಶೋಕ್ ಕುಮಾರ್, ಹಾಗೂ ಇನ್ನಿತರರು ಜಯಮಾಲಾ ಪರ ಪ್ರಚಾರಕ್ಕೆ ಭಾಗಿಯಾಗಿದ್ದರು.
ಇದೇ ವೇಳೆ ಗೋಲ್ಡನ್ ಸುರೇಶ್ ಫಿಲಂಸ್ ವತಿಯಿಂದ ಜಯಮಾಲ ರವರಿಗೆ ಸನಾನಿಸಿ ತಮ ತಂಡಕ್ಕೆ ಬೆಂಬಲ ಸೂಚಿಸಿದರು. ಈ ಸಂದರ್ಭದಲ್ಲಿ ನಿರ್ಮಾಪಕರಾದ ಎಂ ಡಿ ಪಾರ್ಥಸಾರಥಿ, ಸುರೇಶ್ ಗೋಲ್‌್ಡ, ನಂದೀಶ್ ನಾಯಕ್, ವಿಕ್ರಂ ಅಯ್ಯಂಗಾರ್, ಪ್ರಮೀಳಾ, ಶೋಭಾ, ಹಾಗೂ ಇನ್ನಿತರರು ಜಯಲಮಾಲ ಅವರಿಗೆ ಶುಭ ಕೋರಿದರು.
