Friday, September 20, 2024
Homeಬೆಂಗಳೂರುಕೆಲಸ ಮಾಡುತ್ತಿದ್ದ ಕಂಪನಿಯಲ್ಲೇ ಲ್ಯಾಪ್‌ಟಾಪ್‌ ಕದ್ದಿದ್ದ ಸಿಸ್ಟಮ್‌ ಅಡ್ಮಿನ್ ಅರೆಸ್ಟ್

ಕೆಲಸ ಮಾಡುತ್ತಿದ್ದ ಕಂಪನಿಯಲ್ಲೇ ಲ್ಯಾಪ್‌ಟಾಪ್‌ ಕದ್ದಿದ್ದ ಸಿಸ್ಟಮ್‌ ಅಡ್ಮಿನ್ ಅರೆಸ್ಟ್

system admin was arrested for stealing a laptop

ಬೆಂಗಳೂರು, ಸೆ.17– ತಾನು ಕೆಲಸ ಮಾಡುತ್ತಿದ್ದ ಸಾಫ್ಟ್ ವೇರ್‌ ಕಂಪನಿಯಲ್ಲೇ ಲ್ಯಾಪ್‌ಟಾಪ್‌ಗಳನ್ನು ಕಳ್ಳತನ ಮಾಡಿದ್ದ ಸಿಸ್ಟಮ್‌ ಅಡ್ಮಿನ್ ನನ್ನು ವೈಟ್‌ಫೀಲ್‌್ಡ ಠಾಣೆ ಪೊಲೀಸರು ಬಂಧಿಸಿ 22 ಲಕ್ಷ ರೂ ಮೌಲ್ಯದ 50 ಲ್ಯಾಪ್‌ಟಾಪ್‌ಗಳನ್ನು ವಶಪಡಿಸಿಕೊಂಡಿದ್ದಾರೆ.ಮೂಲತ ತಮಿಳುನಾಡಿನ ಹೊಸೂರು ನಿವಾಸಿ ಮುರುಗೇಶ್‌ (29) ಬಂಧಿತ ಸಿಸ್ಟಮ್‌ ಅಡ್ಮಿನ್ .

ಬಿಸಿಎ ವ್ಯಾಸಂಗ ಮಾಡಿರುವ ಈತ ವೈಟ್‌ಫೀಲ್‌್ಡನಲ್ಲಿರುವ ಸಾಫ್ಟ್ ವೇರ್‌ ಕಂಪನಿಯೊಂದರಲ್ಲಿ ಸಿಸ್ಟಮ್‌ ಅಡಿನ್‌ ಆಗಿ ಫೆಬ್ರರಿಯಿಂದ ಕೆಲಸ ನಿರ್ವಹಿಸುತ್ತಿದ್ದನು. ಆ ಸಮಯದಲ್ಲಿ ಕಂಪನಿಯಲ್ಲಿದ್ದ ಲ್ಯಾಪ್‌ಟಾಪ್‌ಗಳನ್ನು ಒಂದೊಂದಾಗಿ ಒಟ್ಟು 57 ಲ್ಯಾಪ್‌ಟಾಪ್‌ಗಳನ್ನು ಕಳ್ಳತನ ಮಾಡಿದ್ದನು.

ತದನಂತರ ಕೆಲಸ ತೊರೆದು ತನ್ನ ಊರಿಗೆ ಹಿಂದಿರುಗಿದ್ದನು. ಕಂಪನಿಯಲ್ಲಿ ಲ್ಯಾಪ್‌ಟಾಪ್‌ಗಳು ಕಳ್ಳತನವಾಗಿರುವ ಬಗ್ಗೆ ಅರಿವಾಗಿ ಕಂಪನಿಯವರು ಪೊಲೀಸರಿಗೆ ದೂರು ನೀಡಿ ಈತನ ಮೇಲೆ ಶಂಕೆ ವ್ಯಕ್ತಪಡಿಸಿದ್ದರು.ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ತಮಿಳುನಾಡಿನ ಹೊಸೂರಿಗೆ ಹೋಗಿ ಆತನನ್ನು ಪತ್ತೆ ಹಚ್ಚಿ 5 ಲ್ಯಾಪ್‌ಟಾಪ್‌ಗಳ ಸಮೇತ ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಕಂಪನಿಯಲ್ಲಿ ಲ್ಯಾಪ್‌ಟಾಪ್‌ಗಳನ್ನು ಕಳವು ಮಾಡಿರುವುದಾಗಿ ತಿಳಿಸಿದ್ದಾನೆ.

ಈ ಪೈಕಿ 45 ಲ್ಯಾಪ್‌ಟಾಪ್‌ಗಳನ್ನು ಹೊಸೂರಿನಲ್ಲಿರುವ ಹಳೆಯ ಲ್ಯಾಪ್‌ಟಾಪ್‌ ರಿಪೇರಿ ಮತ್ತು ಮಾರಾಟ ಮಾಡುವ ಅಂಗಡಿಗಳಿಗೆ ಮಾರಿರುವುದಾಗಿ ತಿಳಿಸಿದ ಮೇರೆಗೆ ಪೊಲೀಸರು ಅವುಗಳನ್ನು ಅಂಗಡಿಯಿಂದ ವಶಪಡಿಸಿಕೊಂಡಿದ್ದಾರೆ.ಇನ್‌್ಸಪೆಕ್ಟರ್‌ ಗುರುಪ್ರಸಾದ್‌ ಹಾಗೂ ಸಿಬ್ಬಂದಿ ತಂಡ ಈ ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾಗಿದೆ.

RELATED ARTICLES

Latest News