Friday, November 22, 2024
Homeರಾಷ್ಟ್ರೀಯ | Nationalಮಾಜಿ ಪ್ರಧಾನಿ ವಾಜಪೇಯಿ ಪುಣ್ಯತಿಥಿ : ಗಣ್ಯರ ನಮನ

ಮಾಜಿ ಪ್ರಧಾನಿ ವಾಜಪೇಯಿ ಪುಣ್ಯತಿಥಿ : ಗಣ್ಯರ ನಮನ

ನವದೆಹಲಿ, ಆ.16 (ಪಿಟಿಐ) ಮಾಜಿ ಪ್ರಧಾನಿ ಹಾಗೂ ಬಿಜೆಪಿಯ ದಿಗ್ಗಜ ಅಟಲ್‌ ಬಿಹಾರಿ ವಾಜಪೇಯಿ ಅವರ ಪುಣ್ಯತಿಥಿಯಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಪ್ರಧಾನಿ ನರೇಂದ್ರ ಮೋದಿ ಮತ್ತಿತರ ಗಣ್ಯರು ಶ್ರದ್ಧಾಂಜಲಿ ಸಲ್ಲಿಸಿದರು.

ವಾಜಪೇಯಿ ಅವರ ಸಾರಕ ಸದೈವ್‌ ಅಟಲ್‌‍ಗೆ ಶ್ರದ್ಧಾಂಜಲಿ ಸಲ್ಲಿಸಲು ಕೇಂದ್ರ ಸಚಿವರು ಸೇರಿದಂತೆ ಇತರ ಗಣ್ಯರು ಮತ್ತು ವಿವಿಧ ಪಕ್ಷಗಳ ಮುಖಂಡರು ಆಗಮಿಸಿದ್ದರು.

ಅತ್ಯುತ್ತಮ ವಾಗಿಗಳೆಂದು ಗುರುತಿಸಲ್ಪಟ್ಟ ವ್ಯಾಪಕವಾಗಿ ಗೌರವಾನ್ವಿತ ರಾಜಕಾರಣಿ, ವಾಜಪೇಯಿ ಅವರು 90 ರ ದಶಕದ ಸಮಿಶ್ರ ಯುಗದಲ್ಲಿ ತಮ ಪಕ್ಷಕ್ಕೆ ಮಿತ್ರರನ್ನು ಸೆಳೆಯುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಿದರು ಮತ್ತು ಬಿಜೆಪಿಯಿಂದ ಮೊದಲ ಪ್ರಧಾನಿ ಎಂಬ ಹೆಗ್ಗಳಿಕೆಗೆ ಅಟಲ್‌ ಪಾತ್ರರಾಗಿದ್ದರು.

1998-2004 ರ ನಡುವಿನ ಅವರ ಆಡಳಿತ ದೇಶದ ಉಸ್ತುವಾರಿ ಸುಧಾರಣೆಗಳು ಮತ್ತು ಮೂಲಸೌಕರ್ಯ ಕ್ಷೇತ್ರಗಳಿಗೆ ಉತ್ತೇಜನಕ್ಕೆ ಹೆಸರುವಾಸಿಯಾಗಿದೆ. ಅವರು 2018 ರಲ್ಲಿ 93 ನೇ ವಯಸ್ಸಿನಲ್ಲಿ ನಿಧನರಾದರು.

RELATED ARTICLES

Latest News