ನವದೆಹಲಿ, ಆ.16 (ಪಿಟಿಐ) ಜೈಲಿನಲ್ಲಿರುವ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ಗೆ ಆಪ್ ಹಿರಿಯ ನಾಯಕ ಮನೀಶ್ ಸಿಸೋಡಿಯಾ ಜನದಿನದ ಶುಭಾಶಯಗಳನ್ನು ಕೋರಿದ್ದು, ಪಕ್ಷದ ವರಿಷ್ಠರು ದೇಶದಲ್ಲಿ ನಡೆಯುತ್ತಿರುವ ಸರ್ವಾಧಿಕಾರದ ವಿರುದ್ಧ ಕಠಿಣ ಹೋರಾಟ ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಕೇಜ್ರಿವಾಲ್ ಅವರ ಜನದಿನವನ್ನು ಆಚರಿಸಲು ಆಮ್ ಆದಿ ಪಕ್ಷವು ಸರಣಿ ಕಾರ್ಯಕ್ರಮಗಳನ್ನು ನಡೆಸಲಿದೆ. ದೇಶದಲ್ಲಿ ನಡೆಯುತ್ತಿರುವ ಸರ್ವಾಧಿಕಾರದ ವಿರುದ್ಧ ಅತ್ಯಂತ ಕಠಿಣ ಹೋರಾಟ ನಡೆಸಿದ ನನ್ನ ಆತೀಯ ಸ್ನೇಹಿತ ಮತ್ತು ರಾಜಕೀಯ ಗುರು ಅರವಿಂದ್ ಕೇಜ್ರಿವಾಲ್ ಜಿ ಅವರಿಗೆ ಜನದಿನದ ಶುಭಾಶಯಗಳು ಎಂದು ಅವರು ಎಕ್‌್ಸ ಮಾಡಿದ್ದಾರೆ.
ಸರ್ವಾಧಿಕಾರಿಯ ಮುಂದೆ ಮಂಡಿಯೂರಿ ಕೂರುವುದಕ್ಕಿಂತ ಜೈಲಿಗೆ ಹೋಗಲು ಆಯ್ಕೆ ಮಾಡಿದ ದೇಶಭಕ್ತ ಮತ್ತು ಕ್ರಾಂತಿಕಾರಿ ನಾಯಕನ ಸೈನಿಕರು ಎಂದು ನಾವು ಹೆಮೆಪಡುತ್ತೇವೆ. ಇಂದು ದೇಶದ ಪ್ರಜಾಪ್ರಭುತ್ವವು ಅರವಿಂದ್ ಕೇಜ್ರಿವಾಲ್ ರೂಪದಲ್ಲಿ ಜೈಲಿನಲ್ಲಿದೆ ಎಂದು ಸಿಸೋಡಿಯಾ ಹೇಳಿದ್ದಾರೆ.
ದೆಹಲಿ ಸಚಿವೆ ಅತಿಶಿ ಅವರು ಕೇಜ್ರಿವಾಲ್ ಅವರನ್ನು ಆಧುನಿಕ ಭಾರತದ ಕ್ರಾಂತಿಕಾರಿ ಎಂದು ಬಣ್ಣಿಸಿದರು ಮತ್ತು ಅವರು ಶೀಘ್ರದಲ್ಲೇ ಜೈಲಿನಿಂದ ಹೊರಬರುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ತಮ್ಮ ಪ್ರಾಮಾಣಿಕ ರಾಜಕಾರಣದಿಂದ ದೆಹಲಿ ಜನತೆಯಲ್ಲಿ ಹೊಸ ಭರವಸೆ ಮೂಡಿಸಿದರು. ಸರ್ವಾಧಿಕಾರದ ವಿರುದ್ಧ ಹೋರಾಡುತ್ತಲೇ ಕೋಟ್ಯಂತರ ಜನರ ಭವಿಷ್ಯ ರೂಪಿಸಿದ ಅರವಿಂದ್ ಜಿ ಇಂದು ಸುಳ್ಳು ಪ್ರಕರಣದಲ್ಲಿ ಜೈಲು ಪಾಲಾಗಿದ್ದಾರೆ. ಆದರೆ ಸತ್ಯಕ್ಕೆ ಜಯ ಸಿಗಲಿದೆ ಮತ್ತು ದೆಹಲಿಯ ನೆಚ್ಚಿನ ಮುಖ್ಯಮಂತ್ರಿ ಹೊರಗೆ ಬರಲಿದ್ದಾರೆ ಎಂದು ಅವರು ಎಕ್ಸ್ ಮಾಡಿದ್ದಾರೆ.