Friday, November 22, 2024
Homeಬೆಂಗಳೂರುಬೆಂಗಳೂರಿಗರೇ ಹುಷಾರ್, ನಿಮ್ಮ ಬೈಕ್ ಇದ್ದಕ್ಕಿಂದಂತೆ ನಾಪತ್ತೆಯಾಗಬಹುದು..!

ಬೆಂಗಳೂರಿಗರೇ ಹುಷಾರ್, ನಿಮ್ಮ ಬೈಕ್ ಇದ್ದಕ್ಕಿಂದಂತೆ ನಾಪತ್ತೆಯಾಗಬಹುದು..!

Bangaloreans beware, your bike may go missing

ರಾತ್ರಿ ಮನೆ ಮುಂದೆ ನಿಲ್ಲಿಸಿದ್ದ ಬೈಕ್‌ ಬೆಳಿಗ್ಗೆ ಕಾಣಿಸುತ್ತಿಲ್ಲ.ಕಾಫಿ ಕುಡಿದು ಬರುವಷ್ಟರಲ್ಲಿ ಹೊಟೇಲ್‌ ಮುಂಭಾಗ ನಿಲ್ಲಿಸಿದ್ದ ಸ್ಕೂಟರ್‌ ನಾಪತ್ತೆ. ಮಾರ್ಕೆಟ್‌ನಲ್ಲಿ ನಿಲ್ಲಿಸಿ ಹೂ ತರುವಷ್ಟರಲ್ಲಿ ನನ್ನ ದ್ವಿಚಕ್ರ ವಾಹನ ಇಲ್ಲ… ಇದು ನಿಮ ಸ್ನೇಹಿತರು, ಬಂಧುಗಳು ವಾಹನಗಳು ಕಳ್ಳತನವಾದಗ ಹೇಳುವ ಮಾತುಗಳು. ಅಷ್ಟರಮಟ್ಟಿಗೆ ಬೆಂಗಳೂರು ನಗರದಲ್ಲಿ ವಾಹನಗಳ ಕಳ್ಳತನಗಳು ಆಗುತ್ತಿವೆ.

ಪೊಲೀಸರ ಅಂಕಿ- ಅಂಶಗಳ ಪ್ರಕಾರ 2021ರಲ್ಲಿ 4126, 2022ರಲ್ಲಿ 5062, 2023ರಲ್ಲಿ 5908 ಹಾಗೂ ಈ ವರ್ಷದ ಜುಲೈವರೆಗೆ 3455 ವಾಹನಗಳು ಬೆಂಗಳೂರು ನಗರದಲ್ಲಿ ಕಳ್ಳತನವಾಗಿವೆ.

ದ್ವಿಚಕ್ರ ವಾಹನಗಳ ಕಳ್ಳತನವೇ ಹೆಚ್ಚು:
ಅಂದರೆ ನಗರದಲ್ಲಿ ವರ್ಷದಿಂದ ವರ್ಷಕ್ಕೆ ವಾಹನ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿವೆ. ಒಟ್ಟಾರೆ ಕಳ್ಳತನವಾಗುತ್ತಿರುವ ವಾಹನಗಳಲ್ಲಿ ದ್ವಿಚಕ್ರ ವಾಹನಗಳೇ ಹೆಚ್ಚು. ಉದಾಹರಣೆಗೆ ಈ ವರ್ಷದ ಜುಲೈವರೆವಿಗೆ ಬೆಂಗಳೂರು ನಗರದಲ್ಲಿ ಒಟ್ಟು 3455 ವಾಹನಗಳು ಕಳ್ಳತನವಾಗಿವೆ. ಇದರಲ್ಲಿ 3263 ದ್ವಿಚಕ್ರ ವಾಹನಗಳು, 116 ತ್ರಿಚಕ್ರ ವಾಹನಗಳು, 64 ನಾಲ್ಕು ಚಕ್ರದ ವಾಹನಗಳು 12 ಇತರೆ ವಾಹನಗಳು ಸೇರಿವೆ.

ಅಂಕಿ -ಅಂಶಗಳ ಪ್ರಕಾರ ಬೆಂಗಳೂರು ನಗರದಲ್ಲಿ ಸರಾಸರಿ ಒಂದು ದಿನಕ್ಕೆ 15 ದ್ವಿಚಕ್ರ ವಾಹನಗಳು ಕಳ್ಳತನವಾಗುತ್ತಿವೆ.ಮನೆಗಳ ಮುಂದೆ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಸಮಯಕ್ಕಾಗಿ ಹೊಂಚು ಹಾಕುವ ಚೋರರು ಸೀದಾ ನಿಮ ವಾಹನಗಳ ಬಳಿ ಬಂದು ನಕಲಿ ಕೀ ಹಾಕಿ ತೆಗೆದು ತಮದೇ ವಾಹನ ಎಂಬಂತೆ ತೆಗೆದುಕೊಂಡು ಹೋಗುತ್ತಿರುತ್ತಾರೆ.

ಇಲ್ಲವೇ ಆ ಕಡೆ, ಈ ಕಡೆ ನೋಡಿ ಯಾರು ಇರದಿದ್ದಾಗ ನಿಮ ದ್ವಿಚಕ್ರ ವಾಹನಗಳ ಹ್ಯಾಂಡ್‌್ಲ ಲಾಕ್‌ಗಳನ್ನು ಮುರಿದು ಕ್ಷಣ ಮಾತ್ರದಲ್ಲಿ ಕಳ್ಳರು ಓಡಿಸಿಕೊಂಡು ಪರಾರಿಯಾಗುತ್ತಾರೆ.ಕೆಲವು ಸಂದರ್ಭದಲ್ಲಿ ಸವಾರರು ಒಂದು ನಿಮಿಷ ಬಂದು ಬಿಡೋಣವೆಂದು ಅಥವಾ ಮರೆತೋ ವಾಹನದಲ್ಲಿ ಕೀ ಬಿಟ್ಟು ಹೋಗುತ್ತಾರೆ. ಅಂತಹ ಸಂದರ್ಭದಲ್ಲಿ ಚೋರ ಸುಲಭವಾಗಿ ನಿಮ ವಾಹನವನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾನೆ.

ಹೀಗೆ ವಿವಿಧ ರೀತಿಯಲ್ಲಿ ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡುವ ಚೋರರು ಅವುಗಳನ್ನು ಕೆಲವು ಸಂದರ್ಭದಲ್ಲಿ ಪಾಳು ಮನೆಗಳಲ್ಲಿ ಅಥವಾ ತಮ ಮನೆ ಸಮೀಪದ ಖಾಲಿ ಜಾಗದಲ್ಲಿ ಅಥವಾ ತಮ ಊರಿನ ಹೊರಗಿರುವ ತೋಪುಗಳಲ್ಲಿ ನಿಲ್ಲಿಸಿಕೊಂಡು ಒಂದಾಗಿ ಮಾರಾಟ ಮಾಡುತ್ತಾರೆ.

ನಕಲಿ ದಾಖಲೆ ಸೃಷ್ಟಿಸಿ ಮಾರಾಟ:
ಮತ್ತೇ ಕೆಲವರು ತಾವು ಕದ್ದ ವಾಹನಗಳಿಗೆ ನಕಲಿ ದಾಖಲೆಗಳನ್ನು ಸೃಷ್ಟಿಸಿ, ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಾರೆ. ಇಲ್ಲವೇ ವಾಹನದ ಒಂದೊಂದೇ ಭಾಗಗಳನ್ನು ಕಳಚಿ ಹಣಕ್ಕಾಗಿ ಕೊಡುತ್ತಾರೆ.ಬೆಂಗಳೂರು ನಗರದಲ್ಲಿ ಕದ್ದ ದ್ವಿಚಕ್ರ ವಾಹನಗಳನ್ನು ಕೆಲವು ಕಳ್ಳರು ಹಳ್ಳಿಗಳ ಕಡೆಗೆ ತೆಗೆದುಕೊಂಡು ಹೋಗಿ ಸಂಕಷ್ಟದಲ್ಲಿದ್ದೇನೆ ಹಣದ ಅವಶ್ಯಕತೆ ತುಂಬಾ ಇದೆ ಎಂದು ನಾಟಕವಾಡಿ ಕಡಿಮೆ ಬೆಲೆಗೆ ಕೊಟ್ಟು ಅವರಿಗೆ ಟೋಪಿ ಹಾಕಿ ಬಂದ ಹಣದಲ್ಲಿ ವಿಲಾಸಿ ಜೀವನ, ಮೋಜು-ಮಸ್ತಿ ಮಾಡುತ್ತಾರೆ.

ನೆರೆರಾಜ್ಯ ಕಳ್ಳರ ಹಾವಳಿ:
ಬೆಂಗಳೂರು ನಗರದಲ್ಲಿ ಸ್ಥಳೀಯ ವಾಹನ ಕಳ್ಳರಲ್ಲದೆ ನೆರೆಯ ರಾಜ್ಯಗಳ ಕಳ್ಳರ ಹಾವಳಿ ಹೆಚ್ಚಾಗಿದೆ. ಸಂಜೆಯಾಗುತ್ತಿದ್ದಂತೆ ಬೆಂಗಳೂರಿಗೆ ಬರುವ ನೆರೆಯ ರಾಜ್ಯದ ವಾಹನ ಕಳ್ಳರು ನಗರವನ್ನು ಸುತ್ತಾಡಿ ಒಂದೇ ರಾತ್ರಿಗೆ 5 ರಿಂದ 6 ವಾಹನಗಳನ್ನು ಕಳ್ಳತನ ಮಾಡಿಕೊಂಡು ಹೋಗಿ ಅವರುಗಳ ರಾಜ್ಯದಲ್ಲಿ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಾರೆ.

ಕೆಲವು ವೇಳೆ ಗುಂಪಾಗಿ ಬರುವ ಕುಖ್ಯಾತ ಕಳ್ಳರು ನಗರದ ಲಾಡ್‌್ಜಗಳಲ್ಲಿ ಉಳಿದುಕೊಂಡು ಹಗಲು ವೇಳೆ ಕೆಲವು ಪ್ರದೇಶಗಳಲ್ಲಿ ಸುತ್ತಾಡಿ ನೋಡಿಕೊಂಡು ರಾತ್ರಿ ಕಳ್ಳತನ ಮಾಡಿಕೊಂಡು ಪರಾರಿಯಾಗುತ್ತಾರೆ.
ವಾಹನ ಚೋರರ ಬಗ್ಗೆ ನಿಗಾವಹಿಸುತ್ತಿರುವ ಬೆಂಗಳೂರು ನಗರ ಪೊಲೀಸರು ಆಗೊಮೆ, ಈಗೊಮೆ ಕೆಲವೇ ಕೆಲ ಮಂದಿ ಕಳ್ಳರನ್ನು ಹಿಡಿದು ವಾಹನಗಳನ್ನು ವಶಪಡಿಸಿಕೊಳ್ಳುತ್ತಿದ್ದಾರೆ. ಕಳ್ಳತನವಾಗುತ್ತಿರುವ ವಾಹನಗಳ ಸಂಖ್ಯೆಗೆ ಹೋಲಿಸಿದರೆ ಇದು ಬಹಳ ಕಡಿಮೆ.

ವಾಹನಗಳ ಬಗ್ಗೆ ಜಾಗೃತಿ ವಹಿಸಿ
ಎಂತಹ ತುರ್ತು ಸಂದರ್ಭವೇ ಇದ್ದರೂ ಸಹ ನಿಮ ವಾಹನಗಳಿಗೆ ಲಾಕ್‌ ಮಾಡುವುದನ್ನು ಮರೆಯಬೇಡಿ, ಸಾರ್ವಜನಿಕ ಸ್ಥಳದಲ್ಲಿ ಎಲ್ಲರಿಗೂ ಕಾಣಿಸುವಂತೆ ನಿಮ ವಾಹನಗಳನ್ನು ನಿಲ್ಲಿಸಿ, ಸಾಧ್ಯವಾದಷ್ಟು ಮನೆಯ ಕಾಂಪೌಂಡ್‌ ಒಳಗೆ ನಿಲುಗಡೆ ಮಾಡಿ. ಒಂದು ವೇಳೆ ಮನೆ ಮುಂದೆ ನಿಲ್ಲಿಸಿದರೆ ಸರಿಯಾಗಿ ಲಾಕ್‌ ಮಾಡಿ ಸಿಸಿಟಿವಿ ಕ್ಯಾಮೆರಾಗಳನ್ನು ಹಾಕಿಸಿಕೊಳ್ಳಿ. ಮಾರ್ಕೆಟ್‌, ಕಚೇರಿಗಳಿಗೆ ಹೋಗುವಾಗ ಪೇಯಿಂಗ್‌ ಪಾರ್ಕ್‌ನಲ್ಲೇ ನಿಲ್ಲಿಸಿ, ನಿಮ ವಾಹನಗಳನ್ನು ಜೋಪಾನವಾಗಿ ನೋಡಿಕೊಳ್ಳು ವುದು ನಿಮ ಜವಾಬ್ದಾರಿ.

ಕೆಲವು ಸಂದರ್ಭಗಳಲ್ಲಿ ವಾಹನ ಸವಾರರು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡರೇ ಸ್ವಲ್ಪಮಟ್ಟಿಗೆ ಕಳ್ಳತನವನ್ನು ತಡೆಗಟ್ಟಬಹುದು ಎಂದು ಹೇಳುತ್ತಾರೆ ಬೆಂಗಳೂರು ನಗರದ ಹಿರಿಯ ಪೊಲೀಸ್‌‍ ಅಧಿಕಾರಿಗಳು.

ಸೆಕೆಂಡ್‌ ಹ್ಯಾಂಡ್‌ ವಾಹನಗಳ ಖರೀದಿಸುವಾಗ ಇರಲಿ ಎಚ್ಚರ!
ದ್ವಿಚಕ್ರ ವಾಹನ ಪ್ರಿಯರೇ ನೀವು ಸೆಕೆಂಡ್‌ ಹ್ಯಾಂಡ್‌ ವಾಹನಗಳನ್ನು ಕೊಳ್ಳುವಾಗ ಬಹಳ ಎಚ್ಚರವಹಿಸಿ. ಕೆಲವು ಸಂದರ್ಭದಲ್ಲಿ ಕಳವು ಮಾಡಿಕೊಂಡು ತಂದಿರುವ ವಾಹನಗಳನ್ನು ನಿಮಗೆ ಕಡಿಮೆ ಬೆಲೆಗೆ ಕೊಡುತ್ತಾರೆ. ತುಂಬಾ ಕಡಿಮೆ ಹಣಕ್ಕೆ ಬೈಕ್‌ ಅಥವಾ ಸ್ಕೂಟರ್‌ ಸಿಕ್ಕಿತು ಎಂದು ಖುಷಿಪಡಬೇಡಿ. ಒಂದು ವೇಳೆ ಕಳ್ಳ ಪೊಲೀಸರಿಗೆ ಸಿಕ್ಕಿಬಿದ್ದರೆ ಮಾರನೇಯ ದಿನವೇ ಪೊಲೀಸರು ನಿಮ ಮನೆ ಬಾಗಿಲು ತಟ್ಟುತ್ತಾರೆ ಹುಷಾರ್‌!ಕದ್ದ ಮಾಲುಗಳನ್ನು ಸ್ವೀಕರಿಸುವುದು ಸಹ ಅಪರಾಧ. ರಾಜ್ಯ ಪೊಲೀಸರು ಕೆಲವು ಪ್ರಕರಣಗಳಲ್ಲಿ ಕದ್ದ ಮಾಲುಗಳನ್ನು ಸ್ವೀಕರಿಸಿರುವ ವ್ಯಕ್ತಿಗಳ ಮೇಲೆ ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ.

ಯಾವುದೇ ಸೆಕೆಂಡ್ ಹ್ಯಾಂಡ್‌ ವಾಹನಗಳನ್ನು ಕೊಳ್ಳುವಾಗ ಒಂದು ಸಲ ದಾಖಲೆಗಳನ್ನು ತೆಗೆದುಕೊಂಡು ಆರ್‌ಟಿಓ ಕಚೇರಿಗೆ ಹೋಗಿ ಪರಿಶೀಲಿಸುವುದು ಒಳ್ಳೆಯದು. ಇಲ್ಲದಿದ್ದರೆ ಒಂದು ದಿನ ಕೊಟ್ಟ ಹಣವೂ ಇಲ್ಲ, ಇತ್ತ ದ್ವಿಚಕ್ರ ವಾಹನವೂ ಇಲ್ಲ. ಪೊಲೀಸರ ಕೈಗೆ ಸಿಲುಕಿ ಸಂಕಷ್ಟ ಅನುಭವಿಸುತ್ತೀರಿ ಜೋಕೆ.

ಎತ್ತಿನಹೊಳೆ ನೀರು ಹರಿಸಿ ಟೀಕಾಕಾರರಿಗೆ ಉತ್ತರ..
ಧಾರವಾಡ,ಸೆ.5- ಎತ್ತಿನಹೊಳೆಯಿಂದ ನೀರು ಹರಿದರೆ ಮೀಸೆ ಬೋಳಿಸಿಕೊಳ್ಳುತ್ತೇನೆ ಎಂದು ಕೆಲವರು ಹೇಳಿದ್ದರು. ಅದನ್ನು ಸವಾಲಾಗಿ ಸ್ವೀಕರಿಸಿ ಯೋಜನೆಯನ್ನು ಒಂದು ಹಂತಕ್ಕೆ ಪೂರ್ಣಗೊಳಿಸಲಾಗಿದೆ ಎಂದು ಜಲಸಂಪನೂಲ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯೋಜನೆಯನ್ನು ಯಶಸ್ವಿಗೊಳಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇವೆ. ಯೋಜನೆ ರೂಪಿಸಿದವರು, ಕಾರ್ಯಗತಗೊಳಿಸಿದವರು, ಗುತ್ತಿಗೆದಾರರು ಎಲ್ಲರೂ ಶ್ರಮಿಸಿದ್ದಾರೆ ಎಂದರು.

ಯೋಜನೆ ಯಶಸ್ವಿಯಾಗುವುದಿಲ್ಲ ಎಂದು ಹಲವಾರು ಮಂದಿ ಕುಹಕವಾಡಿದ್ದರು. ತಾವು ಸಚಿವರಾದ ಬಳಿಕ ಎತ್ತಿನಹೊಳೆಯನ್ನು ಆದ್ಯತೆ ಮೇರೆಗೆ ಪೂರ್ಣಗೊಳಿಸಲು ಕೆಲವು ನಿರ್ಧಾರಗಳನ್ನು ತೆಗೆದುಕೊಂಡಿದ್ದೆ. ಅದು ಪರಿಣಾಮ ಬೀರಿದೆ. ಅತ್ತ ವಾಣಿ ವಿಲಾಸ ಸಾಗರದವರೆಗೂ, ಇತ್ತ ತುಮಕೂರಿನವರೆಗೂ ನೀರು ಹರಿಯುತ್ತಿದೆ. ಸವಾಲು ಹಾಕಿದವರ ಬಗ್ಗೆ ನಾನು ಮಾತನಾಡುವುದಿಲ್ಲ ಎಂದು ಹೇಳಿದರು.

ಹಬ್ಬಗಳು ಪ್ರತಿ ವರ್ಷವೂ ಬರುತ್ತವೆ. ಗೌರಿ ಹಬ್ಬದ ದಿನ ಗಂಗೆ ಪೂಜೆ ಮಾಡಲು ಅವಕಾಶ ಯಾವಾಗಲೂ ಸಿಗುವುದಿಲ್ಲ. ಈಗ ಸಿಕ್ಕಿರುವ ಅವಕಾಶವನ್ನು ಬಳಸಿಕೊಂಡು ಎಲ್ಲರೂ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.ನಾಳೆ ಯೋಜನೆ ಉದ್ಘಾಟನೆಯಾಗಲಿದ್ದು, ಅದರ ಪೂರ್ವ ತಯಾರಿಗೆ ನಾವು ತೆರಳುತ್ತಿದ್ದು, ಸಚಿವ ಸಂಪುಟ ಸಭೆಯಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದರು.

RELATED ARTICLES

Latest News