ನವದೆಹಲಿ,ಸೆ.14- ಮಾಜಿ ಹಣಕಾಸು ಸಚಿವ ಪಿ.ಚಿದರಂಬರಂ ಅವರು ಕೋಲ್ಕತ್ತಾ ವಿಮಾನ ನಿಲ್ದಾಣದ ರೆಸ್ಟೋರೆಂಟ್‌ನಲ್ಲಿ ಒಂದು ಕಪ್ ಟೀಗೆ 340 ರೂ. ದರ ಇರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ತಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಅವರು, ಈ ಹಿಂದೆ ಚೆನ್ನೈನಲ್ಲಿ ಇಂತಹುದೇ ಅನುಭವವಾಗಿತ್ತು. ಈ ಬಗ್ಗೆ ತಮ ಖಾತೆಯಲ್ಲಿ ಪ್ರಸ್ತಾಪ ಮಾಡಿದ್ದೆ. ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ಕೂಡಲೇ ಕ್ರಮ ಕೈಗೊಂಡಿತ್ತು ಸರಿಸಿಕೊಂಡಿದ್ದಾರೆ.
ಈಗ ನೋಡಿದರೆ ಪಶ್ಚಿಮ ಬಂಗಾಳದಲ್ಲಿ ಒಂದು ಟೀ ಬೆಲೆ ಬರೋಬ್ಬರಿ 340 ರೂ. ಇದೆ. ಇದನ್ನು ನೋಡಿದರೆ ಕೋಲ್ಕತ್ತಾ ಏರ್‌ಪೋರ್ಟ್‌ನಲ್ಲಿ ಒಂದು ಕಪ್ ಚಹಾಕ್ಕೆ 340 ರೂ. ತಮಿಳುನಾಡಿಗಿಂತ ಬಂಗಾಳದಲ್ಲಿ ಹಣದುಬ್ಬರ ಹೆಚ್ಚು ಎಂದಿದ್ದಾರೆ.
ಹೈದರಾಬಾದ್, ಕೋಲ್ಕತ್ತಾ, ವಿಮಾನ ನಿಲ್ದಾಣದ ರೆಸ್ಟೋರೆಂಟ್‌ನಲ್ಲಿ ಚಹಾದ ಬೆಲೆ 340 ರೂ. ಇದೆ.ಕೋಲ್ಕತ್ತಾ ವಿಮಾನ ನಿಲ್ದಾನದಲ್ಲಿ ಬಿಸಿನೀರು ಮತ್ತು ಟೀ ಬ್ಯಾಗ್‌ನಿಂದ ಮಾಡಿದ ಚಹಾದ ಬೆಲೆ 340 ರೂ. ಎಂಬ ವಿಚಾರವನ್ನು ನಾನು ತಿಳಿಸಲು ಬಯಸುತ್ತೇನೆ. ಚೆನ್ನೈ ವಿಮಾನ ನಿಲ್ದಾಣದಲ್ಲಿ ಮಾರಾಟ ಟೀ ಬೆಲೆಯಲ್ಲಿ ಭಾರೀ ಹೆಚ್ಚಳ ಇದೆ ಎಂದು ಹೇಳಿದ್ದಾರೆ.