Saturday, February 1, 2025
Homeರಾಜಕೀಯ | Politics"ಮುಂದಿನ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರಿಗೆ ಜೈ"

“ಮುಂದಿನ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರಿಗೆ ಜೈ”

G Parameshwar

ಬೆಂಗಳೂರು, ಸೆ.11– ರಾಜಕೀಯ ಸೂಕ್ಷ್ಮ ಸಂದರ್ಭದಲ್ಲೇ, ಮುಂದಿನ ಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ್ ಅವರಿಗೆ ಜೈ ಎಂಬ ಘೋಷಣೆಗಳು ಮೊಳಗಿವೆ. ಗೃಹ ಸಚಿವ ಡಾ. ಜಿ. ಪರಮೇಶ್ವರ್ ಮನೆ ಬಳಿ ಆಗಮಿಸಿದ ಕಾರ್ಯಕರ್ತರು ಪರಮೇಶ್ವರ್ ಹಾಗೂ ಅವರ ಪತ್ನಿ ಕನ್ನಿಕಾ ಪರಮೇಶ್ವರ್ ಚಿತ್ರವನ್ನು ಪೆನ್ಸಿಲ್ ಸ್ಕೆಚ್ ಮಾಡಿದ ಫೋಟೋವನ್ನು ಉಡುಗೊರೆ ನೀಡಿದರು.

ಈ ವೇಳೆ ಮುಂದಿನ ಮುಖ್ಯಮಂತ್ರಿ ಪರಮೇಶ್ವರ್ ಸಾಹೇಬರಿಗೆ ಜಯವಾಗಲಿ ಎಂದು ಘೋಷಣೆ ಕೂಗಿದರು. ಇದರಿಂದ ಸಿಟ್ಟಾದ ಪರಮೇಶ್ವರ್ ಕೈ ಎತ್ತಿ ಕಾರ್ಯಕರ್ತರನ್ನು ಹೊಡೆಯುವಂತೆ ನಟಿಸಿದರು.

ಇದಕ್ಕೆ ಕಾರ್ಯಕರ್ತರು ನಗುತ್ತಲೇ ಪ್ರತಿಕ್ರಿಯಿಸಿದರು. ಈಗಲೇ ಸಾಕಷ್ಟು ವಿವಾದಗಳಿವೆ. ಇಂತದರಲ್ಲಿ ನೀವು ಬೇರೆ ಎಂದು ಸಿಡಿಮಿಡಿಗೊಂಡು ಪರಮೇಶ್ವರ್ ಕಾರು ಏರಿ ಹೊರಟರು.

RELATED ARTICLES

Latest News