ಬೆಂಗಳೂರು,ಅ.21- ರಾಜ್ಯದಲ್ಲಿ ಬರ ಪರಿಸ್ಥಿತಿ, ವಿದ್ಯುತ್ ಅಭಾವ ಸೇರಿದಂತೆ ಸಾಕಷ್ಟು ಸಮಸ್ಯೆಗಳಿದ್ದರೂ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಸಚಿವರು, ಕಾರ್ಯದರ್ಶಿಗಳು ನಿನ್ನೆ ಕ್ರಿಕೆಟ್ ಪಂದ್ಯಾವಳಿ ವೀಕ್ಷಣೆ ಮಾಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಟೀಕಿಸಿದರು. ಭಾರತ- ಪಾಕಿಸ್ತಾನ ನೋಡಲಿ ಎನ್ನಬಹುದಿತ್ತು. ಆದರೆ ಪಂದ್ಯವಿದ್ದದು ಪಾಕಿಸ್ತಾನ, ಆಸ್ಟ್ರೇಲಿಯ ನಡುವೆ. ಯಾರಿಗೆ ಬೆಂಬಲ ವ್ಯಕ್ತಪಡಿಸಿ ಹೋಗಿದ್ದರು ಎಂದು ಪ್ರಶ್ನಿಸಿದರು. ತಾವು ಕ್ರೀಡೆಗಳ ವಿರೋಯಲ್ಲ. ನಮ್ಮ ಬೆಂಬಲವೂ ಇದೆ. ಆದರೆ ಬರಗಾಲ, ವಿದ್ಯುತ್ ಅಭಾವದ ಸಂದರ್ಭದಲ್ಲಿ ಸಮಯ ಅವಕಾಶ ಮಾಡಿಕೊಂಡು 8 ಗಂಟೆ ಪಂದ್ಯ ವೀಕ್ಷಿಸಿದ್ದಾರೆ ಎಂದರು.
ಟೀಕೆ ಮಾಡುವುದಿಲ್ಲ:
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ದೊಡ್ಡ ಹಡಗಿಗೆ ಯಾರು ಯಾರನ್ನು ತುಂಬಿಸಿಕೊಳ್ಳುತ್ತಾರೋ ತುಂಬಿಸಿಕೊಳ್ಳಲಿ ಎಂದು ಕುಮಾರಸ್ವಾಮಿ ಇದೇ ಸಂದರ್ಭದಲ್ಲಿ ತಿಳಿಸಿದರು. ನಾವು ರಾಜ್ಯದ ಜನತೆಯ ಸಮಸ್ಯೆಗಳ ಪರಿಹಾರದ ಬಗ್ಗೆ ಗಮನಹರಿಸುತ್ತೇವೆ. ಮುಂದೆ ಏನಾಗುತ್ತೋ ಗೊತ್ತಿಲ್ಲ ಎಂದು ಮಾರ್ಮಿಕವಾಗಿ ಹೇಳಿದರು.
ಯಶಸ್ವಿಯಾಗಿ ಗಗನಯಾನ ಪರೀಕ್ಷಾ ಹಾರಾಟ ನಡೆಸಿದ ಇಸ್ರೋ
ಬೇಗ ಬಿಚ್ಚಡಲಿ:
ಉಪಮುಖ್ಯಮಂತ್ರಿಗಳು ಯಾರ್ಯಾರದೋ ಏನೇನೋ ಬಿಚ್ಚಿಡುವುದಾಗಿ ಹೇಳಿದ್ದಾರೆ . ಆದಷ್ಟು ಬೇಗ ಬಿಚ್ಚಿಡಲಿ. ನಮಗೆ ಭಯವಿಲ್ಲ. ಬಿಚ್ಚಿಡುವ ಮುನ್ನ ಇನ್ನೇನಾದರೂ ಆದರೆ ಏನು ಮಾಡುವುದು? ಬೇಗ ಬಿಚ್ಚಿಡಲಿ ಎಂದು ಮಾರ್ಮಿಕವಾಗಿ ಹೇಳಿದರು. ನಾನು ನಕಲಿ ಸ್ವಾಮಿ ಅಲ್ಲ. ಮಾಹಿತಿ ಇಲ್ಲದೆ ಇಂಧನ ಇಲಾಖೆ ವಿಚಾರ ಪ್ರಸ್ತಾಪಿಸಿಲ್ಲ. ಅಂಕಿ ಅಂಶಗಳ ಆಧಾರದ ಮೇಲೆ ಪ್ರಸ್ತಾಪಿಸಿದ್ದೇನೆ.
ಬಟ್ಟೆ ಹರಿದುಕೊಂಡು ಓಡಾಡಬೇಕಾಗುತ್ತದೆ ಎಂದು ಹೇಳಿದ್ದಾರೆ. ಮುಂದೆ ಯಾರು ಆ ರೀತಿ ಓಡಾಡುತ್ತಾರೆ ಎಂಬುದನ್ನು ಕಾದು ನೋಡೋಣ ಎಂದರು. ಮಾಜಿ ಸಚಿವ ಬಂಡೆಪ್ಪ ಕಾಶಂಪುರ್, ಮಾಜಿ ಶಾಸಕರಾದ ಸುರೇಶ್ ಗೌಡ, ಕೋನರೆಡ್ಡಿ ತೂಪಲ್ಲಿ, ರಮೇಶ್ ಗೌಡ ಹಾಗೂ ವಿಧಾನಪರಿಷತ್ ಸದಸ್ಯ ಟಿ.ಎ.ಶರವಣ ಉಪಸ್ಥಿತರಿದ್ದರು. ಇದಕ್ಕೂ ಮುನ್ನ ಜೆಡಿಎಸ್ ಕಚೇರಿ ಜೆಪಿಭವನದಲ್ಲಿ ಹಮ್ಮಿಕೊಂಡಿದ್ದ ಆಯ್ದ ಪೂಜೆ ಕಾರ್ಯಕ್ರಮದಲ್ಲಿ ಕುಮಾರಸ್ವಾಮಿ ಭಾಗಿಯಾಗಿದ್ದರು.