Friday, September 20, 2024
Homeರಾಜ್ಯಕಾವೇರಿ ತೀರ್ಥೋದ್ಭವಕ್ಕೆ ಮುಹೂರ್ತ ನಿಗಧಿ

ಕಾವೇರಿ ತೀರ್ಥೋದ್ಭವಕ್ಕೆ ಮುಹೂರ್ತ ನಿಗಧಿ

Cauvery Theerthodbhava

ಕೊಡಗು,ಸೆ.15- ಕನ್ನಡ ನಾಡಿನ ಜೀವನದಿ ಕಾವೇರಿಯ ತೀರ್ಥೋದ್ಭವಕ್ಕೆ ಮುಹೂರ್ತ ನಿಗಧಿಯಾಗಿದೆ.ಕಾವೇರಿ ನದಿಯ ಉಗಮಸ್ಥಾನ ತಲಕಾವೇರಿಯಲ್ಲಿ ಈ ಬಾರಿಯ ಪವಿತ್ರ ತೀರ್ಥೋದ್ಭವ ಅ.17 ಮುಂಜಾನೆ 7.40ರ ಶುಭಲಗ್ನದಲ್ಲಿ ನೆರವೇರಲಿದೆ.

ತೀರ್ಥೋದ್ಭವ ಹಿನ್ನೆಲೆಯಲ್ಲಿ ಸೆ.26 ರಿಂದಲೇ ವಿವಿಧ ಧಾರ್ಮಿಕ ವಿಧಿವಿಧಾನಗಳು ಆರಂಭವಾಗಲಿವೆ. ಅಂದು ಬೆಳಿಗ್ಗೆ 8.45 ಕ್ಕೆ ಪತ್ತಾಯಕ್ಕೆ ಅಕ್ಕಿ ಹಾಕುವ ಕಾರ್ಯಕ್ರಮ ನಡೆಯಲಿದ್ದು, ಅ.4 ರ ಬೆಳಿಗ್ಗೆ 10.20ಕ್ಕೆ ಆಜ್ಞಾ ಮುಹೂರ್ತ, 14ರ ಬೆಳಿಗ್ಗೆ 11.35ಕ್ಕೆ ಅಕ್ಷಯಪಾತ್ರೆ ಇರಿಸುವುದು, ಅದೇ ದಿನ ಸಂಜೆ 4.15ಕ್ಕೆ ಕಾಣಿಕೆಡಬ್ಬ ಇಡುವ ಕಾರ್ಯಕ್ರಮ ನಡೆಯಲಿದೆ ಎಂದು ಧರ್ಮದಾಯದತ್ತಿ ಇಲಾಖೆ ತಿಳಿಸಿದೆ.

ತೀರ್ಥಕುಂಡಿಕೆಯಲ್ಲಿ ಅ.17 ರಂದು ಕಾವೇರಿ ಮಾತೆ ತೀರ್ಥರೂಪದಲ್ಲಿ ಉಗಮವಾಗಲಿದ್ದಾಳೆ. ಪ್ರತಿ ವರ್ಷ ಈ ಅದ್ಭುತ ಕ್ಷಣಗಳನ್ನು ಕಣ್ತುಂಬಿಕೊಳ್ಳಲು ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಲಿದ್ದಾರೆ.

RELATED ARTICLES

Latest News