ನವದೆಹಲಿ,ಆ.25- ಮುಂದಿ ಅಕ್ಟೋಬರ್ ತಿಂಗಳಿನಲ್ಲಿ ಪಾಕಿಸ್ತಾನದಲ್ಲಿ ನಡೆಯಲಿರುವ ಎಸ್‌ಸಿಒ, ಸಿಎಚ್‌ಜಿ ಶೃಂಗಸಭೆಗೆ ಭಾರತದ ಪ್ರಧಾನಿ ನರೇಂದ್ರಮೋದಿ ಅವರನ್ನು ಆಹ್ವಾನಿಸಲಾಗಿದೆ. ಪ್ರಧಾನಿ ಮೋದಿ ಅವರು ಇಸ್ಲಾಮಾಬಾದ್‌ಗೆ ಭೇಟಿ ನೀಡದಿದ್ದರೂ, ಪಾಕಿಸ್ತಾನದೊಂದಿಗಿನ ಸಂಬಂಧವನ್ನು ಹದಗೆಡಿಸಿದಂತೆ ಭಾರತವನ್ನು ಪ್ರತಿನಿಧಿಸಲು ಸಚಿವರನ್ನು ನೇಮಿಸುತ್ತಾರೆಯೇ? ಎಂಬುದು ಕುತೂಹಲಕಾರಿ ಸಂಗತಿಯಾಗಿದೆ.
ಅಕ್ಟೋಬರ್ 15-16 ರಂದು ಯುರೇಷಿಯನ್ ಗುಂಪಿನ ರಾಷ್ಟ್ರಗಳ ಮುಖ್ಯಸ್ಥರ ಮಂಡಳಿಯ ನಂತರ ಎರಡನೇ ಅತ್ಯುನ್ನತ ನಿರ್ಧಾರ ತೆಗೆದುಕೊಳ್ಳುವ ಸಂಸ್ಥೆಯಾದ ಅಔ ಶೃಂಗಸಭೆಯನ್ನು ಪಾಕಿಸ್ತಾನ ಆಯೋಜಿಸುತ್ತದೆ. ಅಕ್ಟೋಬರ್ 15-16ರಂದು ನಡೆಯಲಿರುವ ಸಭೆಯಲ್ಲಿ ಪಾಕಿಸ್ತಾನವು ಆತಿಥ್ಯವಹಿಸಲಿದೆ.
ಈ ವರ್ಷ ಖಝಾಕಿಸ್ತಾನದಲ್ಲಿ ನಡೆದ ದೇಶಗಳ ಮುಖ್ಯಸ್ಥರ ಶೃಂಗಸಭೆಗೆ ಗೈರಾಗಿದ್ದನ್ನು ಹೊರತುಪಡಿಸಿದರೆ ಮೋದಿ ಎಲ್ಲಾ ಸಭೆಯಲ್ಲೂ ಪಾಲ್ಗೊಂಡಿದ್ದಾರೆ.ಜುಲೈನಲ್ಲಿ ಸಂಸತ್ ಅಧಿವೇಶನ ನಡೆಯುವ ಸಂದರ್ಭದಲ್ಲಿ ಇದು ಆಯೋಜನೆಯಾಗಿದ್ದರಿಂದ ಮೋದಿ ಸಭೆಯಲ್ಲಿ ಪಾಲ್ಗೊಂಡಿರಲಿಲ್ಲ.
ಕಳೆದ ಒಂದು ವರ್ಷದಿಂದ ಉಭಯ ದೇಶಗಳ ನಡುವಿನ ಸಂಬಂಧಗಳು ಸಾಮಾನ್ಯವಾಗಿಲ್ಲ, ಅಧಿಕಾರಕ್ಕೆ ಬಂದ ನಂತರ ಪ್ರಧಾನಿ ಮೋದಿ ಅವರು ಅಂದಿನ ಪ್ರಧಾನಿ ನವಾಜ್ ಷರೀಫ್ ಅವರೊಂದಿಗೆ ಉತ್ತಮ ಬಾಂಧವ್ಯ ಆರಂಭಿಸಿದ್ದರು.
ಕಳೆದ ವರ್ಷ ಬಿಷ್ಕೆಕ್‌ನಲ್ಲಿ ನಡೆದ ಸಿಎಚ್‌ಜಿ ಸಭೆಯಲ್ಲಿ ವಿದೇಶಾಂಗ ಸಚಿವ ಎಸ್ ಜೈಶಂಕರ್ ಭಾಗವಹಿಸಿದ್ದರು. ಆದರೆ ಈ ಬಾರಿ ಯಾವುದೇ ಭಾರತೀಯ ಸಚಿವರಿಗೆ ಪಾಕಿಸ್ತಾನದ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಅವಕಾಶ ನೀಡುತ್ತಾರೋ ಅಥವಾ ಇಲ್ಲವೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.