ಗದಗ,ಜ.11-ಮನೆಯೊಂದನ್ನು ಕಟ್ಟಲು ಅಡಿಪಾಯಕ್ಕೆ ಮಣ್ಣು ಅಗೆಯುವಾಗ ತಂಬಿಗೆಯಲ್ಲಿ ಚಿನ್ನದ ನಣ್ಯ ,ಆಭರಣ,ವಿಗ್ರಹಗಳಿಂದ ಕೂಡಿದ ನಿಧಿ ಪತ್ತೆಯಾಗಿದೆ. ಗಂಗವ್ವ ಬಸವರಾಜ ರಿತ್ತಿ ಎಂಬುವವರು ವಾರದ ಹಿಂದೆಯಷ್ಟೇ ತಮ ಹಳೆ ಮನೆ ಕೆಡವಿ ಹೊಸ ಮನೆ ನಿರ್ಮಿಸಲು ಮುಂದಾಗಿದ್ದರು ನಿನ್ನೆ ಪಾಯ ಪೂಜೆ ಮಾಡಿ ಮಣ್ಣು ಅಗೆಯುವಾಗ ಈ ನಿಧಿ ಸಿಕ್ಕಿದೆ.ಕೂಡಲೆ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ,ಸುದ್ದಿ ತಿಳಿಯುತ್ತಿದಂತೆ ನಿಧಿ ನೋಡಲು ನೂರಾರು ಜನರು ಸ್ಥಳಕ್ಕೆ ಆಗಮಿಸಿದ್ದಾರೆ.
ಘಟನಾ ಸ್ಥಳಕ್ಕೆ ಎಡಿಸಿ ದುರ್ಗೇಶ್, ಎಸ್ಪಿ ರೋಹನ್ ಜಗದೀಶ್, ಎಸಿ ರಂಗಪ್ಪ, ತಹಶೀಲ್ದಾರ್ ಶ್ರೀನಿವಾಸ ಕುಲಕರ್ಣಿ ಭೇಟಿ ನೀಡಿದ್ದಾರೆ. ಲಕ್ಕುಂಡಿ ಪ್ರಾಧಿಕಾರದ ಸದಸ್ಯರು ಮತ್ತು ಪುರಾತತ್ವ ಇಲಾಖೆಯ ಸಿಬ್ಬಂದಿ ಪರಿಶೀಲನೆ ನಡೆಸಲಿದ್ದಾರೆ. ಪತ್ತೆಯಾದ ಚಿನ್ನಾಭರಣ ಯಾವ ಶತಮಾನದ್ದು ಎಂಬುದರ ಬಗ್ಗೆ ಪರಿಶೀಲಿಸುತ್ತಿದಾರೆ.
ಸ್ಥಳಕ್ಕೆ ಆಗಮಿಸಿದ ಜಿಲ್ಲಾಡಳಿತದ ಅಧಿಕಾರಿಗಳು ತಂಬಿಗೆ ಪಂಚನಾಮೆ ಮಾಡಿದರು.ಸರಕಾರಕ್ಕೆ ಗಮನಕ್ಕೆ ವಿಷಯ ತಂದ ಗಂಗವ್ವ ರಿತ್ತಿ ಅವರ ಪುತ್ರ ಪ್ರಜ್ವಲ್ ರಿತ್ತಿ ಹಾಗೂ ಗ್ರಾ.ಪಂ ಸದಸ್ಯೆ ರಜೀಯಾ ಬೇಗಂ ತಹಶೀಲ್ದಾರ ಅವರನ್ನು ಅಧಿಕಾರಿಗಳು ಸನಾನಿಸಿದರು.
ಸುದ್ದಿ ತಿಳಿಯುತ್ತಿದ್ದಂತೆ ಗ್ರಾಮಸ್ಥರು ಕುತೂಹಲದಿಂದ ತಂಡೋಪ ತಂಡವಾಗಿ ಸ್ಥಳದಲ್ಲಿ ಸೇರಲಾರಂಭಿಸಿದರು. ಕಳೆದ ವರ್ಷ ಪ್ರಾಚ್ಯಾವಶೇಷಗಳ ಅನ್ವೇಷಣೆ ವೇಳೆ 15 ಕ್ಕೂ ಅವಶೇಷಗಳು ಪತ್ತೆಯಾಗಿದ್ದವು. ಇದಾದ ನಂತರ ಯುನೇಸ್ಕೋ ವಿಶ್ವ ಪರಂಪರೆ ಪಟ್ಟಿಗೆ ಸೇರಿಸಲು ಈಗಾಗಲೇ ಪ್ರವಾಸೋದ್ಯಮ ಇಲಾಖೆ ಸರಕಾರ ಪ್ರಸ್ತಾವನೆ ಕೂಡ ಕಳಿಸಿದೆ.ಮುಖ್ಯಮಂತ್ರಿಗಳು ಉತ್ಖನನಕ್ಕೆ ಚಾಲನೆ ನೀಡಿದ್ದು ಈಗ ಗ್ರಾಮದಲ್ಲಿತಂಬಿಗೆ ದೊರಕಿರುವುದು ಇಲ್ಲಿಅವಶೇಷಗಳ ಇದ್ದವು ಎನ್ನುವುದಕ್ಕೆ ಪುಷ್ಟಿ ದೊರೆತಂತಾಗಿದೆ.
ಇನ್ನು ಈ ತಂಬಿಗೆ ಯಾವ ಅರಸರ ಕಾಲದ್ದು ಎಂಬುದು ಇತಿಹಾಸ ತಜ್ಞರ ಪರಿಶೀಲನೆ ನಂತರ ಗೊತ್ತಾಗಲಿದೆ.ನಿಧಿಯಿರುವ ತಂಬಿಗೆಯಲ್ಲಿ ಪುರಾತರ ಕಾಲದ ಚಿನ್ನದ ಆಭರಣಗಳು, ವಿಗ್ರಹಗಳು ಇವೆ. ನಿಧಿ ಸಿಕ್ಕ ಕೂಲಡೇ ಇದನ್ನು ಬಸವರಾಜ ರಿತ್ತಿ ಅವರ ಕುಟುಂಬ ಪೊಲೀಸರಿಗೆ ಒಪ್ಪಿಸಿದೆ. ನಿಧಿಯನ್ನು ಲಕ್ಕುಂಡಿ ಗ್ರಾಮದ ಗಣೇಶನ ದೇವಸ್ಥಾನದಲ್ಲಿ ಇಡಲಾಗಿದೆ. ನಿಧಿಯನ್ನು ನೋಡಲು ಜನಸಾಗರವೇ ಹರಿದುಬಂದಿತ್ತು. ಜನರನ್ನು ನಿಯಂತ್ರಿಸಲು ಹಾಗೂ ಕಳ್ಳಕಾಕರ ಹಾವಳಿಯನ್ನು ತಪ್ಪಿಸಲು ದೇವಸ್ಥಾನಕ್ಕೆ ಶಸ್ತ್ರಸ್ತ್ರ ಪೊಲೀಸ್ ಪಡೆಯನ್ನು ನಿಯೋಜಿಸಲಾಗಿದೆ.
