ಕೋಲ್ಕತ್ತಾ, ಸೆ 16 (ಪಿಟಿಐ) ಧರಣಿ ನಿರತ ಕಿರಿಯ ವೈದ್ಯರ ಬೇಡಿಕೆಗೆ ಮಣಿದು ಕೋಲ್ಕತ್ತಾ ಪೊಲೀಸ್ ಆಯುಕ್ತ ವಿನೀತ್ ಗೋಯಲ್, ಆರೋಗ್ಯ ಸೇವೆಗಳ ನಿರ್ದೇಶಕ ಮತ್ತು ವೈದ್ಯಕೀಯ ಶಿಕ್ಷಣ ನಿರ್ದೇಶಕರನ್ನು ವಜಾಗೊಳಿಸುವುದಾಗಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಡರಾತ್ರಿ ಘೋಷಿಸಿದ್ದಾರೆ.
ವೈದ್ಯರೊಂದಿಗಿನ ಸಭೆಯ ನಂತರ, ಮಾತುಕತೆಗಳು ಫಲದಾಯಕ ಮತ್ತು ಅವರ ಬೇಡಿಕೆಗಳಲ್ಲಿ ಸುಮಾರು 99 ಪ್ರತಿಶತವನ್ನು ಅಂಗೀಕರಿಸಲಾಗಿದೆ ಎಂದು ಅವರು ಹೇಳಿದರು.
ಇಂದು ಸಂಜೆ 4 ಗಂಟೆಯ ನಂತರ ಹೊಸ ಕೋಲ್ಕತ್ತಾ ಪೊಲೀಸ್ ಆಯುಕ್ತರ ಹೆಸರನ್ನು ಪ್ರಕಟಿಸಲಾಗುವುದು ಎಂದು ಆರ್‌ಜಿ ಕರ್ ಬಿಕ್ಕಟ್ಟನ್ನು ಪರಿಹರಿಸಲು ತಮ ನಿವಾಸದಲ್ಲಿ ನಡೆದ ಸಭೆಯ ನಂತರ ಅವರು ಸುದ್ದಿಗಾರರಿಗೆ ತಿಳಿಸಿದರು. ವೈದ್ಯರು ತಮ ಬಹುತೇಕ ಬೇಡಿಕೆಗಳನ್ನು ಸ್ವೀಕರಿಸಿರುವುದರಿಂದ ಕೆಲಸಕ್ಕೆ ಮರಳುವಂತೆ ಮುಖ್ಯಮಂತ್ರಿಗಳು ಒತ್ತಾಯಿಸಿದರು.
ವೈದ್ಯರ ವಿರುದ್ಧ ಯಾವುದೇ ದಂಡನಾತಕ ಕ್ರಮವನ್ನು ತೆಗೆದುಕೊಳ್ಳುವುದಿಲ್ಲ . ಸಾಮಾನ್ಯ ಜನರು ಬಳಲುತ್ತಿರುವ ಕಾರಣ ನಾನು ಅವರನ್ನು ಮತ್ತೆ ಕೆಲಸಕ್ಕೆ ಸೇರಲು ವಿನಂತಿಸುತ್ತೇನೆ ಎಂದು ಅವರು ಹೇಳಿದರು.