ಬೆಂಗಳೂರು, ಆ. 27- ಯುಎಇಯಲ್ಲಿ ಅಕ್ಟೋಬರ್ 3 ರಿಂದ 20ರವರೆಗೆ ನಡೆಯಲಿರುವ ಮಹಿಳಾ ಟ್ವೆಂಟಿ-20 ವಿಶ್ವಕಪ್ ಟೂರ್ನಿಗೆ ಮಂಗಳವಾರ (ಆಗಸ್ಟ್ 27) ಬಿಸಿಸಿಐ 15 ಸದಸ್ಯರ ಭಾರತ ತಂಡವನ್ನು ಪ್ರಕಟಿಸಿದ್ದು ಕನ್ನಡತಿ ಶ್ರೇಯಾಂಕಾಪಾಟೀಲ್ ಅವರಿಗೆ ಅವಕಾಶ ಕಲ್ಪಿಸಿದ್ದಾರೆ.
ಹರ್ಮನ್ ಪ್ರೀತ್ ಅವರು ತಂಡವನ್ನು ಮುನ್ನಡೆಸಲಿದ್ದು, ಸತಿ ಮಂಧಾನಾಗೆ ಉಪನಾಯಕಿಯ ಜವಾಬ್ದಾರಿ ನೀಡಲಾಗಿದೆ. ಅನುಭವಿ ಆಟಗಾರ್ತಿಯರಾದ ಶೆಫಾಲಿ ವರ್ಮಾ, ರೀಚಾ ಘೋಷ್, ಯಸ್ತಿಕಾ ಭಾಟಿಯಾ, ವೇಗಿ ರೇಣುಕಾಸಿಂಗ್, ಸ್ಪಿನ್ನರ್‌ಗಳಾದ ಆಶಾ ಶೋಭನಾ ಅವರಿಗೂ ತಂಡದಲ್ಲಿ ಸ್ಥಾನ ಕಲ್ಪಿಸಲಾಗಿದೆ. ಆದರೆ ಗಾಯಗೊಂಡಿರುವ ಶ್ರೇಯಾಂಕಾಪಾಟೀಲ್ ಹಾಗೂ ಯಾಸ್ತಿಕಾ ಭಾಟಿಯಾರವರನ್ನು ಫಿಟ್ನೆಸ್ ಆಧಾರಿಸಿ ಆಡಲಿಸಲಾಗುವುದು ಎಂದು ಮಂಡಳಿ ತಿಳಿಸಿದೆ.
ಭಾರತಕ್ಕೆ ಪ್ರಬಲ ಪೈಪೋಟಿ:
ಎ ಗುಂಪಿನಲ್ಲಿ ಸ್ಥಾನ ಪಡೆದಿರುವ ಭಾರತ ತಂಡಕ್ಕೆ ಪ್ರಬಲ ಪೈಪೋಟಿ ಎದುರಾಗಲಿದೆ. ಆಸ್ಟ್ರೇಲಿಯಾ, ನ್ಯೂಜಿಲ್ಯೆಂಡ್, ಪಾಕಿಸ್ತಾನ ಹಾಗೂ ಏಷ್ಯಾಕಪ್ ವಿಜೇತ ತಂಡ ಶ್ರೀಲಂಕಾ ಪ್ರಬಲ ಪೈಪೋಟಿ ನೀಡಲಿದೆ.
ಟಿ-20 ಮಹಿಳಾ ವಿಶ್ವಕಪ್ ಟೂರ್ನಿಗೆ ಭಾರತ ಮಹಿಳಾ ತಂಡ:
ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸತಿ ಮಂಧಾನ (ಉಪನಾಯಕಿ), ಶಾಲಿ ವರ್ಮಾ, ದೀಪ್ತಿ ಶರ್ಮಾ, ಜೆಮಿಮಾ ರಾಡ್ರಿಗಸ್, ರಿಚಾ ಘೋಷ್ (ವಿಕೆಟ್ ಕೀಪರ್), ಯಾಸ್ತಿಕಾ ಭಾಟಿಯಾ (ವಿಕೆಟ್ ಕೀಪರ್), ಪೂಜಾ ವಸಾ್ತ್ರಕರ್, ಅರುಂಧತಿ ರೆಡ್ಡಿ, ರೇಣುಕಾ ಸಿಂಗ್ ಠಾಕೂರ್, ದಯಾಲನ್ ಹೇಮಲತಾ, ಆಶಾ ಶೋಭಾನಾ, ರಾಧಾ ಯಾದವ್, ಶ್ರೇಯಾಂಕಾ ಪಾಟೀಲ್, ಸಜನಾ ಸಜೀವನ್.