Saturday, September 14, 2024
Homeರಾಷ್ಟ್ರೀಯ | Nationalಸೆ. 22 ರಂದು ನ್ಯೂಯಾರ್ಕ್‌ನಲ್ಲಿ ಪ್ರಧಾನಿ ಮೋದಿ ಮಹತ್ವದ ಭಾಷಣ

ಸೆ. 22 ರಂದು ನ್ಯೂಯಾರ್ಕ್‌ನಲ್ಲಿ ಪ್ರಧಾನಿ ಮೋದಿ ಮಹತ್ವದ ಭಾಷಣ

ನವದೆಹಲಿ,ಆ.21- ವಿಶ್ವಸಂಸ್ಥೆಯ ಶೃಂಗಸಭೆಯಲ್ಲಿ ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿ ಸೆಪ್ಟೆಂಬರ್‌ 22 ರಂದು ನ್ಯೂಯಾರ್ಕ್‌ಗೆ ತೆರಳಲಿದ್ದಾರೆ. ಅಲ್ಲಿನ ಪ್ರಮುಖ ಸಮುದಾಯ ಕಾರ್ಯಕ್ರವೊಂದನ್ನು ಉದ್ದೇಶಿಸಿ ಅವರು ಮಾತನಾಡಲಿದ್ದಾರೆ.

ಮೋದಿ ಅಂಡ್‌ ಯುಎಸ್‌‍: ಪ್ರೋಗ್ರೆಸ್‌‍ ಟುಗೆದರ್‌ ಎಂಬ ಥೀಮ್‌ ಹೊಂದಿರುವ ಕಾರ್ಯಕ್ರಮವು ಭಾರತ ಹಾಗೂ ಅಮೆರಿಕ ನಡುವಿನ ಸಾಂಸ್ಕೃತಿಕ ಸಂಬಂಧವನ್ನು ಬಿಂಬಿಸುವ ಉದ್ದೇಶದ್ದು. ಜಗತ್ತು ಒಂದು ಕುಟುಂಬ, ವಿಭಿನ್ನತೆಯೇ ಅದರ ಮೂಲಾಧಾರ. ಉತ್ತಮ ಜಗತ್ತಿನ ನಿರ್ಮಾಣಕ್ಕಾಗಿ ಜನ ಕಲ್ಯಾಣವೇ ಧ್ಯೇಯ ಎಂಬುವ ಶೀರ್ಷಿಕೆಯನ್ನೂ ಈ ಕಾರ್ಯಕ್ರಮ ಹೊಂದಿದೆ.

ಭಾರತೀಯ-ಅಮೆರಿಕನ್‌ ಡಯಾಸ್ಪೊರಾ ಅಸೋಸಿಯೇಷನ್‌ ಈ ಸಮುದಾಯ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ. ಇದು ಪ್ರಜಾಪ್ರಭುತ್ವ, ಅಂತರ್ಗತ ಆರ್ಥಿಕ ಅಭಿವೃದ್ಧಿ ಮತ್ತು ಪರಸ್ಪರ ಗೌರವದ ಹಂಚಿಕೆಯ ಮೌಲ್ಯಗಳನ್ನು ಮುನ್ನಡೆಸಲು ಭಾರತ-ಯುಎಸ್‌‍ ಸಹಕಾರವನ್ನು ಉತ್ತೇಜಿಸುವ ಲಾಭರಹಿತ ಸಂಸ್ಥೆಯಾಗಿದೆ. ದೇಣಿಗೆಗಳ ಮೂಲಕ ವೆಚ್ಚಗಳನ್ನು ಭರಿಸಲಾಗುತ್ತದೆ.

ಈ ಬೆಳವಣಿಗೆಯ ಬಗ್ಗೆ ಮಾಹಿತಿ ಇರುವವರೊಬ್ಬರು ವಿವರ ನೀಡಿ, ಈ ಸಭೆಯಲ್ಲಿ ಸುಮಾರು 15,000 ಜನರು ಭಾಗವಹಿಸುವ ನಿರೀಕ್ಷೆಯಿದೆ. ಇದು ಅಮೆರಿಕದಲ್ಲಿ ಮೋದಿ ಭಾಷಣ ಮಾಡಿದ ಹಿಂದಿನ ಸಂದರ್ಭಗಳಿಗೆ ಹೋಲಿಸಿದರೆ ವಿಭಿನ್ನವಾಗಿದೆ. ವಲಸಿಗರು ಮತ್ತು ಅವರ ಭವಿಷ್ಯ ಮತ್ತು ಭಾರತದೊಂದಿಗಿನ ಸಂಬಂಧಗಳನ್ನು ಹೆಚ್ಚಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ. ಅಮೆರಿಕದ ಚುನಾವಣಾ ಋತುವಿನ ಮಧ್ಯದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದ್ದ ಹೊರತಾಗಿಯೂ ಇದು ರಾಜಕೀಯೇತರ ಕಾರ್ಯಕ್ರಮವಾಗಿದೆ. ಈ ಬಾರಿ ಯಾವುದೇ ಚುನಾಯಿತ ಅಧಿಕಾರಿಗಳನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗುವುದಿಲ್ಲ ಎಂದು ಹೇಳಿದ್ದಾರೆ.

ಮೋದಿ ಅಮೆರಿಕದಲ್ಲಿರುವ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮೋದಿ ಮಾತನಾಡುತ್ತಿರುವುದು ಇದು ಐದನೇ ಬಾರಿ. 2014ರಲ್ಲಿ, ಅವರು ನ್ಯೂಯಾಕ್ರ್ನ ಮ್ಯಾಡಿಸನ್‌ ಸ್ಕ್ವೇರ್‌ ಗಾರ್ಡನ್‌ನಲ್ಲಿ ಭಾಷಣ ಮಾಡಿದ್ದರು. ಅಲ್ಲಿ ಸಾವಿರಾರು ಭಾರತೀಯ-ಅಮೆರಿಕನ್ನರು ಮತ್ತು ಕಾಂಗ್ರೆಸ್‌‍ ಪ್ರತಿನಿಧಿಗಳು ಮತ್ತು ಸೆನೆಟರ್‌ಗಳು ಸೇರಿದಂತೆ ಡಜನ್‌ಗಟ್ಟಲೆ ಚುನಾಯಿತ ಅಧಿಕಾರಿಗಳು ಭಾಗವಹಿಸಿದ್ದರು. 2015 ರಲ್ಲಿ, ಅವರು ಕ್ಯಾಲಿೇರ್ನಿಯಾದ ಸ್ಯಾನ್‌ ಜೋಸ್ನಲ್ಲಿ ಭಾರತೀಯರನ್ನು ಉದ್ದೇಶಿಸಿ ಮಾತನಾಡಿದ್ದರು. ಸಿಲಿಕಾನ್‌ ವ್ಯಾಲಿಯ ಟೆಕ್‌ ಸಮುದಾಯವೇ ಈ ಕಾರ್ಯಕ್ರಮದಲ್ಲಿ ಆಕರ್ಷಣೆಯಾಗಿತ್ತು.

2017ರಲ್ಲಿ ವಾಷಿಂಗ್ಟನ್‌ ಡಿಸಿಯಲ್ಲಿ ನಡೆದ ಸಣ್ಣ ಕಾರ್ಯಕ್ರಮವೊಂದರಲ್ಲಿ ಮೋದಿ ಸಮುದಾಯ ಸಂಘಟನೆಗಳ ನಾಯಕರೊಂದಿಗೆ ಮಾತನಾಡಿದ್ದರು. 2019 ರಲ್ಲಿ, ಕಳೆದ ಅಧ್ಯಕ್ಷೀಯ ಚುನಾವಣೆಗೆ ಒಂದು ವರ್ಷ ಮೊದಲು, ಮೋದಿ ಮತ್ತು ಅಂದಿನ ಅಮೆರಿಕ ಅಧ್ಯಕ್ಷ ಡೊನಾಲ್ಡ್‌‍ ಟ್ರಂಪ್‌ ಹೂಸ್ಟನ್‌ನಲ್ಲಿ ಭಾರತೀಯ-ಅಮೆರಿಕನ್ನರ ಅತಿದೊಡ್ಡ ಸಭೆಯನ್ನುದ್ದೇಶಿಸಿ ಮಾತನಾಡಿದ್ದರು. ಈ ಕಾರ್ಯಕ್ರಮ ರಾಜಕೀಯವಾಗಿ ಟೀಕೆಗೆ ಒಳಗಾಯಿತು.

ಕಳೆದ ವರ್ಷ ಯುಎಸ್‌‍ಗೆ ಅಧಿಕೃತ ಭೇಟಿ ನೀಡಿದಾಗ 8000 ಭಾರತೀಯ-ಅಮೆರಿಕನ್ನರು ಶ್ವೇತಭವನದಲ್ಲೇ ಮೋದಿಗೆ ಸ್ವಾಗತ ನೀಡಿದ್ದರು. ಕೆನಡಿ ಸೆಂಟರ್‌ನಲ್ಲಿ ಭಾರತೀಯ- ಅಮೆರಿಕನ್‌ ವೃತ್ತಿಪರರೊಂದಿಗೆ ಮಾತನಾಡಿದ್ದರು. ವಾಷಿಂಗ್ಟನ್‌ ಡಿಸಿಯ ರೇಗನ್‌ ಕೇಂದ್ರದಲ್ಲಿ ಮತ್ತೊಂದು ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ್ದರು.

ಈ ಬಾರಿ ಅಮೆರಿಕದ ಚುನಾವಣೆ ಬಲವಾದ ಭಾರತೀಯ-ಅಮೆರಿಕನ್‌ ಆಯಾಮವನ್ನು ಹೊಂದಿರುವ ಸಮಯದಲ್ಲಿ ಮೋದಿಯವರ ಕಾರ್ಯಕ್ರಮ ಬಂದಿದೆ. ಅಧ್ಯಕ್ಷೀಯ ಚುನಾವಣೆಗೆ ಡೆಮಾಕ್ರಟಿಕ್‌ ಅಭ್ಯರ್ಥಿ ಕಮಲಾ ಹ್ಯಾರಿಸ್‌‍ ಅವರು ಕಪ್ಪು-ಅಮೆರಿಕನ್‌ ಮತ್ತು ಭಾರತೀಯ-ಅಮೆರಿಕನ್‌ ಎಂದು ಗುರುತಿಸಿಕೊಂಡಿದ್ದಾರೆ. ಅವರ ತಾಯಿ ತಮಿಳು ಮತ್ತು 1958 ರಲ್ಲಿ ಭಾರತದಿಂದ ವಲಸೆ ಹೋಗಿದ್ದರು ರಿಪಬ್ಲಿಕನ್‌ ಪಕ್ಷದ ಉಪಾಧ್ಯಕ್ಷ ಅಭ್ಯರ್ಥಿ ಜೆ.ಡಿ.ವ್ಯಾನ್‌್ಸ ಅವರ ಪತ್ನಿ ಉಷಾ ವ್ಯಾನ್‌್ಸ ಆಂಧ್ರಪ್ರದೇಶದ ವಲಸಿಗರ ಪುತ್ರಿ. ರಾಜಕೀಯ ವಿಜ್ಞಾನಿಗಳಾದ ದೇವೇಶ್‌ ಕಪೂರ್‌, ಮಿಲನ್‌ ವೈಷ್ಣವ್‌ ಮತ್ತು ಸುಮಿತ್ರಾ ಬದ್ರಿನಾಥನ್‌ ನಡೆಸಿದ 2020 ರ ಸಮೀಕ್ಷೆಯ ಪ್ರಕಾರ, ಭಾರತೀಯ-ಅಮೆರಿಕನ್‌ ಸಮುದಾಯವು ಬಹುಪಾಲು ಡೆಮಾಕ್ರಟ್‌ ಪಕ್ಷದ ಪರವಾಗಿದ್ದಾರೆ.

ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್‌‍ ಅವರು ತಮ ಅಧಿಕಾರಾವಧಿಯ ಕೊನೆಯ ವರ್ಷದಲ್ಲಿ ಆಯೋಜಿಸಿರುವ ಪ್ರಮುಖ ಕಾರ್ಯಕ್ರಮವಾದ ಶೃಂಗಸಭೆಯಲ್ಲಿ ಭಾಗವಹಿಸುವುದು ಮೋದಿಯವರ ಭೇಟಿಯ ಅಧಿಕೃತ ಉದ್ದೇಶ. ಜಿ-20 ಅಧ್ಯಕ್ಷ ಸ್ಥಾನ ಸೇರಿದಂತೆ ಇತ್ತೀಚಿನ ವರ್ಷಗಳಲ್ಲಿ ಭಾರತದ ಆಕಾಂಕ್ಷೆಗಳನ್ನು ಗುಟೆರೆಸ್‌‍ ಬೆಂಬಲಿಸಿದ್ದಾರೆ. ಕಳೆದ ತಿಂಗಳು ಯುಎನ್‌ ಬಿಡುಗಡೆ ಮಾಡಿದ ಸಾಮಾನ್ಯ ಚರ್ಚೆಯ ಭಾಷಣಕಾರರ ತಾತ್ಕಾಲಿಕ ಪಟ್ಟಿಯ ಪ್ರಕಾರ, ಮೋದಿ ಸೆಪ್ಟೆಂಬರ್‌ 26 ರಂದು ಯುಎನ್‌ ಜನರಲ್‌ ಅಸೆಂಬ್ಲಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

RELATED ARTICLES

Latest News