ಬೆಂಗಳೂರು,ಸೆ.26- ವಯೋ ಸಹಜದಿಂದ ಬಳಲುತ್ತಿದ್ದ ಮಾಜಿ ಮುಖ್ಯಮಂತ್ರಿ ದಿ. ವೀರೇಂದ್ರ ಪಾಟೀಲರ ಪತ್ನಿ ಶಾರದಾ ಪಾಟೀಲ (93) ಅವರು ಬೆಂಗಳೂರಿನ ಸದಾಶಿವನಗರದ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಮೃತ ಶಾರದಾ ಪಾಟೀಲ ಅವರು, ಮಾಜಿ ಶಾಸಕ ಕೈಲಾಸನಾಥ್ ಪಾಟೀಲ ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಪಾರ್ಥೀವ ಶರೀರವನ್ನು ಚಿಂಚೋಳಿಗೆ ತೆಗೆದುಕೊಂಡು ಹೋಗಲು ಕುಟಂಬಸ್ಥರು ತೀರ್ಮಾನಿಸಿದ್ದಾರೆ.
ಚಿಂಚೋಳಿಯಲ್ಲಿರುವ ವೀರೇಂದ್ರ ಪಾಟೀಲರ ಸಮಾಧಿ ಪಕ್ಕದಲ್ಲೇ ಶಾರದಾ ಪಾಟೀಲರ ಅಂತ್ಯಕ್ರಿಯೆ ಬುಧವಾರ ಮಧ್ಯಾಹ್ನ ನಡೆಯಲಿದೆ ಎಂದು ಕೈಲಾಸನಾಥ ಪಾಟೀಲ ತಿಳಿಸಿದ್ದಾರೆ.
ಬೆಂಗಳೂರು ಬಂದ್‍ಗೆ ಜೆಡಿಎಸ್ ಸಂಪೂರ್ಣ ಬೆಂಬಲ
ಸಂತಾಪ :
ಮಾಜಿ ಮುಖ್ಯಮಂತ್ರಿ ದಿ. ವೀರೇಂದ್ರ ಪಾಟೀಲರ ಪತ್ನಿ ಶಾರದಾ ಪಾಟೀಲ ಅವರ ನಿಧನಕ್ಕೆ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ. ಬಸವರಾಜ್ ಬೊಮ್ಮಯಿ, ಸೇರಿದಂತೆ ಮತ್ತಿತರ ಅನೇಕ ಗಣ್ಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ ಪ್ರಬಲ ಲಿಂಗಾಯಿತ ಸಮುದಾಯದ ನಾಯಕರಾಗಿದ್ದ ವೀರೇಂದ್ರ ಪಾಟೀಲ್ ಅವರು 1989 ರಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಐತಿಹಾಸಿಕ ಗೆಲುವು ತಂದುಕೊಟ್ಟವರಲ್ಲಿ ಪ್ರಮುಖರು. ಹಠಾತ್ತನೆ ಮುಖ್ಯಮಂತ್ರಿ ಸ್ಥಾನವನ್ನು ಕಳೆದುಕೊಂಡಿದ್ದ ಅವರು 1997 ಮಾರ್ಚ್ 14 ರಂದು ಆನಾರೋಗ್ಯದ ಕಾರಣ ನಿಧನರಾಗಿದ್ದರು.