Friday, November 22, 2024
Homeಕ್ರೀಡಾ ಸುದ್ದಿ | Sportsಕ್ರಿಕೆಟ್‌ಗೆ ಶಿಖರ್‌ ಧವನ್‌ ಗುಡ್ ಬೈ

ಕ್ರಿಕೆಟ್‌ಗೆ ಶಿಖರ್‌ ಧವನ್‌ ಗುಡ್ ಬೈ

Shikhar Dhawan retires from international and domestic cricket

ಮುಂಬೈ,ಆ.24- ಟೀಮ್‌ ಇಂಡಿಯಾದ ಸ್ಟಾರ್‌ ಆಟಗಾರ ಶಿಖರ್‌ ಧವನ್‌ ಅಂತಾರಾಷ್ಟ್ರೀಯ ಹಾಗೂ ದೇಶೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದು, 13 ವರ್ಷಗಳ ಸುದೀರ್ಘ ವೃತ್ತಿ ಜೀವನಕ್ಕೆ ಅಂತ್ಯ ಹಾಡಿದ್ದಾರೆ. ಅದಾಗ್ಯೂ 38 ವರ್ಷದ ಧವನ್‌ ಐಪಿಎಲ್‌ನಲ್ಲಿ ಆಡಲಿದ್ದಾರೆ.

ಆಟದಿಂದ ದೂರ ಸರಿಯುವ ನಿರ್ಧಾರವನ್ನು ಶಿಖರ್‌ ಧವನ್‌ ಸೋಷಿಯಲ್‌ ಮೀಡಿಯಾದಲ್ಲಿ ಪ್ರಕಟಿಸಿದ್ದು, ಅಭಿಮಾನಿಗಳು ಶಾಕ್‌ಗೆ ಒಳಗಾಗಿದ್ದಾರೆ.ಸಂಖ್ಯಾತ ನೆನಪುಗಳು ಮತ್ತು ಕೃತಜ್ಞತೆಯೊಂದಿಗೆ ನನ್ನ ಕ್ರಿಕೆಟ್‌ ಪ್ರಯಾಣದ ಈ ಅಧ್ಯಾಯವನ್ನು ಮುಗಿಸುತ್ತಿದ್ದೇನೆ. ನಿಮ ಪ್ರೆತಿ ಮತ್ತು ಬೆಂಬಲಕ್ಕೆ ಧನ್ಯವಾದಗಳು! ಜೈ ಹಿಂದ್‌! ಎಂದು ಧವನ್‌ ಬರೆದುಕೊಂಡು ವಿಡಿಯೊ ಮೂಲಕ ನಿವೃತ್ತಿಯನ್ನು ಘೋಷಿಸಿದ್ದಾರೆ.

ಧವನ್‌ ಹೇಳಿದ್ದೇನು? :
ನನಗೆ ಒಂದೇ ಒಂದು ಕನಸು ಇತ್ತು. ಅದು ಭಾರತಕ್ಕಾಗಿ ಆಡುವುದಾಗಿತ್ತು. ನಾನು ಅದನ್ನು ಸಾಧಿಸಿದ್ದೇನೆ. ನನ್ನ ಪ್ರಯಾಣಕ್ಕೆ ಸಹಕರಿಸಿದ ಎಲ್ಲರಿಗೂ ನಾನು ಕೃತಜ್ಞನಾಗಿದ್ದೇನೆ. ಮೊದಲನೆಯದಾಗಿ ನನ್ನ ಕುಟುಂಬ. ನನ್ನ ಬಾಲ್ಯದ ತರಬೇತುದಾರರು ದಿವಂಗತ ತಾರಕ್‌ ಸಿನ್ಹಾ ಮತ್ತು ಮದನ್‌ ಶರ್ಮಾ ಅವರ ಮಾರ್ಗದರ್ಶನದಲ್ಲಿ ನಾನು ಆಟದ ಪಟ್ಟುಗಳನ್ನು ಕಲಿತಿದ್ದೇನೆ.

ಇಷ್ಟು ದಿನ ಕ್ರಿಕೆಟ್‌ ಆಡಿದ ನನ್ನ ತಂಡಕ್ಕೂ ಧನ್ಯವಾದ ಅರ್ಪಿಸುತ್ತೇನೆ. ನನಗೆ ಮತ್ತೊಂದು ಕುಟುಂಬ ಸಿಕ್ಕಿತು, ನನಗೆ ಎಲ್ಲಾ ಅಭಿಮಾನಿಗಳಿಂದ ಹೆಸರು, ಖ್ಯಾತಿ ಮತ್ತು ಪ್ರೀತಿ ಸಿಕ್ಕಿತು. ಇಡೀ ಕಥೆ ಓದಬೇಕಾದರೆ ಪುಟ ತಿರುವಿ ಹಾಕಬೇಕು ಎಂಬ ಗಾದೆ ಮಾತಿದೆ. ಅದನ್ನೇ ನಾನು ಮಾಡಲಿದ್ದೇನೆ. ಅಂತರಾಷ್ಟ್ರೀಯ ಮತ್ತು ದೇಶೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸುತ್ತಿದ್ದೇನೆ ಎಂದು ಎಡಗೈ ಬ್ಯಾಟ್ಸಮನ್‌ ತಿಳಿಸಿದ್ದಾರೆ.

1985ರ ಡಿಸೆಂಬರ್‌ 5ರಂದು ದಿಲ್ಲಿಯಲ್ಲಿ ಜನಿಸಿದ ಶಿಖರ್‌ ಧವನ್‌, 2010ರಲ್ಲಿ ಆಸ್ಟ್ರೇಲಿಯಾ ತಂಡದ ಮೂಲಕ ಒನ್‌ಡೇ ಪಂದ್ಯಕ್ಕೆ ಪಾದಾರ್ಪಣೆ ಮಾಡಿದ್ದರೆ, ತಮ ಚೊಚ್ಚಲ ಅಂತಾರಾಷ್ಟ್ರೀಯ ಟೆಸ್ಟ್‌ ಪಂದ್ಯವನ್ನೂ ಆಸ್ಟ್ರೇಲಿಯಾ ವಿರುದ್ಧ ಆಡಿದ್ದು ವಿಶೇಷ. 2013ರಲ್ಲಿ ಟೆಸ್ಟ್‌ ಪಂದ್ಯಕ್ಕೆ ಕಾಲಿಟ್ಟಿದ್ದರು. ವೆಸ್ಟ್‌ ಇಂಡೀಸ್‌‍ ತಂಡದ ವಿರುದ್ಧ 2011ರಲ್ಲಿ ಟಿ-20 ಪಂದ್ಯಕ್ಕೆ ಅಡಿ ಇಟ್ಟರು. ಇನ್ನು ಐಪಿಎಲ್‌ನಲ್ಲಿ ಡೆಲ್ಲಿ ಡೇರ್‌ ಡೆವಿಲ್ಸ್‌‍, ಡೆಕ್ಕನ್‌ ಚಾರ್ಜರ್ಸ್‌, ಸನ್‌ರೈಸಸ್‌‍, ಹೈದರಾಬಾದ್‌, ಡೆಲ್ಲಿ ಕ್ಯಾಪಿಟಲ್ಸ್‌‍ ಮತ್ತು ಪಂಜಾಬ್‌ ಕಿಂಗ್‌್ಸ ಪರ ಆಡಿದ್ದಾರೆ.

ಶಿಖರ್‌ ಧವನ್‌ ಸಾಧನೆ:
ಶಿಖರ್‌ ಧವನ್‌ ಅಂಕಿ ಅಂಶಗಳ ಬಗ್ಗೆ ಮಾತನಾಡುವುದಾದರೆ, ಅವರು 34 ಟೆಸ್ಟ್‌, 167 ಏಕದಿನ ಮತ್ತು 20-20 ಪಂದ್ಯಗಳನ್ನು ಒಳಗೊಂಡಂತೆ 269 ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಧವನ್‌ ಒಟ್ಟು 10,867 ರನ್‌ ಗಳಿಸಿದ್ದಾರೆ. ಮಾರ್ಚ್‌ 16, 2013 ರಂದು ತಮ ಚೊಚ್ಚಲ ಟೆಸ್ಟ್‌ ಪಂದ್ಯದಲ್ಲಿ ಕೇವಲ 85 ಎಸೆತಗಳಲ್ಲಿ ವೇಗದ ಶತಕವನ್ನು ಗಳಿಸಿ ದಾಖಲೆ ಬರೆದಿದ್ದರು. ಅವರು ತಮ ಅಂತರರಾಷ್ಟ್ರೀಯ ವೃತ್ತಿಜೀವನದಲ್ಲಿ ಒಟ್ಟು 23 ಶತಕಗಳನ್ನು ಗಳಿಸಿದ್ದಾರೆ. ಅದರಲ್ಲಿ 17 ಏಕದಿನ ಪಂದ್ಯಗಳಲ್ಲಿ ಮತ್ತು 6 ಟೆಸ್ಟ್‌ಗಳಲ್ಲಿ. ಅಷ್ಟೇ ಅಲ್ಲ, ಅವರ ಹೆಸರಿನಲ್ಲಿ 44 ಅರ್ಧ ಶತಕಗಳಿವೆ.

ಧವನ್‌ 2013 ಮತ್ತು 2017 ರಲ್ಲಿ ಸತತ ಎರಡು ಚಾಂಪಿಯನ್‌್ಸ ಟೋಫಿಗಳಲ್ಲಿ ಅತಿ ಹೆಚ್ಚು ರನ್‌ ಗಳಿಸಿದ್ದಾರೆ. ಇದಕ್ಕಾಗಿ ಅವರು ಪ್ರತಿಷ್ಠಿತ ಗೋಲ್ಡನ್‌ ಬ್ಯಾಟ್‌ ಪ್ರಶಸ್ತಿಯನ್ನು ಸಹ ಪಡೆದರು. ಈ ಎಡಗೈ ಆಟಗಾರನಿಗೆ ಮಿಸ್ಟರ್‌ ಐಸಿಸಿ ಎಂಬ ಬಿರುದು ಕೂಡ ನೀಡಲಾಗಿದೆ. ಇದಲ್ಲದೆ, ಧವನ್‌ 2015 ರ ಏಕದಿನ ವಿಶ್ವಕಪ್‌ನಲ್ಲಿ ಭಾರತದ ಪರ ಗರಿಷ್ಠ ರನ್‌ ಗಳಿಸಿದ ಆಟಗಾರರಾಗಿದ್ದಾರೆ.

ಕೊನೆಯ ಪಂದ್ಯ :
2022ರ ಡಿಸೆಂಬರ್‌ನಲ್ಲಿ ಬಾಂಗ್ಲಾದೇಶ ವಿರುದ್ಧದ ಏಕದಿನ ಪಂದ್ಯದಲ್ಲಿ ಕೊನೆಯ ಬಾರಿಗೆ ಭಾರತಕ್ಕಾಗಿ ಆಡಿದ ಧವನ್‌, 269 ಪಂದ್ಯಗಳಿಂದ 24 ಶತಕಗಳು, 44 ಅರ್ಧಶತಕಗಳು ಸೇರಿದಂತೆ 10,867 ರನ್‌ ಕಲೆ ಹಾಕಿದ್ದಾರೆ.

RELATED ARTICLES

Latest News