Friday, November 22, 2024
Homeರಾಷ್ಟ್ರೀಯ | Nationalಮಣಿಪುರದ ಇಂಫಾಲದಲ್ಲಿ ಡ್ರೋನ್‌ ದಾಳಿ, ಮೂವರ ಸ್ಥಿತಿ ಗಂಭೀರ

ಮಣಿಪುರದ ಇಂಫಾಲದಲ್ಲಿ ಡ್ರೋನ್‌ ದಾಳಿ, ಮೂವರ ಸ್ಥಿತಿ ಗಂಭೀರ

Three injured in second drone attack in Manipur

ಇಂಫಾಲ್‌‍, ಸೆ 3 (ಪಿಟಿಐ) ಮಣಿಪುರದ ಇಂಫಾಲ್‌ ಪಶ್ಚಿಮ ಜಿಲ್ಲೆಯಲ್ಲಿ ಡ್ರೋನ್‌ ಬಳಸಿ ಶಂಕಿತ ಉಗ್ರರು ಹೊಸ ಬಾಂಬ್‌ ದಾಳಿ ನಡೆಸಿದ್ದು, 23 ವರ್ಷದ ಮಹಿಳೆ ಸೇರಿದಂತೆ ಮೂವರು ಗಾಯಗೊಂಡಿದ್ದಾರೆ.

ನಿನ್ನೆ ಸಂಜೆ 6.20 ರ ಸುಮಾರಿಗೆ ವಸತಿ ಪ್ರದೇಶದಲ್ಲಿ ಡ್ರೋನ್‌ನಿಂದ ಕನಿಷ್ಠ ಎರಡು ಸ್ಫೋಟಕಗಳನ್ನು ಬೀಳಿಸಲಾಯಿತು, ಇದರಲ್ಲಿ ಮಹಿಳೆ ಮತ್ತು ಇತರ ಇಬ್ಬರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಹಿಳೆ ಸೆಂಜಮ್‌ ಚಿರಾಂಗ್‌ ಪ್ರದೇಶದ ತನ್ನ ನಿವಾಸದಲ್ಲಿದ್ದಾಗ ಬಾಂಬ್‌ ತನ್ನ ಮನೆಯ ಸುಕ್ಕುಗಟ್ಟಿದ ಕಬ್ಬಿಣದ ಮೇಲ್ಛಾವಣಿಯ ಶೀಟ್‌ಗಳ ಮೂಲಕ ತೂರಿಕೊಂಡು ಸ್ಫೋಟಗೊಂಡಿತು ಎಂದು ಅವರು ಹೇಳಿದರು. ಗಾಯಗೊಂಡ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಾಂಗ್‌ಪೊಕ್ಪಿ ಜಿಲ್ಲೆಯ ಬೆಟ್ಟದ ಮೇಲಿನ ಸ್ಥಾನಗಳಿಂದ ತಗ್ಗು ಪ್ರದೇಶದ ಸೆಜಮ್‌ ಚಿರಾಂಗ್‌ ಗ್ರಾಮದ ಮೇಲೆ ಉಗ್ರರು ಮನಬಂದಂತೆ ಗುಂಡು ಹಾರಿಸಿದ್ದಾರೆ ಎಂದು ಭದ್ರತಾ ಪಡೆಗಳು ಪ್ರತಿದಾಳಿ ನಡೆಸಿದರು ಎಂದು ಪೊಲೀಸ್‌‍ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಸ್ಥಳವು ಕೌಟ್ರುಕ್‌ನಿಂದ ಕೇವಲ 3 ಕಿಮೀ ದೂರದಲ್ಲಿದೆ, ಭಾನುವಾರದಂದು ಇದೇ ರೀತಿಯ ಡ್ರೋನ್‌ ಬಾಂಬ್‌ ಮತ್ತು ಗುಂಡಿನ ದಾಳಿಯಲ್ಲಿ ಇಬ್ಬರು ಸಾವನ್ನಪ್ಪಿ, ಒಂಬತ್ತು ಮಂದಿ ಗಾಯಗೊಂಡಿದ್ದರು.

ಏತನಧ್ಯೆ, ಮಣಿಪುರ ಪೊಲೀಸರು ಹೇಳಿಕೆಯಲ್ಲಿ, ಶೋಧ ಕಾರ್ಯಾಚರಣೆಯ ಸಮಯದಲ್ಲಿ ಕಾಂಗ್‌ಪೋಕ್ಪಿ ಜಿಲ್ಲೆಯ ಸಮೀಪದ ಖರಂ ವೈಫೇಯ್‌ ಗ್ರಾಮದಿಂದ ಡ್ರೋನ್‌ ಅನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.ಕಾಂಗ್‌ಪೊಕ್ಪಿ ಜಿಲ್ಲೆಯ ಕಾಂಗ್‌ಚುಪ್‌ ಪೊನ್ಲೆನ್‌ನಲ್ಲಿ ಭದ್ರತಾ ಪಡೆಗಳು ನಡೆಸಿದ ಶೋಧ ಕಾರ್ಯಾಚರಣೆಗಳು ಮತ್ತು ಪ್ರದೇಶದ ಪ್ರಾಬಲ್ಯವು ಶಸಾ್ತ್ರಸ್ತ್ರಗಳು ಮತ್ತು ಸ್ಫೋಟಕಗಳನ್ನು ವಶಪಡಿಸಿಕೊಳ್ಳಲು ಕಾರಣವಾಯಿತು.

ಕಾರ್ಯಾಚರಣೆಯ ವೇಳೆ ಹತ್ತು 12 ಇಂಚಿನ ಸಿಂಗಲ್‌ ಬೋರ್‌ ಬ್ಯಾರೆಲ್‌ ರೈಫಲ್‌ಗಳು, ಒಂದು ಸುಧಾರಿತ ಮಾಟರ್ರ, ಒಂಬತ್ತು ಸುಧಾರಿತ ಮಾರ್ಟರ್‌ ಬ್ಯಾರೆಲ್‌ಗಳು, ಇಪ್ಪತ್ತು ಜೆಲಾಟಿನ್‌ ಸ್ಟಿಕ್‌ಗಳು, ಮೂವತ್ತು ಡಿಟೋನೇಟರ್‌ಗಳು, ಎರಡು ದೇಶ ನಿರ್ಮಿತ ರಾಕೆಟ್‌ಗಳು ಮತ್ತು ಇತರವುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

RELATED ARTICLES

Latest News