Friday, November 22, 2024
Homeರಾಜಕೀಯ | Politicsಸಿದ್ದರಾಮಯ್ಯನವರೇ ತಾಕತ್ತಿದ್ರೆ ಧರ್ಮಸ್ಥಳಕ್ಕೆ ಬಂದು ಪ್ರಮಾಣಮಾಡಿ : ರವಿಕುಮಾರ್

ಸಿದ್ದರಾಮಯ್ಯನವರೇ ತಾಕತ್ತಿದ್ರೆ ಧರ್ಮಸ್ಥಳಕ್ಕೆ ಬಂದು ಪ್ರಮಾಣಮಾಡಿ : ರವಿಕುಮಾರ್

Ravikumar Open Challenge To CM Siddaramaiah

ಬೆಂಗಳೂರು,ಆ.22- ಮುಡಾ ಪ್ರಕರಣದಲ್ಲಿ ದಾಖಲೆಗಳನ್ನು ಮುಚ್ಚಿ ಹಾಕಲು ವೈಟ್ನರ್‌ ಹಾಕಿಲ್ಲ ಎನ್ನುವುದಾದರೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಧರ್ಮಸ್ಥಳಕ್ಕೆ ಬಂದು ಪ್ರಮಾಣ ಮಾಡಲಿ ಎಂದು ವಿಧಾನಪರಿಷತ್‌ ಸದಸ್ಯ ರವಿಕುಮಾರ್‌ ಬಹಿರಂಗ ಸವಾಲು ಹಾಕಿದ್ದಾರೆ.

ಫ್ರೀಡಂ ಪಾರ್ಕ್‌ನಲ್ಲಿ ಹಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯನವರು ಈ ಪ್ರಕರಣವನ್ನು ಮುಚ್ಚಿ ಹಾಕಲು ವ್ಯವಸ್ಥಿತವಾದ ಪಿತೂರಿ ನಡೆಸಿದ್ದಾರೆ. ಮೊದಲು ತಮ ಪತ್ನಿ ನಿರ್ದಿಷ್ಟ ಕಡೆ ನಿವೇಶನ ನೀಡುವಂತೆ ಪತ್ರ ಬರೆದಿಲ್ಲ ಎಂದು ಹೇಳುತ್ತಿದ್ದರು.

ಇದೀಗ ದಾಖಲಾತಿಗಳಲ್ಲಿ ಪಾರ್ವತಿಯವರು ಮೈಸೂರಿನ ವಿಜಯನಗರದ 2 ಮತ್ತು 3ನೇ ಹಂತದಲ್ಲಿ ನಿವೇಶನ ನೀಡಬೇಕೆಂದು ಕೋರಿ ಮುಡಾ ಆಯುಕ್ತರಿಗೆ ಪತ್ರ ಬರೆದಿರುವುದು ಬೆಳಕಿಗೆ ಬಂದಿದೆ.

ಇದನ್ನು ಮುಚ್ಚಿ ಹಾಕಲು ಅಧಿಕಾರಿ ಗಳು ವೈಟ್ನರ್‌ ಹಾಕಿರುವುದು ರುಜು ವಾತಾಗಿದೆ. ಇದು ಕಾನೂನು ಉಲ್ಲಂಘನೆ ಯಲ್ಲವೇ ಎಂದು ಪ್ರಶ್ನೆ ಮಾಡಿದರು.ನೀವು ಈ ಪ್ರಕರಣದಲ್ಲಿ ತಪ್ಪೇ ಮಾಡಿಲ್ಲ ಎನ್ನುವುದಾದರೆ ಧರ್ಮಸ್ಥಳಕ್ಕೆ ಬಂದು ಪ್ರಮಾಣ ಮಾಡಿ. ನೀವು ಈಗ ಶುದ್ಧರಾಮಯ್ಯನೂ ಅಲ್ಲ, ಸಿದ್ದರಾಮಯ್ಯನೂ ಅಲ್ಲ. ನೀವು ಮುಡಾ ಸೈಟ್‌ ರಾಮಯ್ಯ ಎಂದು ವ್ಯಂಗ್ಯವಾಡಿದರು.

ಶಾಸಕ ರಾಮಮೂರ್ತಿ ಮಾತನಾಡಿ, ರಾಜಭವನಕ್ಕೆ ನುಗ್ಗುತ್ತೇವೆ ಎಂದು ಹೇಳಿಕೆ ನೀಡಿರುವ ವಿಧಾನಪರಿಷತ್‌ ಸದಸ್ಯ ಐವಾನ್‌ ಡಿಸೋಜ ಅವರು ತಕ್ಷಣವೇ ಪೊಲೀಸರು ಬಂಧಿಸಬೇಕು. ಅವರ ವಿರುದ್ಧ ರಾಷ್ಟ್ರದ್ರೋಹಿ ಪ್ರಕರಣ ದಾಖಲಿಸಬೇಕೆಂದು ಆಗ್ರಹಿಸಿದರು.

ವಿಧಾನಪರಿಷತ್‌ ಸದಸ್ಯರಾಗಿರುವ ಐವಾನ್‌ ಡಿಸೋಜಾಗೆ ಕನಿಷ್ಠ ಪಕ್ಷ ಸಾಮಾನ್ಯಜ್ಞಾನ ಇಲ್ಲವೇ? ಅವರಿಗೆ ನಾಚಿಕೆ, ಮಾನ, ಮರ್ಯಾದೆ ಇದೆಯೇ? ಎಂದು ಪ್ರಶ್ನಿಸಿದರು.


ಕೂಡಲೇ ಪೊಲೀಸರು ಅವರ ವಿರುದ್ಧ ಪ್ರಚೋದನಾಕಾರಿ ಹೇಳಿಕೆ ಕೊಟ್ಟ ಆರೋಪದ ಮೇಲೆ ದೂರು ದಾಖಲಿಸಿ ಮುಲಾಜಿಲ್ಲದೆ ಬಂಧಿಸಬೇಕೆಂದು ಒತ್ತಾಯಿಸಿದರು.ರಾಜ್ಯಸರ್ಕಾರ ನೀರಿನ ದರ ಹೆಚ್ಚಳ ಮಾಡಲು ಮುಂದಾಗಿರುವುದು ಖಂಡನೀಯ. ಇದು ಲೂಟಿ ಸರ್ಕಾರ. ಗ್ಯಾರಂಟಿ ನೆಪದಲ್ಲಿ ಜನರನ್ನು ಕೊಳ್ಳೆ ಹೊಡೆಯುತ್ತಿದೆ ಎಂದು ವಾಗ್ದಾಳಿ ನಡೆಸಿದರು.

RELATED ARTICLES

Latest News