ಕೌಲಾಲಂಪುರ,ಜ.10-ಮಲೇಷ್ಯಾ ಓಪನ್ ಸೂಪರ್ ಸೀರಿಸ್‌ನ ಮಹಿಳಾ ಸಿಂಗಲ್‌್ಸಸೆಮಿಫೈನಲ್‌ನಲ್ಲಿ ಚೀನಾದ ವಾಂಗ್ ಝಿಯಿ ವಿರುದ್ಧ ಭಾರತದ ಪಿ ವಿ ಸಿಂಧು ಸೋಲುಕೊಂಡಿದ್ದಾರೆ.ಪಂದ್ಯಾವಳಿಯಲ್ಲಿ ಅದ್ಭುತ ಗೆಲುವಿನ ಓಟದ ಮೂಲಕ ಗಮನ ಸೆಳೆದಿದ್ದ ಸಿದ್ದು ಅಂತಿಮ ಹಂತದಲ್ಲಿ ಪರಾಭವಗೊಂಡಿದ್ದಾರೆ.
ಎರಡು ಬಾರಿಯ ಒಲಿಂಪಿಕ್ ಪದಕ ವಿಜೇತೆ ವಿಶ್ವದ ನಂ.2 ಶ್ರೇಯಾಂಕಿತ ಚೀನಾ ಆಟಗಾರ್ತಿಯ ವಿರುದ್ಧ ಪಂದ್ಯದಲ್ಲಿ ಒತ್ತಡಕ್ಕೆ ಒಳಗಾಗಿ 16-21, 15-21 ನೇರ ಸೆಟ್‌ನಲ್ಲಿ ಸೋಲುಕಂಡರು.
ಪಂದ್ಯ ಕುತೂಹಲ ಘಟ್ಟದಲ್ಲಿ ಸಿಂಧು ಹಲವಾರು ಅನಗತ್ಯ ತಪ್ಪುಗಳನ್ನು ಮಾಡಿದರು.
ಕಳೆದ ವರ್ಷ ಅಕ್ಟೋಬರ್ ಪಾದದ ಗಾಯದಿಂದ ಚೇತರಿಸಿಕೊಂಡ ನಂತರ ಆರಂಭಿಕ ಋತುವಿನ ತನ್ನ ಮೊದಲ ಪಂದ್ಯಾವಳಿಯನ್ನು ಸಿಂಧು ಗಮನ ಸೆಳೆದಿದ್ದರು. ಆದರೆ ಸೋಲಿನಿಂದ ಪಂದ್ಯಾವಳಿಯಲ್ಲಿ ಭಾರತದ ಅಭಿಯಾನಕ್ಕೆ ತೆರೆ ಬಿದ್ದಿದೆ
