Friday, September 20, 2024
Homeರಾಜ್ಯಅಕ್ಕ ಸಮ್ಮೇಳನ : ಅಮೆರಿಕದಲ್ಲಿ ಮೊಳಗಿದ ಕನ್ನಡ ಕಹಳೆ

ಅಕ್ಕ ಸಮ್ಮೇಳನ : ಅಮೆರಿಕದಲ್ಲಿ ಮೊಳಗಿದ ಕನ್ನಡ ಕಹಳೆ

AKKA Conference

ಬೆಂಗಳೂರು,ಆ.31- ಅಮೆರಿಕದ ಕನ್ನಡ ಕೂಟಗಳ ಆಗರ (ಅಕ್ಕ) ನಡೆಸುವ 12ನೇ ವಿಶ್ವ ಕನ್ನಡ ಸಮೇಳನ ಅಮೆರಿಕದ ವರ್ಜಿನಿಯಾ ರಾಜ್ಯದ ಗ್ರೇಟರ್‌ ರಿಚಂಡ್‌ ಕನ್ವೆನ್ಷನ್ ಸೆಂಟರ್‌ನಲ್ಲಿ ಇಂದು ಅದ್ಧೂರಿಯಾಗಿ ಆರಂಭಗೊಂಡಿದೆ.

ಅಮೆರಿಕದಲ್ಲಿ ನೆಲೆಸಿರುವ ಕನ್ನಡಿಗರು ಒಗ್ಗೂಡಿ ನಡೆಸುತ್ತಿರುವ ಈ ವಿಶ್ವ ಕನ್ನಡ ಸಮೇಳನಕ್ಕೆ ಅತ್ಯಂತ ಉತ್ಸಾಹ ಕಂಡುಬಂದಿದ್ದು, ಕನ್ನಡ ನಾಡಿನ ಹಿರಿಮೆ, ಗರಿಮೆ, ಸಾಹಿತ್ಯ, ಸಂಗೀತದ ಮತ್ತು ಸಂಸ್ಕೃತಿ ಅನಾವರಣಗೊಂಡಿದೆ.

ಎಲ್ಲೆಡೆ ಕನ್ನಡ ಬಾವುಟ ರಾರಾಜಿಸುತ್ತಿದ್ದು, ಉದ್ಘಾಟನೆಗೆ ಮುನ್ನ ನಡೆದ ಮೆರವಣಿಗೆಯಲ್ಲಿ ಸಾಂಪ್ರದಾಯಿಕ ಉಡುಗೆ ತೊಟ್ಟು ನೂರಾರು ಮಂದಿ ಕನ್ನಡಿಗರು ಭಾಗವಹಿಸಿದ್ದು ಎಲ್ಲರನ್ನೂ ಚಕಿತಗೊಳಿಸಿತು.

ಮಾಯಾನಗರಿ ಎಂದೇ ಬಿಂಬಿತವಾಗಿರುವ ವಿಶ್ವದ ಶ್ರೀಮಂತ ರಾಷ್ಟ್ರ ಅಮೆರಿಕದಲ್ಲಿ ನಡೆಯುತ್ತಿರುವ ಮೂರು ದಿನಗಳ ಈ ಕನ್ನಡ ಸಮೇಳನಕ್ಕೆ ರಾಜ್ಯದಿಂದಲೂ ಕಲಾವಿದರು, ಸಾಹಿತಿಗಳು, ಜನಪ್ರತಿನಿಧಿಗಳು ತೆರಳಲಿದ್ದಾರೆ.

ಸಭಾಪತಿ ಬಸವರಾಜ ಹೊರಟ್ಟಿ, ಕೃಷಿ ಸಚಿವ ಚೆಲುವರಾಯಸ್ವಾಮಿ, ಮಾಜಿ ಸಚಿವ ಆಂಜನೇಯ ಸೇರಿದಂತೆ ಹಲವು ಗಣ್ಯರು ಅಮೆರಿಕಕ್ಕೆ ಆಗಮಿಸಿದ್ದಾರೆ. ನಾವು ಅಮೆರಿಕದಲ್ಲಿ ನೆಲೆಸಿದ್ದರೂ ನಮ ತಾಯ್ನಾಡಿನ ಬೇರು ಮರೆಯುವಂತಿಲ್ಲ. ನಾವು ಹುಟ್ಟಿದ ಸ್ಥಳವನ್ನು ಸದಾ ನೆನೆದು ಕರ್ಮಭೂಮಿಯಾದ ಭಾರತದ ಬಗ್ಗೆ ನಮಗೆ ಅಪಾರ ಗೌರವವಿದೆ.

ಇಂದು ವಿಶ್ವದಲ್ಲಿ ಅತಿ ಎತ್ತರಕ್ಕೆ ಬೆಳೆಯುತ್ತಿರುವ ಭಾರತದ ಬಗ್ಗೆ ನಮಗೆ ಅತೀವ ಹೆಮೆಯಿದೆ. ನಮ ಕನ್ನಡ ಭಾಷೆಯನ್ನು ಅಮೆರಿಕದಲ್ಲಿ ಪಸರಿಸುವಂತಹ ಜವಾಬ್ದಾರಿ ನನ್ನ ಮೇಲಿದೆ. ಇದನ್ನು ಯಶಸ್ವಿಯಾಗಿ ನಿಭಾಯಿಸುತ್ತೇನೆ ಎಂಬ ವಿಶ್ವಾಸವಿದೆ ಎಂದು ರವಿ ಬೋರೇಗೌಡ ಹೇಳಿದರು.

ಇದೇ ವೇಳೆ ಅಕ್ಕ ಸಂಸ್ಥಾಪಕ ಅಧ್ಯಕ್ಷ ಡಾ.ಅಮರನಾಥ್‌ ಗೌಡ, ಖ್ಯಾತ ಉದ್ಯಮಿ ವಿಶ್ವಾಮಿತ್ರ ಸೇರಿದಂತೆ ಹಲವು ಕನ್ನಡಿಗರು ನಾಲ್ಕು ವರ್ಷದ ಬಳಿಕ ಮತ್ತೆ ಅಮೆರಿಕದಲ್ಲಿ ಅಕ್ಕ ವಿಶ್ವ ಕನ್ನಡ ಸಮೇಳನ ನಡೆಯುತ್ತಿದೆ. ಅಚ್ಚುಕಟ್ಟಾಗಿ ಎಲ್ಲರೂ ಒಂದಾಗಿ ನಮ ಕನ್ನಡದ ಸಿರಿಯನ್ನು ಎಲ್ಲೆಡೆ ಹರಡುತ್ತಿದ್ದೇವೆ.

ಸುಮಾರು 5 ಸಾವಿರಕ್ಕೂ ಹೆಚ್ಚು ಕನ್ನಡಿಗರು ಅಮೆರಿಕದ ವಿವಿಧ ರಾಜ್ಯಗಳಿಂದ ರಿಚಂಡ್‌ಟೌನ್‌ಗೆ ಬಂದಿದ್ದಾರೆ. ಇಲ್ಲಿನ ಸರ್ಕಾರ ಕೂಡ ನಮಗೆ ಸ್ಪಂದಿಸಿದೆ. ನಮ ಸಂಸ್ಕೃತಿಯಲ್ಲಿ ಅವರೂ ಕೂಡ ಬೆರೆತಿದ್ದಾರೆ.ಕರ್ನಾಟಕ ಸರ್ಕಾರ ಕೂಡ ಸಹಕಾರ ನೀಡುತ್ತಿದ್ದು, ಉದ್ಘಾಟನೆ ನೆರವೇರಿದ್ದು, ಇನ್ನೂ ಹಲವಾರು ಕಾರ್ಯ ಕ್ರಮಗಳು ನಡೆಯುತ್ತಿದ್ದು, ಸುಸೂತ್ರವಾಗಿ ನಡೆಯಲು ಎಲ್ಲಾ ಸಿದ್ಧತೆಗಳು ನಡೆದಿವೆ ಎಂದು ತಿಳಿಸಿದರು.

ರಾಷ್ಟ್ರಕವಿ ಕುವೆಂಪು ಅವರ ಬಾರಿಸು ಕನ್ನಡ ಡಿಂ ಡಿಂ ಡಮವ ಹಾಡಿನ ಜೊತೆಗೆ ಎಲ್ಲಾದರೂ ಇರು, ಎಂತಾದರೂ ಇರು, ನೀ ಕನ್ನಡವಾಗಿರು ಸೇರಿದಂತೆ ಹಲವಾರು ಕನ್ನಡ ಗೀತೆಗಳನ್ನು ಹಾಡುವ ಮೂಲಕ ಕಲಾವಿದರು ಅಮೆರಿಕದ ರಿಚಂಡ್‌ಟೌನ್‌ನಲ್ಲಿ ಕನ್ನಡದ ವಾತಾವರಣವನ್ನು ಮೂಡಿಸಿದ್ದಾರೆ. ವಿದ್ಯಾಭೂಷಣ್‌ ಅವರ ಗೀತಗಾಯನ, ಗುರುಕಿರಣ್‌ ಅವರ ಪುನೀತ್‌ ನೈಟ್‌್ಸ ಸೇರಿದಂತೆ ಹಲವು ವೈವಿಧ್ಯಮಯ ಕಾರ್ಯಕ್ರಮಗಳು ನಡೆದವು.

RELATED ARTICLES

Latest News