Monday, November 25, 2024
Homeರಾಷ್ಟ್ರೀಯ | National2025ರ ಜೂನ್‌ 30ರೊಳಗೆ ಪೂರ್ಣವಾಗಲಿದೆ ರಾಮಮಂದಿರ ಕಾಮಗಾರಿ

2025ರ ಜೂನ್‌ 30ರೊಳಗೆ ಪೂರ್ಣವಾಗಲಿದೆ ರಾಮಮಂದಿರ ಕಾಮಗಾರಿ

Ayodhya Ram Temple Complex Construction To Be Concluded By June 2025

ಅಯೋಧ್ಯೆ,ಸೆ.15- ರಾಮ ಮಂದಿರದ ಸಂಪೂರ್ಣ ಕಾಮಗಾರಿ 2025ರ ಜೂನ್‌ 30ರೊಳಗೆ ಪೂರ್ಣಗೊಳ್ಳಲಿದೆ ಎಂದು ರಾಮ ಮಂದಿರ ನಿರ್ಮಾಣ ಸಮಿತಿ ಅಧ್ಯಕ್ಷ ನ್ರಿಪೆಂದ್ರ ಮಿಶ್ರಾ ತಿಳಿಸಿದ್ದಾರೆ.

ರಾಮ ಮಂದಿರ ನಿರ್ಮಾಣ ಸಮಿತಿಯಿಂದ ನಡೆದ ಸಭೆಯಲ್ಲಿ ಈ ವಿಷಯ ತಿಳಿಸಿದ ಅವರು, ದೇಗುಲದ ಶಿಖರ ನಿರ್ಮಾಣಕ್ಕೆ 120 ದಿನಗಳ ತೆಗೆದುಕೊಳ್ಳಬಹುದು ಎಂದು ಅಂದಾಜಿಸಲಾಗಿದೆ. ಡಿಸೆಂಬರ್‌ ಒಳಗೆ ದೇಗುಲದ ಶಿಖರ ನಿರ್ಮಾಣ ಮಾಡುವ ಗುರಿ ಹೊಂದಲಾಗಿದೆಯಾದರೂ ಇದು ಪೂರ್ಣಗೊಳ್ಳುವುದಿಲ್ಲ. 2025ರ ಫೆಬ್ರವರಿಯೊಳಗೆ ದೇಗುಲದ ಸಂಪೂರ್ಣವಾಗಿ ನಿರ್ಮಾಣಗೊಳ್ಳಲಿದೆ. ದೇಗುಲದೊಳಗೆ ನಿರ್ಮಾಣವಾಗುವ ಸಪ್ತ ಮಂದಿರದ ಮೂರ್ತಿಗಳನ್ನು ಜೈಪುರದಲ್ಲಿ ತಯಾರಿಸಲಾಗುತ್ತಿದೆ ಎಂದರು.

ಋಷಿ-ಸಂತರ ಮೂರ್ತಿಗಳ ನಿರ್ಮಾಣ:
ಈ ಸಪ್ತ ಮಂದಿರದೊಳಗೆ ಋಷಿ ಮತ್ತು ಸಂತರ ಮೂರ್ತಿಗಳನ್ನು ನಿರ್ಮಾಣ ಮಾಡಲಾಗುವುದು. ಈ ಕೆಲಸವೂ 2024ರ ಡಿಸೆಂಬರ್‌ನೊಳಗೆ ಪೂರ್ಣ ಮಾಡಲಾಗುವುದು. ಉಳಿದ ರಾಮ ಮಂದಿರದ ಕೆಲಸಗಳು 2025, ಜೂನ್‌ 20ರೊಳಗೆ ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದ್ದಾರೆ.

ಶ್ರೀ ರಾಮ್‌ ಜನಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ ಸದಸ್ಯ ಅನಿಲ್‌ ಮಿಶ್ರಾ ಮಾತನಾಡಿ, ದೇಗುಲದ ಮೇಲಿನ ಮಹಡಿ ನಿರ್ಮಾಣ ಮಾಡಲು ಬೇಕಾದ ಶಿಲೆ, ಕಲ್ಲು ಸೇರಿದಂತೆ ಅಗತ್ಯ ವಸ್ತುಗಳ ಪೂರೈಕೆ ಮತ್ತು ಕಾರ್ಯ ನಿರ್ವಹಣೆಗೆ ಅಗತ್ಯವಾದ ಕಾರ್ಮಿಕರ ವ್ಯವಸ್ಥೆಗಾಗಿ ಟ್ರಸ್ಟ್‌ ಕಾರ್ಯ ನಿರ್ವಹಿಸುತ್ತಿದೆ ಎಂದು ಹೇಳಿದರು.

ಬಿಳಿ ಮಾರ್ಬಲ್‌ನಲ್ಲಿ ಗರ್ಭಗುಡಿ:
ಮೊದಲ ಮಹಡಿಯು ಇನ್ನೇನು ಮುಗಿಯುವ ಹಂತ ತಲುಪಿದ್ದು, ನೆಲ ಸಮತಟ್ಟು (ಫ್ರೋರಿಂಗ್‌) ಕಾರ್ಯ ನಡೆಯುತ್ತಿದೆ. ಎರಡನೇ ಮಹಡಿ ಅಭಿವೃದ್ಧಿಯು ಕೂಡ ವೇಗವಾಗಿ ಸಾಗುತ್ತಿದ್ದು, ಯಾವುದೆ ಕಲೆ ಇರದ ಬಿಳಿ ಬಣ್ಣ ಮಾರ್ಬಲ್‌ ಕಲ್ಲಿನಲ್ಲಿ ಗರ್ಭಗುಡಿ ನಿರ್ಮಾಣ ಮಾಡಲಾಗುವುದು. 1,600 ಕಾರ್ಮಿಕರು ರಾಮ ಮಂದಿರ ನಿರ್ಮಾಣ ಕಾರ್ಯದಲ್ಲಿ ಅವಿರತವಾಗಿ ಬದ್ದರಾಗಿದ್ದಾರೆ. ನಿಗದಿತ ಸಮಯದೊಳಗೆ ದೇಗುಲ ನಿರ್ಮಾಣ ಮಾಡುವ ಗುರಿ ಹೊಂದಲಾಗಿದೆ ಟ್ರಸ್ಟ್‌ನ ಸದಸ್ಯರು ತಿಳಿಸಿದ್ದಾರೆ.

ಜಿಎಂಆರ್‌ ಗ್ರೂಪ್‌ನಿಂದ ಕಟ್ಟಡದ ಅಲಂಕಾರ:
ಜೊತೆಗೆ ಸಪ್ತ ಮಂಟಪದ ದೇಗುಲದ ಕಾರ್ಯ ಕೂಡ ತ್ವರಿತಗತಿಯಲ್ಲಿ ನಡೆಯುತ್ತಿದ್ದು, ಜಿಎಂಆರ್‌ ಗ್ರೂಪ್‌, ರಾಮ ಜನಭೂಮಿ ಕಟ್ಟಡದ ಅಲಂಕಾರವನ್ನು ನಿರ್ವಹಿಸಲಿದೆ. ವರದಿ ಪ್ರಕಾರ ದೇಗುಲದಲ್ಲಿ ಹಸಿರು ಗಿಡಗಳ ಹೊದಿಕೆಯನ್ನು ನಿರ್ವಹಿಸುವ ಚಿಂತನೆ ಇದೆ ಎಂದು ನೃಪೇಂದ್ರ ಮಿಶ್ರಾ ತಿಳಿಸಿದರು.

ವಿಭಿನ್ನ ಲೈಟಿಂಗ್‌ ಪ್ರಯೋಗ:
ದೇಗುಲದಲ್ಲಿ ಬರುವ ಭಕ್ತರಲ್ಲಿ ಭಕ್ತಿಭಾವ ಹೆಚ್ಚಿಸುವ ರೀತಿಯಲ್ಲಿ ಲೈಂಟಿಂಗ್‌ ವ್ಯವಸ್ಥೆ ಮಾಡಲಾಗುತ್ತಿದ್ದು, ಈ ಸಂಬಂಧ ಅನೇಕ ಬಾರಿ ಪ್ರಯೋಗಗಳನ್ನು ನಡೆಸಲಾಗಿದೆ. ಶೀಘ್ರದಲ್ಲೇ ಈ ಸಂಬಂಧ ಟೆಂಡರ್‌ ಬಿಡುಗಡೆ ಮಾಡಲಾಗುವುದು. ಭಾರತ ಮತ್ತು ವಿದೇಶದ ದೊಡ್ಡ ಕಂಪನಿಗಳಿಗೆ ಈ ಪ್ರದರ್ಶನಕ್ಕೆ ಸಮಯ ನೀಡಲಾಗುವುದು. ಈ ಯೋಜನೆ ಅಡಿ ದೇಗುಲದ ಒಳಗೆ 360 ಡಿಗ್ರಿ ಕೋನದಲ್ಲಿ ಲೈಟ್‌ ಹೊರಸೂಸುವ ಪೊಜೆಕ್ಟರ್‌ ಬಳಕೆ ಮಾಡಲಾಗಿವುದು. ಎಷ್ಟು ಪ್ರಾಜೆಕ್ಟರ್‌ ಬಳಕೆ ಮಾಡುವುದು ಎಂಬ ಕುರಿತು ನವೆಂಬರ್‌ನಲ್ಲಿ ನಿರ್ಧಿರಸಲಾಗುವುದು ಎಂದು ತಿಳಿಸಿದರು.

RELATED ARTICLES

Latest News