ಬೆಂಗಳೂರು, ಸೆ.16- ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ಕೆಲವು ಅಧಿಕಾರಿಗಳು ಹಾಗೂ ಸಿಬ್ಬಂದಿಗಳೇ ನಟ ದರ್ಶನ್, ರೌಡಿ ವಿಲ್ಸನ್‌ಗಾರ್ಡನ್ ನಾಗ ಹಾಗೂ ಇತರರಿಗೆ ಆತಿಥ್ಯ ನೀಡಿದ್ದಾರೆಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ.
ಕಾರಾಗೃಹದೊಳಗೆ ರಾಜಾತಿಥ್ಯದ ಬಗ್ಗೆ ತನಿಖೆ ನಡೆಸುತ್ತಿರುವ ಮೂರು ತಂಡಗಳು ತಮ ತನಿಖೆಗಳನ್ನು ತೀವ್ರಗೊಳಿಸಿದ್ದು, ತನಿಖೆ ಅಂತಿಮ ಹಂತಕ್ಕೆ ಬಂದಿದೆ.ನಟ ದರ್ಶನ್, ರೌಡಿ ವಿಲ್ಸನ್‌ಗಾರ್ಡನ್ ನಾಗ ಹಾಗೂ ಇತರರು ಕಾರಾಗೃಹದ ಆವರಣದಲ್ಲಿ ಚೇರ್‌ನಲ್ಲಿ ಕುಳಿತು ಟೀಪಾಯಿ ಇಟ್ಟುಕೊಂಡು, ಕೈಯಲ್ಲಿ ಕಾಫಿ ಹಾಗೂ ಸಿಗರೇಟ್ ಹಿಡಿದಿರುವಂತಹ ಫೋಟೋ ಗಳು ವೈರಲ್ ಆಗುತ್ತಿದ್ದಂತೆ ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿತ್ತು.
ಹಾಗಾಗಿ ಪರಪ್ಪನ ಅಗ್ರಹಾರ ಠಾಣೆಯಲ್ಲಿ ಈ ಬಗ್ಗೆ ಮೂರು ಪ್ರಕರಣಗಳು ದಾಖಲಾದವು. ಆ ಪೈಕಿ 2 ಪ್ರಕರಣಗಳಲ್ಲಿ ದರ್ಶನ್ ಹೆಸರನ್ನು ಉಲ್ಲೇಖಿಸಲಾಗಿದೆ.ದರ್ಶನ್ ಹಾಗೂ ರೌಡಿ ನಾಗನಿಗೆ ಟೀ, ಸಿಗರೇಟ್, ಚೇರ್ ಕೊಟ್ಟವರ್ಯಾರು ಎಂಬುವುದರ ಬಗ್ಗೆ ಹುಳಿಮಾವು ಠಾಣೆ ಇನ್‌್ಸಪೆಕ್ಟರ್ ತನಿಖೆ ನಡೆಸುತ್ತಿದ್ದಾರೆ.
ಜೈಲಿನ ಕೆಲವು ಅಧಿಕಾರಿಗಳು ಹಾಗೂ ಸಿಬ್ಬಂದಿಗಳೇ ರೌಡಿ ವಿಲ್ಸನ್‌ಗಾರ್ಡನ್ ನಾಗನ ಮೂಲಕ ಇವೆಲ್ಲವನ್ನು ಸರಬರಾಜು ಮಾಡಲಾಗಿದೆ ಎಂಬುದು ಗೊತ್ತಾಗಿದೆ.ಅಲ್ಲದೆ ಕಾರಾಗೃಹದೊಳಗೆ ರೌಡಿ ಶೀಟರ್ ಮಗ ಸತ್ಯನೊಂದಿಗೆ ನಟ ದರ್ಶನ್ ವಿಡಿಯೋಕಾಲ್‌ನಲ್ಲಿ ಮಾತನಾಡಿರುವ ಬಗ್ಗೆ ಬೇಗೂರು ಠಾಣೆ ಇನ್‌್ಸಪೆಕ್ಟರ್ ತನಿಖೆ ನಡೆಸುತ್ತಿದ್ದಾರೆ.
ರೌಡಿಶೀಟರ್ ಮಗ ಸತ್ಯನಿಗೆ ವಿಡಿಯೋಕಾಲ್ ಮಾಡಲು ಬಳಸಿರುವ ಮೊಬೈಲ್‌ನ್ನು ಸಹ ಜೈಲು ಅಧಿಕಾರಿಗಳ ಮೂಲಕ ಅಕ್ರಮವಾಗಿ ಪಡೆದಿರುವುದು ತನಿಖೆಯಿಂದ ತಿಳಿದು ಬಂದಿದೆ.ಎಲೆಕ್ಟ್ರಾನಿಕ್ ಸಿಟಿ ಉಪವಿಭಾಗದ ಎಸಿಪಿ ಅವರು ತನಿಖೆ ಮಾಡುತ್ತಿರುವ ಮತ್ತೊಂದು ಪ್ರಕರಣದಲ್ಲಿ, ಜೈಲು ಅಧಿಕಾರಿಗಳು ತಮ ಕಾರ್ಯವ್ಯಾಪ್ತಿ ಮೀರಿ ಖೈದಿಗಳನ್ನು ಬಳಸಿಕೊಂಡು ಕೆಲಸ ಮಾಡಿರುವುದು ಕಂಡುಬಂದಿದೆ.
ರಾಜಾತಿಥ್ಯಕ್ಕೆ ಸಂಬಂಧಿಸಿದಂತೆ ಈಗಾಗಲೇ ಅಮಾನತುಗೊಂಡಿರುವ ಜೈಲು ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ವಿಚಾರಣೆಗೆ ಹಾಜರಾಗುವಂತೆ ನೋಟೀಸ್ ನೀಡಲಾಗಿದ್ದು, ಕೆಲವರು ಇನ್ನು ವಿಚಾರಣೆಗೆ ಹಾಜರಾಗಿಲ್ಲ.
ರೌಡಿ ಶೀಟರ್ ತನ್ನ ಮಗನಿಗೆ ವಿಡಿಯೋಕಾಲ್ ಮಾಡಲು ಬಳಿಸಿರುವ ಮೊಬೈಲ್‌ನ್ನು ಎಫ್‌ಎಸ್‌ಎಲ್‌ಗೆ ಹೆಚ್ಚಿನ ತನಿಖೆಗಾಗಿ ಕಳುಹಿಸಲಾಗಿದ್ದು, ಸಂಬಂಧಪಟ್ಟ ಟೆಲಿಕಾಂ ಸಂಸ್ಥೆಗಳಿಗೂ ವರದಿ ನೀಡುವಂತೆ ಮನವಿ ಮಾಡಿಕೊಳ್ಳಲಾಗಿದೆ.
ಒಟ್ಟಾರೆ ಈ ಮೂರು ಪ್ರಕರಣಗಳ ತನಿಖೆ ಬಹುತೇಕ ಮುಕ್ತಾಯ ಹಂತದಲ್ಲಿವೆ.