ಹೈದರಾಬಾದ್,ಜ.12-ವೃದ್ಧರೊಬ್ಬರು ಸಾವಿಗೆ ಮುನ್ನವೇ ಸ್ವಂತ ಸಮಾಧಿ ನಿರ್ಮಿಸಿಕೊಂಡು ಈಗ ಪ್ರಣಬಿಟ್ಟಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ.ಲಕ್ಷಿಪುರಂ ಗ್ರಾಮದ ನಿವಾಸಿ ನಕ್ಕ ಇಂದ್ರಯ್ಯಂಬುವವರು ಈ ಘಟನೆಯಿಂದ ಗಮನ ಸೆಳೆದಿದ್ದಾರೆ.
ತಮ್ಮ ಮಕ್ಕಳು ದುಃಖದ ಸಮಯದಲ್ಲಿ ಯಾವುದೇ ಹೊರೆಯನ್ನು ಎದುರಿಸಬಾರದು ಎಂದು ಕಳೆದ 1 ವರ್ಷಗಳ ಮೊದಲೇ ತಮದೇ ಆದ ಸಮಾದಿ ನಿರ್ಮಿಸುವ ಕಾರ್ಯ ಆರಂಭಿಸಿ ಮುಗಿಸಿದ್ದರುನಿನ್ನು ಅಲ್ಲೇ ಪ್ರಾಣ ಬಿಟ್ಟಿದ್ದಾರೆ.
ತಮ ಪತ್ನಿಯ ಸಮಾಧಿಯ ಪಕ್ಕದಲ್ಲಿ ತಮದೇ ಆದ ಸಮಾಧಿಯನ್ನು ನಿರ್ಮಿಸಿಕೊಂಡ ಇಂದ್ರಯ್ಯ, ಜೀವನ ಮತ್ತು ಸಾವಿನ ಶಾಶ್ವತ ಸತ್ಯಗಳ ಕುರಿತು ಸಂದೇಶವನ್ನು ಕೆತ್ತಿದ ಫಲಕವನ್ನು ಸ್ಥಳದಲ್ಲಿ ಇರಿಸಿದ್ದಾರೆ.
ಬದುಕಿದ್ದಾಗ ಪ್ರತಿ ದಿನ ಸ್ಥಳಕ್ಕೆ ಭೇಟಿ ನೀಡುವುದು, ಸುತ್ತಮುತ್ತಲಿನ ಪ್ರದೇಶಗಳನ್ನು ಸ್ವಚ್ಛಗೊಳಿಸುವುದು, ಸಸ್ಯಗಳಿಗೆ ನೀರು ಹಾಕುವುದು ಮತ್ತು ಧ್ಯಾನ ಮಾಡುವುದು ದಿನಚರಿಯಾಗಿತ್ತು.ಇಂದ್ರಯ್ಯ ಗ್ರಾಮದಲ್ಲಿ ಚರ್ಚ್ ಅನ್ನು ಸಹ ನಿರ್ಮಿಸಿದರು.ತಮ್ಮ ಸಂಪತ್ತನ್ನು ತಮ ನಾಲ್ಕು ಮಕ್ಕಳಿಗೆ ಹಂಚಿದರು. ಅವರಿಗಾಗಿ ಮನೆಗಳನ್ನು ನಿರ್ಮಿಸಿದರು.
ಭಾನುವಾರ ಅವರ ನಿಧನದ ನಂತರ, ಇಂದ್ರಯ್ಯ ಅವರ ಅಂತಿಮ ಆಸೆ ಈಡೇರಿತು, ಅವರು ತಮ ಕೈಗಳಿಂದ ಸಿದ್ಧಪಡಿಸಿದ ಸಮಾಧಿಯಲ್ಲಿ ಅವರನ್ನು ಸಮಾಧಿ ಮಾಡಲಾಯಿತು.
ನಾನು ನಾಲ್ಕೈದು ಮನೆಗಳು, ಒಂದು ಶಾಲೆ ಮತ್ತು ಒಂದು ಚರ್ಚ್ ಅನ್ನು ನಿರ್ಮಿಸಿದ್ದೇನೆ ಮತ್ತು ಈಗ ನನ್ನ ಸ್ವಂತ ಸಮಾಧಿಯನ್ನು ನಿರ್ಮಿಸಿದ್ದೇನೆ. ನಾನು ತುಂಬಾ ಸಂತೋಷವಾಗಿದ್ದೇನೆ ಸಮಾಧಿಯನ್ನು ನಿರ್ಮಿಸುವ ಪ್ರಸ್ತಾಪವೇ ಅನೇಕರಿಗೆ ದುಃಖವನ್ನುಂಟುಮಾಡುತ್ತದೆ ಆದರೆ ನಾನು ಸಂತೋಷವಾಗಿದ್ದೇನೆ ಎಂದು ಇಂದ್ರಯ್ಯಹೇಳುತ್ತಿದ್ದರು ಎಂದು ಗ್ರಾಮಸ್ಥರು ಹೇಳಿದ್ದಾರೆ.
