ಹೈದರಾಬಾದ್,ಸೆ.20- ತಿರುಪತಿ ತಿಮಪ್ಪನ ಲಡ್ಡುಗಳಲ್ಲಿ ಪ್ರಾಣಿಗಳ ಕೊಬ್ಬು ಮಿಶ್ರಣ ಮಾಡಿರುವುದು ದೃಢಪಟ್ಟಿದ್ದು, ಅಯೋಧ್ಯೆ ರಾಮಮಂದಿರ ಉದ್ಘಾಟನೆ ಸಮಾರಂಭದಲ್ಲೂ ತಿಮಪ್ಪನ ಲಡ್ಡುಗಳನ್ನು ಕಳುಹಿಸಲಾಗಿತ್ತು.
ಜನವರಿ 22ರಂದು ಅಯೋಧ್ಯೆ ರಾಮಮಂದಿರದ ಉದ್ಘಾಟನಾ ಮಹೋತ್ಸವ ಅದ್ಧೂರಿಯಾಗಿ ನೆರವೇರಿತ್ತು. ಸಮಾರಂಭದಲ್ಲಿ ಪ್ರಧಾನಿ ಮೋದಿ ಸೇರಿದಂತೆ ಸೆಲೆಬ್ರಿಟಿಗಳು, ಗಣ್ಯರು, ರಾಜಕೀಯ ನಾಯಕರು, ಸಿನಿ ರಂಗದ ನಟ, ನಟಿಯರು ಹಾಗೂ ಲಕ್ಷಾಂತರ ಭಕ್ತರು ಭಾಗಿಯಾಗಿದ್ದರು.
ಸಂಭ್ರಮ ಸಡಗರದಿಂದ ಬಾಲರಾಮನ ವಿಗ್ರಹವನ್ನು ರಾಮಮಂದಿರದಲ್ಲಿ ಪ್ರತಿಷ್ಠಾಪನೆ ಮಾಡಲಾಗಿತ್ತು. ಈ ಉದ್ಘಾಟನಾ ಸಮಾರಂಭದಲ್ಲಿ ಪ್ರಸಾದವಾಗಿ ವಿಶ್ವವಿಖ್ಯಾತ ತಿರುಪತಿ ಲಡ್ಡುಗಳನ್ನು ವಿತರಿಸಲಾಗಿತ್ತು.
ಬರೋಬ್ಬರಿ 1 ಲಕ್ಷ ತಿಮಪ್ಪನ ಲಡ್ಡುಗಳನ್ನು ತಿರುಪತಿಯಿಂದ ಅಯೋಧ್ಯಗೆ ಕಳುಹಿಸಿಕೊಡಲಾಗಿತ್ತು. ಬಳಿಕ ಜನವರಿ 22ರಂದು ರಾಮಮಂದಿರ ಉದ್ಘಾಟನೆ ಸಮಾರಂಭದಲ್ಲಿ ತಿಮಪ್ಪನ ಲಡ್ಡುಗಳನ್ನು ಅಲ್ಲಿ ನೆರೆದಿದ್ದ ಸೆಲೆಬ್ರಿಟಿಗಳು, ಗಣ್ಯರು, ರಾಜಕೀಯ ನಾಯಕರು ಸೇರಿದಂತೆ ಭಕ್ತರಿಗೆ ವಿತರಣೆ ಮಾಡಲಾಗಿತ್ತು.
ಜನವರಿ 22ರಂದು ಅಯೋಧ್ಯೆಯ ರಾಮ ಮಂದಿರದ ಮಹಾಭಿಷೇಕಕ್ಕೆ ಬಂದಿದ್ದ ಭಕ್ತರು ಮತ್ತು ಗೌರವಾನ್ವಿತ ಅತಿಥಿಗಳಿಗೆ ತಲಾ 25 ಗ್ರಾಂ ತೂಕದ ಒಂದು ಲಕ್ಷ ತಿರುಪತಿ ಲಡ್ಡುಗಳನ್ನು ವಿತರಿಸಲಾಗಿತ್ತು.ಅಯೋಧ್ಯೆಯಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾಪನೆಯಲ್ಲಿ ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಇತರ ವಿಶೇಷ ಆಹ್ವಾನಿತರು ಭಾಗವಹಿಸಿದ್ದರು.
ವಿಶ್ವವಿಖ್ಯಾತ ವೆಂಕಟೇಶ್ವರ ದೇವಸ್ಥಾನದ ವ್ಯವಹಾರಗಳನ್ನು ನಿರ್ವಹಿಸುತ್ತಿರುವ ತಿರುಮಲ ತಿರುಪತಿ ದೇವಸ್ಥಾನಮ್ (ಟಿಟಿಡಿ) ರಾಮಮಂದಿರ ಉದ್ಘಾಟನಾ ಸಮಾರಂಭದ ಸಂದರ್ಭದಲ್ಲಿ ಒಂದು ಲಕ್ಷ ಶ್ರೀವಾರಿ ಲಡ್ಡು ಪ್ರಸಾದವನ್ನು ವಿತರಿಸುವುದಾಗಿ ಟಿಟಿಡಿ ಘೋಷಿಸಿತ್ತು.
ಪ್ರತಿಕಾಗೋಷ್ಠಿಯೊಂದರಲ್ಲಿ ಟಿಟಿಡಿಯ ಕಾರ್ಯನಿರ್ವಾಹಕ ಅಧಿಕಾರಿ ಎ.ವಿ.ಧರ್ಮಾ ರೆಡ್ಡಿ, ಅಯೋಧ್ಯೆಯಲ್ಲಿ ನಡೆಯುವ ಸಮಾರಂಭದಲ್ಲಿ ಭಕ್ತರು ಮತ್ತು ವಿವಿಐಪಿಗಳಿಗೆ ಸದ್ಭಾವನಾ ಸೂಚಕವಾಗಿ ಒಂದು ಲಕ್ಷ 25 ಗ್ರಾಂ ಲಡ್ಡುಗಳನ್ನು ವಿತರಿಸುವುದಾ ತಿಳಿಸಿದ್ದರು.
ಸನಾತನ ಧರ್ಮದ ಎಲ್ಲಾ ಅನುಯಾಯಿಗಳಿಗೆ ಪಟ್ಟಾಭಿಷೇಕ ಸಮಾರಂಭವು ಐತಿಹಾಸಿಕ ಕ್ಷಣವಾಗಿದೆ. ಟಿಟಿಡಿಯ ಪ್ರಾಥಮಿಕ ಉದ್ದೇಶವು ಹಿಂದೂ ಧರ್ಮ, ಸಂಸ್ಕೃತಿ ಮತ್ತು ಮೌಲ್ಯಗಳ ಪ್ರಚಾರವಾಗಿದ್ದು, ರಾಮ ಜನಭೂಮಿ ಪೂಜೆಯಲ್ಲಿ ಭಾಗವಹಿಸಲು ನಮಗೆ ಅವಕಾಶ ಸಿಕ್ಕಿರುವುದು ನಮಗೆ ಗೌರವವಾಗಿದೆ ಎಂದು ಹೇಳಿದರು.