Friday, September 20, 2024
Homeರಾಷ್ಟ್ರೀಯ | Nationalಅಜ್ಮಿರ್ ಅತ್ಯಾಚಾರ ಪ್ರಕರಣದ 6 ಮಂದಿ ಕಾಮ ಪಿಶಾಚಿಗಳಿಗೆ ಜೀವಾವಧಿ ಶಿಕ್ಷೆ

ಅಜ್ಮಿರ್ ಅತ್ಯಾಚಾರ ಪ್ರಕರಣದ 6 ಮಂದಿ ಕಾಮ ಪಿಶಾಚಿಗಳಿಗೆ ಜೀವಾವಧಿ ಶಿಕ್ಷೆ

ನವದೆಹಲಿ,ಆ.21– ರಾಜಸ್ತಾನದ ನಡೆದ ಅಜ್ಮಿರ್ ಲೈಂಗಿಕ ಹಗರಣದಲ್ಲಿ 100 ಕ್ಕೂ ಹೆಚ್ಚು ಹುಡುಗಿಯರ ಮೇಲೆ ಅತ್ಯಾಚಾರವೆಸಗಿ ಬ್ಲ್ಯಾಕ್‌ಮೇಲ್‌ ಮಾಡಿದ ಪ್ರಕರಣದಲ್ಲಿ ಪೋಕ್ಸೊ ನ್ಯಾಯಾಲಯವು 6 ಮಂದಿ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.ಅಜೇರ್‌ ಜಿಲ್ಲೆಯ ವಿಶೇಷ ಮಕ್ಕಳ ಲೈಂಗಿಕ ಅಪರಾಧಗಳ (ಪೋಕ್ಸೊ) ಕಾಯ್ದೆ ನ್ಯಾಯಾಲಯವು ಉಳಿದ ಆರು ಆರೋಪಿಗಳನ್ನು ದೋಷಿಗಳೆಂದು ಘೋಷಿಸಿದೆ.

ಸಯ್ಯದ್‌ ನಫೀಸ್‌‍ ಚಿಸ್ತಿ, ಇಕ್ಬಾಲ್‌ ಭಾಟಿ, ಸಲೀಂ ಚಿಶ್ತಿ, ಸೊಹೈಲ್‌ ಘನಿ, ಜಮೀರ್‌ ಮತ್ತು ನಸೀಮ್‌ ಅಲಿಯಾಸ್‌‍ ಟಾರ್ಜನ್‌ ಎಂಬ ಆರು ಆರೋಪಿಗಳನ್ನು ಎರಡೂ ಕಡೆಯ ವಿಚಾರಣೆಯ ನಂತರ ನ್ಯಾಯಾಲಯವು ತಪ್ಪಿತಸ್ಥರೆಂದು ಪರಿಗಣಿಸಿದೆ ಎಂದು ಪ್ರಾಸಿಕ್ಯೂಷನ್‌ ಸಹಾಯಕ ನಿರ್ದೇಶಕ ವೀರೇಂದ್ರ ಸಿಂಗ್‌ ಹೇಳಿದ್ದಾರೆ. ಪೋಕ್ಸೊ ನ್ಯಾಯಾಲಯ-2 ಅಪರಾಧಿಗಳನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಿದೆ. ನ್ಯಾಯಾಲಯವು ಆರೋಪಿಗಳಿಗೆ ತಲಾ 5 ಲಕ್ಷ ದಂಡ ವಿಧಿಸಿದೆ.

1992ರಲ್ಲಿ ಬೆಳಕಿಗೆ ಬಂದ ಅಜೀರ್‌ ಲೈಂಗಿಕ ಹಗರಣದ ಆರೋಪಿಗಳಾದ ನಫೀಸ್‌‍ ಚಿಶ್ತಿ, ನಸೀಮ್‌ ಅಲಿಯಾಸ್‌‍ ಟಾರ್ಜನ್‌, ಸಲೀಂ ಚಿಶ್ತಿ, ಇಕ್ಬಾಲ್‌ ಭಾಟಿ, ಸೊಹೈಲ್‌ ಗನಿ ಮತ್ತು ಸೈಯದ್‌ ಜಮೀರ್‌ ಹುಸೇನ್‌ ಎಂಬವರನ್ನು ಶಿಕ್ಷೆಗೆ ಗುರಿಪಡಿಸಲಾಗಿದೆ.

ಈ ಹಿಂದೆ ಶಿಕ್ಷೆಗೆ ಗುರಿಯಾಗಿದ್ದ ಇತರ ಆರೋಪಿಗಳು ತಮ ಅವಧಿಯನ್ನು ಪೂರ್ಣಗೊಳಿಸಿದ್ದಾರೆ ಅಥವಾ ನ್ಯಾಯಾಲಯಗಳಿಂದ ಖುಲಾಸೆಗೊಳಿಸಿದ್ದಾರೆ. ಮೊದಲ ಚಾರ್ಜ್‌ ಶೀಟ್‌ ಸಮಯದಲ್ಲಿ ಅವರ ತನಿಖೆ ಬಾಕಿ ಇದ್ದ ಕಾರಣ ಉಳಿದ ಆರು ಆರೋಪಿಗಳಿಗೆ ಪ್ರತ್ಯೇಕ ವಿಚಾರಣೆ ನಡೆಸಲಾಯಿಗಿತ್ತು.

ಅಜೀರ್‌ನ ಪ್ರಮುಖ ಖಾಸಗಿ ಶಾಲೆಯಲ್ಲಿ ಕಲಿಯುತ್ತಿದ್ದ ವಿದ್ಯಾರ್ಥಿಗಳನ್ನುಫಾರ್ಮ್‌ಹೌಸ್‌‍ಗೆ ಕರೆದೊಯ್ದು ಅಲ್ಲಿ ಅತ್ಯಾಚಾರ ಎಸಗಲಾಗಿತ್ತು.11 ರಿಂದ 20 ವರ್ಷದೊಳಗಿನ ಕಾಲೇಜು ಮತ್ತು ಶಾಲೆಗೆ ಹೋಗುವ ಹುಡುಗಿಯರಲ್ಲಿ ಗ್ಯಾಂಗ್‌ ಸದಸ್ಯರು ಸ್ನೇಹ ಬೆಳೆಸಿ, ದೈಹಿಕವಾಗಿ ಸಂಪರ್ಕವೇರ್ಪಟ್ಟ ಸಂದರ್ಭಗಳಲ್ಲಿ ಅವರ ಫೋಟೋ ತೆಗೆದಿದ್ದು, ನಂತರ ಅವರ ಮೇಲೆ ಅತ್ಯಾಚಾರವೆಸಗಿದ್ದರು. ಪ್ರಕರಣದಲ್ಲಿ ಒಟ್ಟು 18 ಆರೋಪಿಗಳಿದ್ದರು. 12 ಮಂದಿ ವಿರುದ್ಧ ಪ್ರಕರಣದ ಮೊದಲ ಚಾರ್ಜ್‌ ಶೀಟ್‌ ಸಲ್ಲಿಸಲಾಗಿದೆ ಎಂದು ವಕೀಲರು ತಿಳಿಸಿದರು.

ಆರೋಪಿಗಳ ಪೈಕಿ, ನಸೀಮ್‌ ಅಲಿಯಾಸ್‌‍ ಟಾರ್ಜನ್‌ 1994 ರಲ್ಲಿ ತಲೆಮರೆಸಿಕೊಂಡಿದ್ದ. ಜಹೂರ್‌ ಚಿಶ್ತಿ ಸೆಕ್ಷನ್‌ 377 (ಅಸ್ವಾಭಾವಿಕ ಸೆಕ್‌್ಸ) ಅಡಿಯಲ್ಲಿ ತಪ್ಪಿತಸ್ಥ ಎಂದು ಸಾಬೀತಾಯಿತು.ಆತನ ಪ್ರಕರಣವನ್ನು ಮತ್ತೊಂದು ನ್ಯಾಯಾಲಯಕ್ಕೆ ವರ್ಗಾಯಿಸಲಾಯಿತು. ಸ್ಕಿಜೋಫ್ರೇನಿಯಾ ರೋಗನಿರ್ಣಯ ಮಾಡಿದ ನಂತರ ಫಾರೂಕ್ ಚಿಶ್ತಿ ವಿಚಾರಣೆ ಪ್ರತ್ಯೇಕವಾಗಿ ಮುಂದುವರೆದಿದ್ದು 2007 ರಲ್ಲಿ ಆತನಿಗೆ ಜೀವಾವಧಿ ಶಿಕ್ಷೆ ವಿಧಿಸಲಾಯಿತು. ಆರೋಪಿಗಳ ಪೈಕಿ ಒಬ್ಬ ಆತಹತ್ಯೆ ಮಾಡಿಕೊಂಡಿದ್ದಾನೆ.

ಇತರ ಎಂಟು ಆರೋಪಿಗಳಿಗೆ 1998 ರಲ್ಲಿ ಜೀವಾವಧಿ ಶಿಕ್ಷೆ ವಿಧಿಸಲಾಯಿತು. ನಫೀಸ್‌‍ ಚಿಶ್ತಿ, ಸಲೀಂ ಚಿಶ್ತಿ, ಇಕ್ಬಾಲ್‌ ಭಾಟಿ, ಸೊಹೈಲ್‌ ಗನಿ, ಸೈಯದ್‌ ಜಮೀರ್‌ ಹುಸೇನ್‌ ಮತ್ತು ಅಲಾಸ್‌‍ ವಿರುದ್ಧ ಎರಡನೇ ಚಾರ್ಜ್‌ ಶೀಟ್‌ ಸಲ್ಲಿಸಲಾಗಿತ್ತು.

ಈ ಪ್ರಕರಣವು 1992 ರ ಹಿಂದಿನ ಅಜೇರ್‌ ಯೂತ್‌ ಕಾಂಗ್ರೆಸ್ನ ಅಂದಿನ ಅಧ್ಯಕ್ಷ ಫಾರೂಕ್ ಚಿಶ್ತಿ, ಅವರ ಸಹವರ್ತಿ ನಫೀಸ್‌‍ ಚಿಶ್ತಿ ಮತ್ತು ಸಹಾಯಕರು ಅನೇಕ ಹುಡುಗಿಯರನ್ನು ತೋಟದ ಮನೆಗಳು ಮತ್ತು ರೆಸ್ಟೋರೆಂಟ್‌ಗಳಲ್ಲಿ ಪಾರ್ಟಿಗಳಿಗೆ ಕರೆದರು ಮತ್ತು ಅಲ್ಲಿ ಮಾದಕವಸ್ತು ಮತ್ತು ಸಾಮೂಹಿಕ ಅತ್ಯಾಚಾರ ಎಸಗಿದ್ದರು. ಅಲ್ಲದೆ, ಅವರ ಅಶ್ಲೀಲ ಛಾಯಾಚಿತ್ರಗಳನ್ನು ತೆಗೆದುಕೊಂಡು ಬ್ಲ್ಯಾಕ್‌ಮೇಲ್‌ ಶುರು ಮಾಡಲು ಪ್ರಾರಂಭಿಸಿದರು.


ಕೊನೆಗೆ ಕೆಲ ಹುಡುಗಿಯರು ಧೈರ್ಯ ಮಾಡಿ ಪೊಲೀಸರ ಮೊರೆ ಹೋಗಿ ದೂರು ನೀಡಿದರು. ಆದರೂ ಈ ಸಂತ್ರಸ್ತರಿಗೆ ನಿರಂತರವಾಗಿ ಬೆದರಿಕೆಗಳು ಬರುತ್ತಿದ್ದವು ಮತ್ತು ಅವರು ಮತ್ತೆ ಪೊಲೀಸರ ಬಳಿಗೆ ಹೋಗಲಿಲ್ಲ. ಈ ಮಧ್ಯೆ ಅಜೇರ್‌ನ ಸ್ಟುಡಿಯೊದಿಂದ ಕೆಲವು ಅಶ್ಲೀಲ ಛಾಯಾಚಿತ್ರಗಳು ಸೋರಿಕೆಯಾಗಿ ವೈರಲ್‌ ಆಗಿದ್ದವು. ಬಳಿಕ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದರು. 100ಕ್ಕೂ ಹೆಚ್ಚು ಶಾಲಾ ಬಾಲಕಿಯರ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿರುವುದು ಬಹಿರಂಗವಾಗಿದ್ದವು. ಆರೋಪಿಗಳ ವಿರುದ್ಧ ಪ್ರಕರಣ ದಾಖಲಾದ ಬಳಿಕವೂ ಯಾವೊಬ್ಬ ಬಾಲಕಿಯೂ ಅವರ ವಿರುದ್ಧ ಸಾಕ್ಷಿ ಹೇಳಲು ಮುಂದೆ ಬರಲಿಲ್ಲ.


ನಂತರ ಪೊಲೀಸರು ಛಾಯಾಚಿತ್ರಗಳ ಆಧಾರದ ಮೇಲೆ ಸಂತ್ರಸ್ತರನ್ನು ಹುಡುಕಲು ಪ್ರಾರಂಭಿಸಿದರು. ಬಲಿಯಾದವರಲ್ಲಿ ಕೆಲವರು ಆತಹತ್ಯೆಯಿಂದ ಸತ್ತರೆ ಕೆಲವರು ನಗರವನ್ನು ತೊರೆದರು. ಪೊಲೀಸರು ಕಷ್ಟಪಟ್ಟು ಕೆಲವು ಸಂತ್ರಸ್ತರ ಹೇಳಿಕೆಗಳನ್ನು ದಾಖಲಿಸಿಕೊಂಡರು ನ್ಯಾಯಾಲಯಕ್ಕೆ ಸಲ್ಲಿಸಿದರು.

RELATED ARTICLES

Latest News