ಬೆಂಗಳೂರು,ಸೆ.5- ರಾಜ್ಯದ ವಿವಿಧ ಕಾರಾಗೃಹಗಳಲ್ಲಿರುವ ಶಿಕ್ಷಾಬಂಧಿ ಖೈದಿಗಳನ್ನು ಸನ್ನಡತೆ ಆಧಾರದ ಮೇಲೆ ಬಿಡುಗಡೆ ಮಾಡುವ ಕುರಿತು ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆಸುವ ಸಾಧ್ಯತೆಯಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ರಾಜ್ಯದ ವಿವಿಧ ಕೇಂದ್ರ ಕಾರಾಗೃಹದಲ್ಲಿರುವ 59 ಜೀವಾವಧಿ ಶಿಕ್ಷಾಬಂಧಿಗಳನ್ನು ಸನ್ನಡತೆ ಆಧಾರದ ಮೇಲೆ ಅವಧಿಪೂರ್ವ ಬಿಡುಗಡೆ ಮಾಡುವ ಕುರಿತು ವಿಷಯ ಪ್ರಸ್ತಾಪಗೊಂಡಿದೆ.
ರಾಜ್ಯಸರ್ಕಾರದ ಮಹತ್ವಾಕಾಂಕ್ಷೆಯ ಪಂಚಖಾತ್ರಿಗಳಲ್ಲೊಂದಾಗಿರುವ ಅನ್ನಭಾಗ್ಯ ಯೋಜನೆಯಡಿ ನೇರ ನಗದು ನೀಡುತ್ತಿದ್ದ ವ್ಯವಸ್ಥೆಯನ್ನು ಬದಲಾವಣೆ ಮಾಡಿ ಇನ್ನು ಮುಂದೆ ಆಹಾರದ ಕಿಟ್ ವಿತರಿಸುವ ಕುರಿತು ಸಮಾಲೋಚನೆ ನಡೆದಿದೆ.
ಅನ್ನಭಾಗ್ಯ ಯೋಜನೆ ಆರಂಭದಲ್ಲಿ ಅಕ್ಕಿ ಲಭ್ಯವಿಲ್ಲದ ಕಾರಣ ಪ್ರತಿ ಕೆಜಿಗೆ 34 ರೂ. ವಿನಂತೆ 5 ಕೆ.ಜಿ.ಗೆ 170 ರೂ.ಗಳನ್ನು ನೀಡಲಾಗುತ್ತಿತ್ತು. ಲೋಕಸಭೆ ಚುನಾವಣೆ ಬಳಿಕ ರಾಜ್ಯದವರೇ ಆದ ಪ್ರಹ್ಲಾದ್ ಜೋಷಿ ಕೇಂದ್ರ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವರಾಗಿದ್ದು, ರಾಜ್ಯಸರ್ಕಾರ ಬೇಡಿಕೆ ಸಲ್ಲಿಸಿದರೆ ಅನ್ನಭಾಗ್ಯ ಯೋಜನೆಗೆ ಅಗತ್ಯವಾದ ಅಕ್ಕಿ ಪೂರೈಸುವುದಾಗಿ ಹೇಳಿದರು.
ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಎಚ್.ಮುನಿಯಪ್ಪ ದೆಹಲಿಗೆ ತೆರಳಿ ಪ್ರಸ್ತಾವನೆ ಸಲ್ಲಿಸಿ ಬಂದಿದ್ದರು. ಈ ಹಿನ್ನೆಲೆಯಲ್ಲಿ ನಗದು ಬದಲಾಗಿ ಆಹಾರಧಾನ್ಯ ವಿತರಿಸಲು ರಾಜ್ಯಸರ್ಕಾರ ಮುಂದಾಗಿದೆ.
ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ಖಾಸಗಿ ಸಾರ್ವಜನಿಕ ಸಹಭಾಗಿತ್ವದಲ್ಲಿ 27.97 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ಜವಳಿ ಪಾರ್ಕ್ ಸ್ಥಾಪಿಸಲು ಆಡಳಿತಾತಕ ಅನುಮೋದನೆ ನೀಡಲು ಚರ್ಚಿಸಲಾಗಿದೆ.
ಉದಯೋನುಖ ತಂತ್ರಜ್ಞಾನಗಳಲ್ಲಿ ಜಾಗತಿಕ ಸ್ಪರ್ಧಾತಕತೆಗೆ ಅನುಗುಣವಾಗಿ ಸ್ಥಳೀಯ ಉದ್ಯೋಗಿಗಳನ್ನು ಕೌಶಲ್ಯಗೊಳಿಸಲು 100 ಕೋಟಿ ರೂ. ವೆಚ್ಚದಲ್ಲಿ ನಿಪುನ್ ಕರ್ನಾಟಕ ಯೋಜನೆ ರೂಪಿಸಲಾಗಿತ್ತು. 24, 25ನೇ ಸಾಲಿನಲ್ಲಿ 10 ಕೋಟಿ ರೂ.ಗಳನ್ನು ಮಂಜೂರು ಮಾಡಿ ಪ್ರಾಯೋಗಿಕವಾಗಿ ಯೋಜನೆ ಜಾರಿಗೊಳಿಸಲು ಹಾಗೂ 2024-29ರ ನಡವಿನ ಕರ್ನಾಟಕ ಜೈವಿಕ ತಂತ್ರಜ್ಞಾನ ನೀತಿ 4.0 ಅನ್ನು ಸಂಪುಟದಲ್ಲಿ ಪರಾಮರ್ಶಿಸುವ ಸಾಧ್ಯತೆಯಿದೆ.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದಡಿ ಕಾರ್ಯ ನಿರ್ವಹಿಸುತ್ತಿರುವ ಮುರಾರ್ಜಿ ದೇಸಾಯಿ ವಸತಿ ಶಾಲಾ-ಕಾಲೇಜುಗಳಿಗೆ 18.54 ಕೋಟಿ ರೂ. ವೆಚ್ಚದಲ್ಲಿ ಮೂಲಭೂತ ಸೌಕರ್ಯ ಕಲ್ಪಿಸಲು ವಿವಿಧ ಕಾರ್ಮಿಕ ಕಾಯಿದೆಗಳಡಿ ನೋಂದಣಿ ನವೀಕರಣ, ತಿದ್ದುಪಡಿ ಮತ್ತಿತರ ಸೇವೆಗಳಿಗಾಗಿ ಬಳಕೆದಾರರಿಂದ ಸಂಗ್ರಹಿಸಲಾಗುತ್ತಿರುವ ಶುಲ್ಕ, ದಂಡ ಹಾಗೂ ಮತ್ತಿತರ ದರಗಳನ್ನು ಹೆಚ್ಚಿಸುವ ಚಿಂತನೆಯನ್ನು ಸಂಪುಟ ಸಭೆ ನಡೆಸಿದೆ.
ಕರ್ನಾಟಕ ನ್ಯಾಯಾಂಗ ಸೇವಾ ನೇಮಕಾತಿ ತಿದ್ದುಪಡಿಗಳನ್ನು ಪರಾಮರ್ಶಿಸಲಾಗಿದೆ. 70 ಕೋಟಿ ರೂ. ವೆಚ್ಚದಲ್ಲಿ ಬೆಂಗಳೂರಿನ ಕಿದ್ವಾಯಿ ಸಾರಕ ಗಂಥಿ ಸಂಸ್ಥೆಗೆ ರೇಡಿಯೋ ಥೆರಪಿ ಚಿಕಿತ್ಸೆ ಹಾಗೂ ರೋಗನಿವಾರಕ ಉಪಕರಣಗಳನ್ನು ಖರೀದಿಸಲು, 117.11 ಕೋಟಿ ರೂ. ವೆಚ್ಚದಲ್ಲಿ ಮೈಸೂರಿನಲ್ಲಿ 40 ಹಾಸಿಗೆಗಳ ಸಾಮರ್ಥ್ಯದ ನೆಪ್ರೊ-ನ್ಯೂರಾಲಜಿ ಆಸ್ಪತ್ರೆಯನ್ನು 100 ಹಾಸಿಗೆಗಳ ಸಾಮರ್ಥ್ಯತೆ ಉನ್ನತೀಕರಿಸಲು, ಕಲಬುರಗಿಯಲ್ಲಿ 221.51 ಕೋಟಿ ರೂ. ವೆಚ್ಚದಲ್ಲಿ 150 ಹಾಸಿಗೆಗಳ ಸಾಮರ್ಥ್ಯದ ಇಂದಿರಾಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆ ಸ್ಥಾಪಿಸಲು ಹಾಗೂ 16.15 ಕೋಟಿ ರೂ. ವೆಚ್ಚದಲ್ಲಿ ಬೆಂಗಳೂರಿನ ನೆಪ್ರೊ-ನ್ಯೂರೊಲಜಿ ಸಂಸ್ಥೆ ಹೊರರೋಗಿ ವಿಭಾಗಕ್ಕೆ ನೂತನ ಕಟ್ಟಡ ನಿರ್ಮಿಸಲು ಆಡಳಿತಾತಕ ಅನುಮೋದನೆ ನೀಡಲು ಚರ್ಚಿಸಲಾಗಿದೆ.
ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಸೇವೆಗೆ ಸೇರಿದ ಕೇಂದ್ರ ಸೇವಾ ಸಹಾಯಕರು, ಹಿರಿಯ ಉಪನೋಂದಣಾಧಿಕಾರಿ, ಉಪನೋಂದಣಾಧಿಕಾರಿಗಳನ್ನು ಕೌನ್ಸಿಲಿಂಗ್ ಮೂಲಕ ಕಡ್ಡಾಯ ವರ್ಗಾವಣೆಗೆ ನಿಗಧಿಪಡಿಸಿದ್ದ ದಿನಾಂಕವನ್ನು ಆ.10 ರಿಂದ ಸೆ.30 ರವರೆಗೂ ವಿಸ್ತರಿಸುವ ಬಗ್ಗೆ ಸಚಿವರ ಅಭಿಪ್ರಾಯ ಸಂಗ್ರಹಿಸಲಾಗಿದೆ.
ಕಾಫಿ ಮಂಡಳಿಯ ಸಹಭಾಗಿತ್ವದಲ್ಲಿ ಸ್ವಸಹಾಯ ಗುಂಪುಗಳ ಸದಸ್ಯರಾಗಿರುವ 1 ಲಕ್ಷ ಮಹಿಳೆಯರಿಗೆ 2,500 ಕಡೆ 25 ಕೋಟಿ ರೂ. ವೆಚ್ಚದಲ್ಲಿ ಕಾಫಿ ಕಿಯೋಸ್ಗಳನ್ನು ಅಳವಡಿಸಲು ಮತ್ತು ಅವುಗಳ ನಿರ್ವಹಣೆಗೆ ತರಬೇತಿ ನೀಡಲು ಚರ್ಚಿಸಲಾಗಿದೆ.
ಕೇಂದ್ರ ಸರ್ಕಾರ ರೂಪಿಸಿರುವ ಸ್ಕ್ರಾಪಿಂಗ್ ಪಾಲಿಸಿಗೆ ಈ ಮೊದಲು ಕಾಂಗ್ರೆಸ್ ಆಕ್ಷೇಪ ವ್ಯಕ್ತಪಡಿಸಿತ್ತು. ಆದರೆ ಅದೇ ಪಾಲಿಸಿಯನ್ನು ಈಗ ರಾಜ್ಯದಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. 15 ವರ್ಷ ಅವಧಿ ಪೂರೈಸಿರುವ ವಾಹನಗಳನ್ನು ಸಾರ್ವಜನಿಕರು ಸ್ವಯಂಪ್ರೇರಿತವಾಗಿ ನಾಶಗೊಳಿಸಲು ಉದ್ದೇಶಿಸಿರುವ ವಾಹನಗಳ ಮೇಲೆ ಕೊನೆಯ ಒಂದು ವರ್ಷದಲ್ಲಿ ದಾಖಲಾಗಿರುವ ಪ್ರಕರಣಗಳಲ್ಲಿನ ಬಾಕಿ ದಂಡಗಳ ವಸೂಲಿಯಿಂದ ವಿನಾಯಿತಿ ನೀಡುವ ಗಡುವನ್ನು 2026 ರ ಮಾ.31 ರವರೆಗೂ ವಿಸ್ತರಿಸಲು ಕೇಂದ್ರ ಪುರಸ್ಕೃತ ರಾಷ್ಟ್ರೀಯ ನಗರ ವಿದ್ಯುನಾನ ಕಾರ್ಯ ಯೋಜನೆಯನ್ನು ಕರ್ನಾಟಕ ಮುನ್ಸಿಪಾಲ್ ಡಾಟಾ ಸೊಸೈಟಿಯ ಮೂಲಕ ರಾಜ್ಯದ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಅನುಷ್ಠಾನಗೊಳಿಸಲು 37.50 ಕೋಟಿ ರೂ.ಗಳನ್ನು ಒದಗಿಸಲಾಗುತ್ತಿದೆ.
ಮಹಾದಾಯಿ ಪ್ರವಾಹ್ ಪ್ರಾಧಿಕಾರದ ನಿಧಿಗೆ ಮೊದಲ ಹಂತದಲ್ಲಿ ರಾಜ್ಯದ ಪಾಲಿನ 1.67 ಕೋಟಿ ರೂ.ಗಳನ್ನು ಪಾವತಿಸಲು ಕರ್ನಾಟಕ ವಿಧಾನಮಂಡಲ ಅನರ್ಹತಾ ನಿವಾರಣೆ ವಿಧೇಯಕ 2027 ಅನ್ನು ಸಂಪುಟ ಪರಾಮರ್ಶಿಸಿದೆ.