Friday, September 20, 2024
Homeರಾಷ್ಟ್ರೀಯ | Nationalಹಿಂಸಾಚಾರ ಕೈಬಿಟ್ಟು ಶರಣಾಗುವಂತೆ ನಕ್ಸಲರಿಗೆ ಅಮಿತ್ ಶಾ ಎಚ್ಚರಿಕೆ

ಹಿಂಸಾಚಾರ ಕೈಬಿಟ್ಟು ಶರಣಾಗುವಂತೆ ನಕ್ಸಲರಿಗೆ ಅಮಿತ್ ಶಾ ಎಚ್ಚರಿಕೆ

Amit Shah asks Naxals to lay down arms or face action

ನವದೆಹಲಿ,ಸೆ.20- ಹಿಂಸಾಚಾರ ಕೈಬಿಟ್ಟು ಶರಣಾಗಿ. ಇಲ್ಲದಿದ್ದರೆ ಕಠಿಣ ಕಾರ್ಯಾಚರಣೆ ನಡೆಸಿ ಹಿಂಸೆಗೆ ಇತಿಶ್ರೀ ಹಾಡಿ ಶಾಂತಿ ಸ್ಥಾಪಿಸಲಾಗುವುದು ಎಂದು ಕೇಂದ್ರ ಗೃಹಸಚಿವ ಅಮಿತ್ ಶಾ ನಕ್ಸಲರಿಗೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.

ಛತ್ತೀಸ್ಗಢದಲ್ಲಿ ನಕ್ಸಲ್ ಹಿಂಸಾಚಾರಕ್ಕೊಳಗಾದ 55 ಸಂತ್ರಸ್ತ ಕುಟುಂಬಗಳನ್ನು ಭೇಟಿ ಮಾಡಿ ಮಾತನಾಡಿದ ಅವರು, 2026ರೊಳಗೆ ಮಾವೋವಾದಿ ಸಿದ್ಧಾಂತವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲಾಗುವುದು ಎಂದು ಹೇಳಿದರು.

ದೇಶದಲ್ಲಿ ನಕ್ಸಲ್ ಹಿಂಸಾಚಾರ ಮತ್ತು ಸಿದ್ಧಾಂತಗಳನ್ನು ಪೂರ್ಣವಾಗಿ ನಾಶ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಹಾಗಾಗಿ ಹಿಂಸಾಚಾರವನ್ನು ನಿಲ್ಲಿಸುವಂತೆ ನಾನು ನಕ್ಸಲರಿಗೆ ಮನವಿ ಮಾಡುತ್ತೇನೆ. ಈಶಾನ್ಯ ರಾಜ್ಯಗಳಲ್ಲಿ ಉಗ್ರರು ಶರಣಾದಂತೆ ನಿಮ ಶಸಾ್ತ್ರಸ್ತ್ರಗಳನ್ನೂ ಕೆಳಗಿಟ್ಟು ಬಂದು ಶರಣಾಗಬೇಕು. ಒಂದು ವೇಳೆ ನಮ ಮನವಿಗೆ ಕಿವಿಗೊಡದೇ ಹೋದರೆ, ಸಂಪೂರ್ಣ ನಿರ್ನಾಮದ ಕಾರ್ಯಾಚರಣೆಯನ್ನು ಶೀಘ್ರದಲ್ಲೇ ಆರಂಭಿಸುತ್ತೇವೆ ಎಂದು ಎಚ್ಚರಿಸಿದರು.

ಈ ಹಿಂದೆ ದೇಶದ ಹಲವೆಡೆ ನಕ್ಸಲಿಸಂ ಹರಡಿತ್ತು. ಇದೀಗ ಕೇಂದ್ರ ಸರ್ಕಾರ ಇದರ ಪ್ರಭಾವವನ್ನು ಯಶಸ್ವಿಯಾಗಿ ಹತ್ತಿಕ್ಕುತ್ತಿದೆ. ಸದ್ಯ ಕೆಲವೇ ಪ್ರದೇಶಗಳು ಇದರಿಂದ ಬಾಧಿತವಾಗಿವೆ. ಮವೋಗಳ ವಿರುದ್ಧದ ಕಾರ್ಯಾಚರಣೆಯಲ್ಲಿ ರಕ್ಷಣಾ ಸಿಬ್ಬಂದಿ ಗಣನೀಯ ಸಾಧನೆ ಮಾಡಿದ್ದಾರೆ.

ಛತ್ತೀಸ್?ಗಢದ ನಾಲ್ಕು ಜಿಲ್ಲೆಗಳಲ್ಲಿ ಮಾತ್ರ ಈ ಸಮಸ್ಯೆಗಳಿವೆ. ಒಮೆ ನೇಪಾಳದ ಪುಷ್ಪಪತಿನಾಥ್ನಿಂದ ಆಂಧ್ರ ಪ್ರದೇಶದ ತಿರುಪತಿವರೆಗೂ ಮಾವೋವಾದಿಗಳು ಕಾರಿಡಾರ್ ಸ್ಥಾಪಿಸಲು ಯೋಜನೆ ರೂಪಿಸಿದ್ದರು. ಆದರೆ, ಮೋದಿ ಸರ್ಕಾರ ಅದನ್ನು ನಾಶ ಮಾಡಿತು ಎಂದರು.

ಛತ್ತೀಸ್ಗಢದಲ್ಲಿ ನಕ್ಸಲ್ ಹಿಂಸಾಚಾರದ ಪರಿಣಾಮಕ್ಕೆ ಒಳಗಾಗಿರುವ ಜನರ ಕಲ್ಯಾಣಕ್ಕಾಗಿ ಶೀಘ್ರದಲ್ಲಿ ಕೇಂದ್ರ ಗೃಹ ಸಚಿವಾಲಯ ಯೋಜನೆ ರೂಪಿಸಲಿದೆ. ಇದು ರಾಜ್ಯ ಸರ್ಕಾರದೊಂದಿಗೆ ಕಾರ್ಯ ನಿರ್ವಹಿಸುತ್ತದೆ. ಸಂತ್ರಸ್ತರಿಗೆ ಉದ್ಯೋಗ, ಆರೋಗ್ಯ ಸೇವೆ ಮತ್ತು ಇತರೆ ಅಂಶಗಳೂ ಸೇರಿದಂತೆ ಎಲ್ಲ ರೀತಿಯ ಕಲ್ಯಾಣ ಮಾದರಿಗಳನ್ನು ನಡೆಸುವ ಮೂಲಕ ಸಹಾಯ ಮಾಡಲಾಗುವುದು ಎಂದು ಅಮಿತ್ ಶಾ ಭರವಸೆ ನೀಡಿದ್ದಾರೆ.

RELATED ARTICLES

Latest News