ಶ್ರೀನಗರ,ಸೆ.1– ಜಮ್ಮು ಕಾಶ್ಮೀರ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಸ್ಟಾರ್ ಪ್ರಚಾರಕರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಪಕ್ಷದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿದಂತೆ 40 ಜನರ ಹೆಸರುಗಳಿವೆ.
ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖು ಮತ್ತು ರಾಜಸ್ಥಾನದ ಮಾಜಿ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ಅವರ ಹೆಸರುಗಳೂ ಕಾಂಗ್ರೆಸ್ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಸೇರಿವೆ.
ಇದಲ್ಲದೆ ಕೆಸಿ ವೇಣುಗೋಪಾಲ್, ಅಜಯ್ ಮಾಕನ್, ಅಂಬಿಕಾ ಸೋನಿ, ಭರತ್ ಸಿಂಗ್ ಸೋಲಂಕಿ, ತಾರಿಕ್ ಹಮೀದ್ ಕರಾರ್, ಜೈರಾಮ್ ರಮೇಶ್, ಗುಲಾಮ್ ಅಹಮದ್ ಮಿರ್, ಮುಖೇಶ್ ಅಗ್ನಿಹೋತ್ರಿ, ಚರಂಜಿತ್ ಸಿಂಗ್ ಚನ್ನಿ, ಸಲಾನ್ ಖುರ್ಷಿದ್, ಸುಖಿಂದರ್ ಸಿಂಗ್ ರಾಂಧವಾ, ಅಮರಿಂದರ್ ಸಿಂಗ್, ರಾಜಾದ್ ವಾಡಿಂಗ್, ನಾಸೀರ್ ಹುಸೇನ್, ವಿಕಾರ್ ರಸೂಲ್ ವಾನಿ ಹೆಸರಗಳನ್ನೂ ಘೋಷಿಸಲಾಗಿದೆ.
ರಜನಿ ಪಾಟೀಲ್, ರಾಜೀವ್ ಶುಕ್ಲಾ, ಮನೀಶ್ ತಿವಾರಿ, ಇವ್ರಾನ್ ಪ್ರತಾಪ್‌ಗರ್ಹಿ, ಕಿಶೋರಿ ಲಾಲ್ ಶರ್ಮಾ, ರಂಜಿತ್ ರಂಜನ್, ರಮಣ್ ಭಲ್ಲಾ, ತಾರಾಚಂದ್, ಚೌಧರಿ ಲಾಲ್ ಸಿಂಗ್, ಪೀರ್ಜಾದಾ ಮೊಹಮದ್ ಸಯೀದ್, ಪವನ್ ಮಾಸ್ , ಸುಪ್ರಿಯಾ ಶ್ರೀನೆಟ್ , ಕನ್ಹ್ಯಾ ಕುಮಾರ್, ಮನೋಜ್ ಯಾದವ್, ಶಾನವಾಜ್ ಚೌಧರಿ, ರಾಜೇಶ್ ಲಿಲೋಥಿಯಾ, ಅಲ್ಕಾ ಲಂಬಾ, ಶ್ರೀನಿವಾಸ್ ಬೀವಿ ಮತ್ತು ನೀರಜ್ ಕುಂದನ್ ಕೂಡ ಕಾಂಗ್ರೆಸ್‌ನ ಸ್ಟಾರ್ ಪ್ರಚಾರಕರಾಗಿದ್ದಾರೆ.
ಜಮು ಮತ್ತು ಕಾಶೀರದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯ ದಿನಾಂಕಗಳಲ್ಲಿ ಚುನಾವಣಾ ಆಯೋಗವು ಕೆಲವು ಬದಲಾವಣೆಗಳನ್ನು ಮಾಡಿದೆ. ಈಗ ಚುನಾವಣಾ ಫಲಿತಾಂಶವನ್ನು ಅಕ್ಟೋಬರ್ 4 ರ ಬದಲು ಅಕ್ಟೋಬರ್ 8 ರಂದು ಪ್ರಕಟಿಸಲಾಗುವುದು.
ಜಮು ಮತ್ತು ಕಾಶೀರದ 90 ವಿಧಾನಸಭಾ ಸ್ಥಾನಗಳಿಗೆ ಮೂರು ಹಂತಗಳಲ್ಲಿ ಚುನಾವಣೆಗಳು ನಡೆಯಲಿವೆ. ಮೊದಲ ಹಂತದಲ್ಲಿ ಸೆಪ್ಟೆಂಬರ್ 18 ರಂದು ರಾಜ್ಯದ 24 ವಿಧಾನಸಭಾ ಸ್ಥಾನಗಳಿಗೆ ಮತದಾನ ನಡೆಯಲಿದೆ. ಎರಡನೇ ಹಂತದಲ್ಲಿ, ಸೆಪ್ಟೆಂಬರ್ 25 ರಂದು ಜಮು ಮತ್ತು ಕಾಶೀರದ 26 ವಿಧಾನಸಭಾ ಸ್ಥಾನಗಳಿಗೆ ಮತದಾನ ನಡೆಯಲಿದ್ದು, ಮೂರನೇ ಮತ್ತು ಕೊನೆಯ ಹಂತದಲ್ಲಿ, ಅಕ್ಟೋಬರ್ 1 ರಂದು ಜಮು ಮತ್ತು ಕಾಶೀರದ 40 ವಿಧಾನಸಭಾ ಸ್ಥಾನಗಳಿಗೆ ಮತದಾನ ನಡೆಯಲಿದೆ.