ನವದೆಹಲಿ,ಆ.16- ಮಧ್ಯಪ್ರದೇಶ, ರಾಜಸ್ಥಾನ, ಗುಜರಾತ್, ಮಹಾರಾಷ್ಟ್ರ ಮತ್ತು ಗೋವಾದಲ್ಲಿ ಮುಂದಿನ 2-3 ದಿನಗಳ ಕಾಲ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಎಚ್ಚರಿಕೆ ನೀಡಿದೆ.
ವಾಯುವ್ಯಮಧ್ಯಪ್ರದೇಶ ಮತ್ತು ಪೂರ್ವ ರಾಜಸ್ಥಾನದ ಮೇಲಿನ ಭೀಕರ ಮಳೆಯಾಗಲಿದ ರೆಡ್ ಅಲರ್ಟ್ ಘೋಷಿಸ ಲಾಗಿದೆ. ಇದಲ್ಲದೆ ಪೂರ್ವ ಮತ್ತು ದಕ್ಷಿಣ ರಾಜಸ್ಥಾನ, ಗುಜರಾತ್ನ ಸೌರಾಷ್ಟ್ರ ಮತ್ತು ಕಚ್ನಲ್ಲಿ ಇಂದಿ ನಿಂದ ಆ.29 ರವರೆಗೆ ಹವಾಮಾನ ಪರಿಸ್ಥಿತಿ ಸರಿಯಿರಲ್ಲ ಹಾಗಾಗಿ ಮುನ್ನೆಚ್ಚರಿಕೆ ಅಗತ್ಯ ಎಂದು ಸೂಚನೆ ನೀಡಲಾಗಿದೆ.
ರಾಜಸ್ಥಾನದ ಚಿತ್ತೋರ್ಗಢದ ದಕ್ಷಿಣ-ಆಗ್ನೇಯದಿಂದ 70 ಕಿಲೋ ಮೀಟರ್ ದೂರದಲ್ಲಿರುವ ಬಿರುಗಾಳಿ ಪಶ್ಚಿಮ- ನೈಋತ್ಯಕ್ಕೆ ಚಲಿಸುವ ನಿರೀಕ್ಷೆಯಿದೆ ಇದರಿಂದ ದಕ್ಷಿಣ ರಾಜಸ್ಥಾನ ಮತ್ತು ಗುಜರಾತ್ನ ಮೇಲೆ ಪರಿಣಾಮ ಬೀರುತ್ತದೆ ಮತ್ತು ಸೌರಾಷ್ಟ್ರ, ಕಚ್ ಮತ್ತು ಪಾಕಿಸ್ತಾನದ ಭಾಗಗಳನ್ನು ಆ.29 ರ ವೇಳೆಗೆ ತಲುಪುತ್ತದೆ ಎಂದು ಐಎಂಡಿ ತಿಳಿಸಿದೆ.
ಬಾಂಗ್ಲಾದೇಶ ಮತ್ತು ಗಂಗಾನದಿಯ ಪಶ್ಚಿಮ ಬಂಗಾಳದ ಮೇಲೆ ವಾಯು ಭಾರ ಕುಸಿತದಿಂದ ಮುಂದಿನ ಎರಡು ದಿನಗಳಲ್ಲಿ ಪಶ್ಚಿಮ ಬಂಗಾಳ, ಉತ್ತರ ಒಡಿಶಾ ಮತ್ತು ಜಾರ್ಖಂಡ್ನಲ್ಲೂ ಮಳೆ ಸಾಧ್ಯತೆಯಿದೆ ಎಂದು ಅವರು ಅಧಿಕಾರಿಗಳು ಹೇಳಿದರು.
ಕೊಂಕಣ, ಗೋವಾ, ಮಧ್ಯ ಮಹಾರಾಷ್ಟ್ರ, ಒಡಿಶಾ, ಗಂಗಾನದಿ ಪಶ್ಚಿಮ ಬಂಗಾಳ ಮತ್ತು ಜಾರ್ಖಂಡ್ನಲ್ಲಿ ಮುಂದಿನ ಎರಡು ದಿನಗಳಲ್ಲಿ ಭಾರೀ ಮಳೆಯಾಗುವ ನಿರೀಕ್ಷೆಯಿದೆ.ಮಧ್ಯಪ್ರದೇಶದಲ್ಲಿ ಗಂಟೆಗೆ 50 ಕಿಮೀ ವೇಗದಲ್ಲಿ ಮತ್ತು ದಕ್ಷಿಣ ರಾಜಸ್ಥಾನದಲ್ಲಿ ಗಂಟೆಗೆ 60 ಕಿಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದೆ ಹೀಗಾಗಿ ಜನರು ಎಚ್ಚರಿಕೆಯಿಂದ ಇರಬೇಕು.
ಈಶಾನ್ಯ ಅರಬ್ಬಿ ಸಮುದ್ರದಲ್ಲಿ ಗಂಟೆಗೆ 55 ಕಿಮೀ ವೇಗದಲ್ಲಿ ಬಲವಾದ ಗಾಳಿ ಬೀಸುವ ನಿರೀಕ್ಷೆಯಿದೆ, ಮುಮದಿನ 3 ದಿನಗಳಲ್ಲಿ ವೇಗ ಹೆಚ್ಚಾಗಲಿದೆಕರಾವಳಿಯಲ್ಲಿ ಸಮುದ್ರದ ಪರಿಸ್ಥಿತಿಗಳು ತುಂಬಾ ಒರಟಾಗಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ಉತ್ತರ ಬಂಗಾಳ ಕೊಲ್ಲಿಯಲ್ಲಿ ಸಹ ಸಮುದ್ರವು ಪ್ರಕ್ಷುಬ್ಧವಾಗುವ ನಿರೀಕ್ಷೆಯಿದೆ.
ಆಗಸ್್ಟ 30 ರವರೆಗೆ ಮೀನುಗಾರರು ಅರಬ್ಬಿ ಸಮುದ್ರ ಮತ್ತು ಬಂಗಾಳ ಕೊಲ್ಲಿಗೆ, ವಿಶೇಷವಾಗಿ ಗುಜರಾತ್ ಮತ್ತು ಮಹಾರಾಷ್ಟ್ರದ ಕರಾವಳಿಯ ಸುತ್ತಲೂ ಹೋಗದಂತೆ ಸೂಚಿಸಲಾಗಿದೆ.
ಕೆವವೆಡೆ ಪ್ರವಾಹ ಉಂಟಾಗಬಹುದು, ವಿಶೇಷವಾಗಿ ನಗರ ಪ್ರದೇಶಗಳಲ್ಲಿ ಎಚ್ಚರಿಕೆ ವಹಿಸಬೇಕು, ಭೂಕುಸಿತ ಮತ್ತು ತೋಟಗಾರಿಕಾ ಬೆಳೆಗಳಿಗೆ ಹಾನಿಯಾಗುವ ಅಪಾಯವಿದೆ ಎಂದು ತಿಳಿಸಿದ್ದಾರೆ.