ಇಟಾವಾ (ಯುಪಿ), ಸೆ 17- ಇಲ್ಲಿ ಆಗ್ರಾ-ವಾರಣಾಸಿ ವಂದೇ ಭಾರತ್ ಎಕ್ಸ್ ಪ್ರೆಸ್‌ಗೆ ಹಸಿರು ಧ್ವಜವನ್ನು ಬೀಸುವ ಸ್ಪರ್ಧೆಯಲ್ಲಿ ಬಿಜೆಪಿಯ ಇಟಾವಾ ಶಾಸಕಿ ಸರಿತಾ ಬದೌರಿಯಾ ಅವರು ರೈಲ್ವೆ ಹಳಿಗಳ ಮೇಲೆ ಬಿದ್ದ ಗಟನೆ ನಡೆದಿದೆ.
ಘಟನೆಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿವೆ.ನಿನ್ನೆ ಸಂಜೆ 6 ಗಂಟೆ ಸುಮಾರಿಗೆ ರೈಲು ಆಗಮಿಸುತ್ತಿದ್ದಂತೆ ಕಿಕ್ಕಿರಿದ ಪ್ಲಾಟ್‌ಫಾರ್ಮ್ ನಡುವೆ ಈ ಘಟನೆ ನಡೆದಿದೆ. 61 ವರ್ಷದ ಎರಡನೇ ಅವಧಿಯ ಬಿಜೆಪಿ ಶಾಸಕಿ ವೇದಿಕೆಯಲ್ಲಿ ನಿಂತಿದ್ದಾಗ ಹಸಿರು ಬಾವುಟವನ್ನು ಹಿಡಿದ್ದರು .
ಪ್ರಧಾನಿ ನರೇಂದ್ರ ಮೋದಿಯವರು ವಂದೇ ಭಾರತ್ ರೈಲಿನ ವರ್ಚುವಲ್ ಉದ್ಘಾಟನೆಯ ನಂತರ, 20175 ಸಂಖ್ಯೆಯ ರೈಲಿಗೆ ಆಗ್ರಾದಿಂದ ರೈಲು ಸಚಿವ ರವನೀತ್ ಸಿಂಗ್ ಬಿಟ್ಟು ಅವರು ಫ್ಲ್ಯಾಗ್ ಆಫ್ ಮಾಡಿದರು.ಈ ವೇಲೆ ಜಾರಿ ಹಳಿ ಮೇಲೆ ಬಿದ್ದಿದ್ದಾರೆ .
ನಂತರ ರೈಲನ್ನು ನಿಲ್ಲಿಸಿ ಬಿಜೆಪಿಯ ಇಟಾವಾ ಘಟಕದ ಖಜಾಂಚಿ ಸಂಜೀವ್ ಭದೌರಿಯಾ,ಶಾಸಕಿಯನ್ನು ರಕ್ಷಿಸಿದ್ದಾರೆ. ನಂತರ ಅವರು ವೈದ್ಯರೊಂದಿಗೆ ಸಮಾಲೋಚಿಸಿದರು ಮತ್ತು ಈಗ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಅವರು ಯಾವುದೇ ದೈಹಿಕ ಗಾಯಗಳನ್ನು ಅನುಭವಿಸಲಿಲ್ಲ. ಯಾವುದೇ ಆಂತರಿಕ ಗಾಯವಿದ್ದರೆ, ಅದನ್ನು ಇನ್ನೂ ದೃಢೀಕರಿಸಬೇಕಾಗಿದೆ ಎಂದು ಭದೌರಿಯಾ ಹೇಳಿದರು.
ಸಮಾಜವಾದಿ ಪಕ್ಷದ ಸಂಸದ ಜಿತೇಂದ್ರ ದೌವ್‌ಹಾರೆ, ಬಿಜೆಪಿಯ ಮಾಜಿ ಸಂಸದ ರಾಮ್ ಶಂಕರ್ ಮತ್ತು ಹಾಲಿ ಶಾಸಕಿ ಸರಿತಾ ಭದೌರಿಯಾ ಸೇರಿದಂತೆ ವಿವಿಧ ರಾಜಕೀಯ ಮುಖಂಡರು ಕಾರ್ಯಕ್ರಮದಲ್ಲಿ ಭಾಗವಹಿಸಲು ಜಮಾಯಿಸಿದಾಗ ವೇದಿಕೆಯಲ್ಲಿ ಗದ್ದಲ ಉಂಟಾಯಿತು.
ರೈಲಿನ ಹಾರ್ನ್ ಹೊರಡುವ ಸೂಚನೆ ನೀಡುತ್ತಿದ್ದಂತೆಯೇ ಪ್ಲಾಟ್‌ಫಾರ್ಮ್ ಅಸ್ತವ್ಯಸ್ತಗೊಂಡಿದ್ದು, ಬೆಂಬಲಿಗರು ಸ್ಥಾನಕ್ಕಾಗಿ ಹರಸಾಹಸ ಪಡುತ್ತಿದ್ದರು. ನಂತರದ ಗಲಿಬಿಲಿಯಲ್ಲಿ, ಶಾಸಕರನ್ನು ಪ್ಲಾಟ್‌ಫಾರ್ಮ್‌ನಿಂದ ತಳ್ಳಲಾಯಿತು ಮತ್ತು ಅವರು ರೈಲಿನ ಮುಂಭಾಗದ ರೈಲ್ವೆ ಹಳಿಗಳ ಮೇಲೆ ಬಿದ್ದಿದ್ದಾರೆ.ಅದೃಷ್ಠವಷಾತ್ ಯಾವುದೇ ಅನಾಹುತ ಸಂಭವಿಸಿಲ್ಲ .