Friday, September 20, 2024
Homeರಾಜ್ಯಶಿವಸೇನೆ ಶಾಸಕ ಸಂಜಯ್‌ ಗಾಯಕ್‌ವಾಡ್‌ ಬಂಧನಕ್ಕೆ ಆಗ್ರಹಿಸಿ ಕಾಂಗ್ರೆಸ್‌‍ ಪ್ರತಿಭಟನೆ

ಶಿವಸೇನೆ ಶಾಸಕ ಸಂಜಯ್‌ ಗಾಯಕ್‌ವಾಡ್‌ ಬಂಧನಕ್ಕೆ ಆಗ್ರಹಿಸಿ ಕಾಂಗ್ರೆಸ್‌‍ ಪ್ರತಿಭಟನೆ

Congress protests demanding the arrest of Shiv Sena MLA Sanjay Gaikwad

ಬೆಂಗಳೂರು, ಸೆ.17- ರಾಹುಲ್‌ ಗಾಂಧಿಯವರ ವಿರುದ್ಧ ಪ್ರಚೋದನಾಕಾರಿ ಹೇಳಿಕೆ ನೀಡುತ್ತಿದ್ದ ಶಿವಸೇನೆಯ ಶಾಸಕ ಸಂಜಯ್‌ ಗಾಯಕ್‌ವಾಡ್‌ರನ್ನು ಬಂಧಿಸಬೇಕೆಂದು ಆಗ್ರಹಿಸಿ ಕೆಪಿಸಿಸಿ ವತಿಯಿಂದ ಇಂದು ಪ್ರತಿಭಟನೆ ನಡೆಸಲಾಯಿತು.ಪಕ್ಷದ ಕಚೇರಿ ಎದುರು ನಡೆದ ಪ್ರತಿಭಟನೆಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಜಿ.ಸಿ. ಚಂದ್ರಶೇಖರ್‌, ವಿಧಾನ ಪರಿಷತ್‌ ಸದಸ್ಯ ನಾಗರಾಜ್‌ ಯಾದವ್‌ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.

ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ್‌ ಶಿಂಧೆ ಬಣದ ಶಾಸಕ ಸಂಜಯ್‌ ಗಾಯಕ್‌ವಾಡ್‌ ವಿವಾದಿತ ಹೇಳಿಕೆ ನೀಡಿ ರಾಹುಲ್‌ ಗಾಂಧಿಯವರ ನಾಲಗೆ ಕತ್ತರಿಸಿ ದವರಿಗೆ 11 ಲಕ್ಷ ರೂ.ಗಳ ಬಹು ಮಾನ ನೀಡುವುದಾಗಿ ಘೋಷಿಸಿ ದ್ದರು. ಇದು ಕಾಂಗ್ರೆಸಿಗರನ್ನು ಕೆರಳಿಸಿದೆ.

ಪ್ರತಿಭಟನೆಯಲ್ಲಿ ಮಾತನಾಡಿದ ಜಿ.ಸಿ. ಚಂದ್ರಶೇಖರ್‌, ಮಹಾ ರಾಷ್ಟ್ರದಲ್ಲಿ ಗೂಂಡಾ ಸರ್ಕಾರ ಅಧಿಕಾರದಲ್ಲಿದೆ. ಸಂಜಯ್‌ ಗಾಯಕ್‌ವಾಡ್‌ ರೌಡಿಶೀಟರ್‌ ಆಗಿದ್ದು, ಶಾಸಕನಾಗಿರುವುದು ದುರಂತವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಪರಿಶಿಷ್ಟ ಜಾತಿ/ಪಂಗಡದವರೂ ಸೇರಿದಂತೆ ಶೋಷಿತ ಸಮುದಾಯ ಗಳಿಗೆ ಮೀಸಲಾತಿ ನೀಡಿದ್ದೇ ಕಾಂಗ್ರೆಸ್‌‍ ಪಕ್ಷ.

ರಾಹುಲ್‌ಗಾಂಧಿ ಅಮೆರಿಕದಲ್ಲಿ ನೀಡಿದ್ದ ಹೇಳಿಕೆಯನ್ನು ಬಿಜೆಪಿ ಉದ್ದೇಶಪೂರ್ವಕವಾಗಿ ತಿರುಚಿ ಗೊಂದಲ ಮೂಡಿಸುವ ಪ್ರಯತ್ನ ನಡೆಸುತ್ತಿದೆ. ಶೋಷಿತ ವರ್ಗಗಳಿಗೆ ಆರ್ಥಿಕ, ಸಾಮಾಜಿಕ ಸುಸ್ಥಿರತೆಯನ್ನು ತಂದ ಬಳಿಕ ಮೀಸಲಾತಿಯನ್ನು ತೆಗೆಯುವುದಾಗಿ ರಾಹುಲ್‌ಗಾಂಧಿ ಹೇಳಿದ್ದಾರೆ. ಆದರೆ ಅದನ್ನು ಪೂರ್ಣವಾಗಿ ಅರ್ಥೈಸಿಕೊಳ್ಳದೆ ಅಪಪ್ರಚಾರ ನಡೆಸಲಾಗುತ್ತಿದೆ.

ಆರಂಭದಿಂದಲೂ ರಾಹುಲ್‌ಗಾಂಧಿಯವರನ್ನು ಹತ್ತಿಕ್ಕುವ ಪ್ರಯತ್ನ ನಡೆಯುತ್ತಿದೆ. ಆದರೆ ಅದಕ್ಕೆ ಜನ ಅವಕಾಶ ನೀಡಲಿಲ್ಲ. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌‍ ಪಕ್ಷವನ್ನು ಬೆಂಬಲಿಸಿ ಬಿಜೆಪಿಗೆ ಬುದ್ಧಿ ಕಲಿಸಿದ್ದಾರೆ. ಸಂಜಯ್‌ ಗಾಯಕ್‌ವಾಡ್‌ ಹೇಳಿಕೆ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಬೆಂಗಳೂರಿನಲ್ಲಿ ಪೊಲೀಸರಿಗೆ ದೂರು ನೀಡಲಾಗುವುದು. ನ್ಯಾಯಾ ಲಯದಲ್ಲಿ ಪ್ರಕರಣ ದಾಖಲಿಸ ಲಾಗು ವುದು. ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿಯವರು ತಮ ಹುದ್ದೆಯ ಘನತೆಯನ್ನು ಮರೆತು ಹೀನ ಹಾಗೂ ಕೀಳುಮಟ್ಟದ ಹೇಳಿಕೆಗಳನ್ನು ನೀಡಿದ್ದಾರೆ ಎಂದು ದೂರಿದರು.

ಬಿಜೆಪಿಯವರು ಸಂವಿಧಾನವನ್ನು ಪಾಲಿಸುತ್ತಿಲ್ಲ. ಮೋದಿ, ಅಮಿತ್‌ ಶಾ ಕಾನೂನುಗಳನ್ನು ಪಾಲನೆ ಮಾಡುತ್ತಿದ್ದಾರೆ. ಬಿಜೆಪಿಯ ಗೂಂಡಾಗಳು ಜನರ ಶಾಂತಿ ನೆಮದಿಯನ್ನು ಕೆಡಿಸುವುದು, ಪ್ರಚೋದನಾಕಾರಿ ಹೇಳಿಕೆಗಳನ್ನು ನೀಡಿ ಹಿಂಸಾಚಾರಕ್ಕೆ ಕುಮಕ್ಕು ನೀಡು ವುದನ್ನೇ ಪ್ರವೃತ್ತಿ ಮಾಡಿಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಹುಲ್‌ಗಾಂಧಿಯ ನಾಲಗೆ ಕತ್ತರಿಸುವುದಿರಲಿ ಅವರನ್ನು ಮುಟ್ಟಲೂ ಕೂಡ ಬಿಜೆಪಿಯವರಿಗೆ ಸಾಧ್ಯವಿಲ್ಲ. ಕಾಂಗ್ರೆಸ್‌‍ ಪಕ್ಷ ರಾಹುಲ್‌ಗಾಂಧಿಯವರ ಜೊತೆ ಸದೃಢವಾಗಿ ನಿಲ್ಲಲಿದೆ. ಶಿವಸೇನೆ ಸಂಜಯ್‌ ಗಾಯಕ್‌ವಾಡ್‌ನನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಬೇಕು ಜೊತೆಗೆ ಕ್ರಿಮಿನಲ್ ಪ್ರಕರಣದಲ್ಲಿ ಬಂಧಿಸಬೇಕು ಎಂದು ಒತ್ತಾಯಿಸಿದರು.

RELATED ARTICLES

Latest News