Thursday, September 19, 2024
Homeಕ್ರೀಡಾ ಸುದ್ದಿ | Sportsಕೊಹ್ಲಿ-ರೋಹಿತ್‌ಗಿಂತ ಬೂಮ್ರಾ ಮೌಲ್ಯಯುತ ಆಟಗಾರ : ಅಶ್ವಿನ್

ಕೊಹ್ಲಿ-ರೋಹಿತ್‌ಗಿಂತ ಬೂಮ್ರಾ ಮೌಲ್ಯಯುತ ಆಟಗಾರ : ಅಶ್ವಿನ್

R Ashwin names Jasprit Bumrah as India's most valuable cricketer

ಚೆನ್ನೈ, ಸೆ. 16- ಭಾರತ ತಂಡದಲ್ಲಿ ರೋಹಿತ್‌ ಶರ್ಮಾ ಮತ್ತು ವಿರಾಟ್‌ ಕೊಹ್ಲಿಗಿಂತ ಜಸ್‌‍ಪ್ರೀತ್‌ಬೂಮ್ರಾ ಅವರೇ ಬಹುಮೌಲ್ಯಯುತ ಆಟಗಾರ ಎಂದು ಖ್ಯಾತ ಸ್ಪಿನ್ನರ್‌ ರವಿಚಂದ್ರನ್‌ ಅಶ್ವಿನ್ ಹೇಳಿದ್ದಾರೆ.

ಗಾಯದ ಸಮಸ್ಯೆಯಿಂದ ಚೇತರಿಸಿಕೊಂಡು ಅಂತಾ ರಾಷ್ಟ್ರೀಯ ಕ್ರಿಕೆಟ್‌ಗೆ ಕಮ್‌ಬ್ಯಾಕ್‌ ಮಾಡಿದ ನಂತರ ಬೂಮ್ರಾ ಪರಿಣಾಮಕಾರಿ ಬೌಲಿಂಗ್‌ ದಾಳಿ ನಡೆಸಿದ್ದು, 2023ರ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ 20 ವಿಕೆಟ್‌ ಕಬಳಿಸಿ 4ನೇ ಗರಿಷ್ಠ ವಿಕೆಟ್‌ ಟೇಕರ್‌ ಆಗಿದ್ದರೆ, 2024ರ ಟ್ವೆಂಟಿ-20 ವಿಶ್ವಕಪ್‌ ಟೂರ್ನಿಯಲ್ಲಿ 8 ಪಂದ್ಯಗಳಿಂದ 15 ವಿಕೆಟ್‌ ಪಡೆದಿದ್ದ ಬುಮ್ರಾ ಟೂರ್ನಿ ಶ್ರೇಷ್ಠ ಪ್ರಶಸ್ತಿ ಪಡೆದಿದ್ದಲ್ಲದೆ, ರೋಹಿತ್‌ ಬಳಗಕ್ಕೆ ಚಾಂಪಿಯನ್‌ಪಟ್ಟ ದಕ್ಕಿಸಿಕೊಟ್ಟಿದ್ದರು.

ವಿಮಲ್‌ಕುಮಾರ್‌ ಅವರ ಯುಟ್ಯೂಬ್‌ನಲ್ಲಿ ಜಸ್‌‍ಪ್ರೀತ್‌ಬುಮ್ರಾ ಅವರ ಬೌಲಿಂಗ್‌ ಶೈಲಿಯ ಕುರಿತು ರವಿಚಂದ್ರನ್‌ ಅಶ್ವಿನ್‌ ತಮ ಅನಿಸಿಕೆ ಹಂಚಿ ಕೊಂಡಿದ್ದಾರೆ.

ಆತ ನಿಜವಾದ ಚಾಂಪಿಯನ್:
`ನಾವು ಚೆನ್ನೈ ಮಂದಿ ಹೆಚ್ಚಾಗಿ ಬೌಲರ್‌ಗಳನ್ನು ಪ್ರಶಂಸಿಸುತ್ತೇವೆ. ಕಳೆದ 4-5 ದಿನಗಳ ಹಿಂದೆ ಇಲ್ಲಿ ನಡೆದಿದ್ದ ಕಾರ್ಯಕ್ರಮಕ್ಕೆ ಬುಮ್ರಾ ಅವರು ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ನಾವು ಅವರಿಗೆ ರಣಜಿ ಟೂರ್ನಿಯಂತೆ ಅದ್ಧೂರಿ ಸ್ವಾಗತ ನೀಡಿದ್ದೆವು. ನಾವು (ಚೆನ್ನೈ ಮಂದಿ) ಬೌಲರ್‌ಗಳನ್ನು ಚೆನ್ನಾಗಿ ನಡೆಸಿಕೊಳ್ಳುತ್ತೇವೆ.

ತಂಡದಲ್ಲಿ ಒಬ್ಬ ಆಟಗಾರನನ್ನು ಚಾಂಪಿಯನ್‌ನಂತೆ ಬಿಂಬಿಸುತ್ತಿ ದ್ದಾರೆ, ಇಲ್ಲಿ ನಾನು ಆತನ ಹೆಸರನ್ನು ಹೇಳಲು ಇಚ್ಛಿಸು ವುದಿಲ್ಲ. ಆದರೆ ಜಸ್‌‍ಪ್ರೀತ್‌ ಬೂಮ್ರಾ ಅವರು ಟೀಮ್‌ಇಂಡಿಯಾದಲ್ಲಿರುವ ನಿಜವಾದ ಮೌಲ್ಯಯುತ ಆಟಗಾರ ರಾಗಿದ್ದಾರೆ’ ಎಂದು ರವಿಚಂದ್ರನ್‌ ಅಶ್ವಿನ್‌ ಹೇಳಿದ್ದಾರೆ.

ಬಲವಾಗಿ ಕಮ್‌ಬ್ಯಾಕ್‌ ಮಾಡಿರುವ ಬೂಮ್ರಾ:
ಗಾಯದ ಸಮಸ್ಯೆಯಿಂದ ಕಮ್‌ಬ್ಯಾಕ್‌ ಮಾಡಿದ ನಂತರ ಬುಮ್ರಾ 6 ಟೆಸ್ಟ್‌ ಪಂದ್ಯಗಳಿಂದ 2 ಬಾರಿ ಐದು ವಿಕೆಟ್‌ ಸೇರಿದಂತೆ 31 ವಿಕೆಟ್‌, ಚುಟುಕು ಸ್ವರೂಪದಲ್ಲಿ 19 ವಿಕೆಟ್‌ ಹಾಗೂ ಕಳೆದ 16 ಪಂದ್ಯಗಳಿಂದ 28 ವಿಕೆಟ್‌ ಪಡೆದಿದ್ದಾರೆ.

RELATED ARTICLES

Latest News